ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು | ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಗರ ಪರ್ಯಟನೆ

September 23, 2025
7:36 AM

ಬೆಂಗಳೂರು ನಗರದಲ್ಲಿ  ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಬೆಂಗಳೂರು ಪೊಲೀಸರು  ವಿಶೇಷ ಕಾರ್ಯಾಚರಣೆ  ಕೈಗೊಂಡಿದ್ದಾರೆ.   ರಾತ್ರಿ  ಬೆಂಗಳೂರು ನಗರ ಪೊಲೀಸ್ ಆಯುಕ್ತ  ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ  ಪೊಲೀಸರು  ನಗರ ಪರ್ಯಟನೆ  ಕೈಗೊಂಡಿದ್ದರು. ಆಯಾಕಟ್ಟಿನ ಸ್ಥಳಗಳಲ್ಲಿ  ನಾಕಾಬಂಧಿ ಹಾಕಿ  ವಾಹನಗಳ ತಪಾಸಣೆ  ನಡೆಸಲಾಯಿತು. ವಿವಿಧ ತಂಡಗಳಾಗಿ , ಪೊಲೀಸರು  ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ದು, ವಿಶೇಷವಾಗಿತ್ತು. ಆಯುಕ್ತ  ಸೀಮಂತ್ ಕುಮಾರ್ ಸಿಂಗ್ ಅವರು  ಗಾಂಧಿ ನಗರದಲ್ಲಿರುವ  ನಿರ್ಭಯಾ ಸಖಿ  ಕೇಂದ್ರಕ್ಕೆ ಭೇಟಿ ನೀಡಿ,  ಪರಿಶೀಲನೆ  ನಡೆಸಿದರು. ಬೆಂಗಳೂರಿನ  ಜನರಲ್ಲಿ  ಆತ್ಮಸ್ಥೈರ್ಯ ಹೆಚ್ಚಿಸಲು  ಹಾಗೂ  ಧೈರ್ಯ ತುಂಬಿಸಲು ಈ ವಿಶೇಷ  ಕಾರ್ಯಾಚರಣೆಯನ್ನು  ಕೈಗೊಳ್ಳಲಾಗಿದ್ದು,  ಮಾದಕ ವಸ್ತುಗಳ ಸಾಗಣೆ ಮಾಡುವವರು ಕಾನೂನು ಉಲ್ಲಂಘನೆ ಮಾಡುವವರು  , ರೌಡಿ ಚಟುವಟಿಕೆಗಳನ್ನು ನಡೆಸುವವರಿಗೆ  ಪೊಲೀಸರು ಕಡಿವಾಣ ಹಾಕಲಿದ್ದಾರೆ ಎಂದು  ಈ ಸಂದರ್ಭದಲ್ಲಿ  ಪೊಲೀಸ್ ಆಯುಕ್ತರು ತಿಳಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ
ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror