ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಆರ್​ಸಿಬಿಗೆ ದೊಡ್ಡ ಶಾಕ್: ಜೋಶ್ ಹ್ಯಾಜ್ಲೆವುಡ್ ಐಪಿಎಲ್​ನಿಂದ ಔಟ್

May 21, 2023
1:39 PM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡ ಸೆಣೆಸಾಟ ನಡೆಸಲಿದೆ. ಪ್ಲೇ ಆಫ್​ಗೆ ಲಗ್ಗೆಯಿಡಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕು. ಆದರೆ, ಇದರ ನಡುವೆ ಫಾಫ್ ಪಡೆಗೆ ದೊಡ್ಡ ಆಘಾತ ಉಂಟಾಗಿದೆ.
ಆರ್​ಸಿಬಿ ಹಾಗೂ ಜಿಟಿ ಕದನ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಬೆಂಗಳೂರು ತಂಡಕ್ಕೆ ಹಿನ್ನಡೆ ಆಗಿದೆ. ತಂಡದ ಸ್ಟಾರ್ ಬೌಲರ್ ಜೋಶ್ ಹ್ಯಾಜ್ಲೆವುಡ್ ಇಂದಿನ ಪಂದ್ಯ ಸೇರಿದಂತೆ ಐಪಿಎಲ್​ನಿಂದ ಹೊರಬಿದ್ದಿದ್ದಾರೆ.
ಆರ್​ಸಿಬಿ ಹಾಗೂ ಜಿಟಿ ಕದನ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಬೆಂಗಳೂರು ತಂಡಕ್ಕೆ ಹಿನ್ನಡೆ ಆಗಿದೆ. ತಂಡದ ಸ್ಟಾರ್ ಬೌಲರ್ ಜೋಶ್ ಹ್ಯಾಜ್ಲೆವುಡ್ ಇಂದಿನ ಪಂದ್ಯ ಸೇರಿದಂತೆ ಐಪಿಎಲ್​ನಿಂದ ಹೊರಬಿದ್ದಿದ್ದಾರೆ.
ಪಾದದ ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಹ್ಯಾಜ್ಲೆವುಡ್ ಸಂಪೂರ್ಣ ಟೂರ್ನಿಯಿಂದ ಔಟ್ ಆಗಿದ್ದು, ಇಂದು ಅಥವಾ ನಾಳೆ ತವರಿಗೆ ಮರಳಲಿದ್ದಾರೆ ಎಂದು ವರದಿ ಆಗಿದೆ. ಆರ್​ಸಿಬಿಯ ಪ್ರಮುಖ ಬೌಲರ್ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ನಷ್ಟ ಎಂದೇ ಹೇಳಬಹುದು.
ಐಪಿಎಲ್ 2023 ಟೂರ್ನಿ ಆರಂಭಕ್ಕೂ ಮುನ್ನವೇ ಜೋಶ್ ಇಂಜುರಿಗೆ ತುತ್ತಾಗಿದ್ದರು. ಇವರು ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಕೂಡ ಹೊರಬಿದ್ದಿದ್ದರು. ಬಳಿಕ ಆರ್​ಸಿಬಿ ಆರಂಭದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.
ಐಪಿಎಲ್ 2023 ಟೂರ್ನಿ ಆರಂಭಕ್ಕೂ ಮುನ್ನವೇ ಜೋಶ್ ಇಂಜುರಿಗೆ ತುತ್ತಾಗಿದ್ದರು. ಇವರು ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಕೂಡ ಹೊರಬಿದ್ದಿದ್ದರು. ಬಳಿಕ ಆರ್​ಸಿಬಿ ಆರಂಭದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.
ಹ್ಯಾಜ್ಲೆವುಡ್ ಇಂಜುರಿಯಿಂದ ಸಂಪೂರ್ಣ ಗುಣಮುಖರಾಗಿ ಆರ್​ಸಿಬಿಯ ಎಂಟು ಪಂದ್ಯ ಮುಗಿದ ಬಳಿಕ ಕಣಕ್ಕಿಳಿದರು. ಆದರೆ, ಪುನಃ ಇವರಿಗೆ ಕಾಲಿನ ಹಿಂಭಾಗ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಇವರು ಆಡಿರಲಿಲ್ಲ. ಇದೀಗ ಸಂಪೂರ್ಣ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಐಪಿಎಲ್ 2023 ಟೂರ್ನಿಯುದ್ದಕ್ಕೂ ರಾಯಲ್ ಚಾಲೆಂಜರ್ಸ್ ಇಂಜುರಿಯನ್ನು ಅನುಭವಿಸುತ್ತಲೇ ಬಂದಿದೆ. ಟೂರ್ನಿ ಆರಂಭವಾಗಿ ಕೆಲ ಪಂದ್ಯದ ಬಳಿಕ ಗಾಯದಿಂದ ಡೇವಿಡ್ ವಿಲ್ಲೆ ಹಾಗೂ ರೀಸೆ ಟೋಪ್ಲಿ ನಿರ್ಗಮಿಸಿದರೆ ಈಗ ಜೋಶ್ ಹ್ಯಾಜ್ಲೆವುಡ್ ತವರಿಗೆ ಮರಳಲು ಸಜ್ಜಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಇಂದು ಸಂಜೆ 7.30 ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಟಾಸ್ 7 ಗಂಟೆಗೆ ನಡೆಯಲಿದ್ದು, ಆರ್​ಸಿಬಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಇಂದು ಸಂಜೆ 7.30 ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಟಾಸ್ 7 ಗಂಟೆಗೆ ನಡೆಯಲಿದ್ದು, ಆರ್​ಸಿಬಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ
ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ
May 23, 2025
10:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group