ಬೆಳೆ ವಿಮೆ – ಪರದಾಟಕ್ಕೆ ಸಿಗದ ಮುಕ್ತಿ | ಸರಳ ಪ್ರಕ್ರಿಯೆಗೆ ಸರಕಾರ ಏಕೆ ಸಜ್ಜಾಗುತ್ತಿಲ್ಲ ? |

June 23, 2021
10:46 PM

ಒಂದೇ ಸಾಲಿನ ವಿವರ ಹೀಗಿದೆ, 

Advertisement
Advertisement
Advertisement
Advertisement
ಬೆಳೆ ವಿಮೆಯಲ್ಲಿ ರಾಜ್ಯ ಸರಕಾರ 3ನೇ ಆಪ್ಷನ್‌ ತಕ್ಷಣವೇ ಮಾಡಿಕೊಟ್ಟರೆ ಅನೇಕ ರೈತರಿಗೆ ಅನುಕೂಲವಾದೀತು. ಜೂ.30 ರ ಒಳಗಾಗಿ ಬೆಳೆ ವಿಮೆ ನೋಂದಣಿಯಾಗಬೇಕಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

 

Advertisement

ಬೆಳೆ ವಿಮೆ ಕಡ್ಡಾಯವಾಗುತ್ತಿದೆ. ಹಳ್ಳಿಯ ಕೃಷಿಕರೂ ಈಗ ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಅದು ಅಗತ್ಯವಾಗಿತ್ತಿದೆ. ಇದೀಗ  ಜೂನ್‌ ಅಂತ್ಯದ ಒಳಗೆ ಎಲ್ಲಾ ಬೆಳೆ ವಿಮೆ ಮಾಡಿಸಬೇಕು. ಹೀಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತುರ್ತು ಕೆಲಸದಲ್ಲಿವೆ. ಅದರ ಜೊತೆ ಜೊತೆಗೇ ನೆಟ್ವರ್ಕ್‌ ಸಮಸ್ಯೆ, ಸರ್ವರ್‌ ಸಮಸ್ಯೆ. ಹೀಗಿದ್ದರೂ ಇಂದಿನ ಆನ್‌ ಲೈನ್‌ ವ್ಯವಸ್ಥೆಯಲ್ಲಿ ಸರಳ ವ್ಯವಸ್ಥೆಗೆ ಏಕೆ ಸರಕಾರ ಮುಂದಾಗುತ್ತಿಲ್ಲ.?

Advertisement

ಬೆಳೆ ವಿಮೆಯ ದಾಖಲಾತಿ ಮಾಡುವ ವಿಧಾನದಲ್ಲಿ  ರಾಜ್ಯದ ವೆಬ್‌ ಪೋರ್ಟಲ್‌ ನ್ಯಾಶನಲ್‌ ಪೋರ್ಟಲ್‌ ಗೆ ಸೇರಿಲ್ಲ  , ಹೀಗಾಗಿ ಸದ್ಯ ಕರ್ನಾಟಕದ ರೈತರು ಪ್ರಾಥಮಿಕ ಸಹಕಾರಿ ಸಂಘಗಗಳು ಅಥವಾ ಸಿ ಎಸ್‌ ಸೆಂಟರ್‌ ಗಳಲ್ಲಿ  ಮಾತ್ರವೇ ಬೆಳೆ ವಿಮೆ ಮಾಡಿಸಬಹುದಾಗಿದೆ. ಇದೇ ವೆಬ್ಸೈಟ್‌ ನಲ್ಲಿ  ಸ್ವತ: ರೈತರೇ ಮನೆಯಿಂದ ಅಥವಾ ಸೈಬರ್‌ ಸೆಂಟರ್ ಗಳಿಂದ ಬೆಳೆ ವಿಮೆ ಮಾಡಿಸುವ ಅವಕಾಶ ಇದೆ. ಆದರೆ ಈ ಅವಕಾಶವನ್ನು  ಈಗ ಮಾಡಲಾಗಿಲ್ಲ. ಇದರಿಂದಾಗಿ ನೇರವಾಗಿ ರೈತರಿಗೆ ಬೆಳೆವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಪರದಾಟ ನಡೆಸುತ್ತಿವೆ, ಈ ಪರದಾಟ ತಪ್ಪಿಸಲು ಸರಕಾರ ಮನಸು ಮಾಡಬಹುದಾಗಿದೆ. ಸದ್ಯ ಕರ್ನಾಟಕ ಹಾಗೂ ಗುಜರಾತ್‌ ಮಾತ್ರವೇ ಈ ಅವಕಾಶದಿಂದ ವಂಚಿತವಾಗಿದೆ, ಉಳಿದ ಎಲ್ಲಾ ರಾಜ್ಯಗಳಲ್ಲಿ ನೇರವಾಗಿ ರೈತರೇ ಬೆಳೆವಿಮೆ ಪಾವತಿ ಮಾಡುವ ಅವಕಾಶ ಕೊಡಲಾಗಿದೆ.

ಈಗ ಸಹಕಾರಿ ಸಂಘಗಳಿಂದ ಡಿಸಿಸಿ ಬ್ಯಾಂಕ್‌ ಮೂಲಕ ರಾಜ್ಯಕ್ಕೆ  ಲಭ್ಯವಾಗಿ ನಂತರ ಕೇಂದ್ರದ ಪೋರ್ಟಲ್‌ ಗೆ ಬೆಳೆವಿಮೆ ದಾಖಲಾಗುತ್ತದೆ. ಒಂದು ವೇಳೆ ರೈತರಿಗೇ ಅವಕಾಶ ನೀಡಿದರೆ ನೇರವಾಗಿ ಕೇಂದ್ರದ ಪೋರ್ಟಲ್‌ ಗೆ ಬೆಳೆವಿಮೆ ಪಾವತಿ ಮಾಡಲು ಸಾಧ್ಯವಾಗುತ್ತದೆ. ಆಗ ಬಹುಪಾಲು ಗೊಂದಲ ನಿವಾರಣೆಯಾಗಲು ಸಾಧ್ಯವಿದೆ, ಜೂನ್.‌30  ರ ಗೊಂದಲವೂ ದೂರವಾಗಲಿದೆ. ಈ ಬಗ್ಗೆ ತಕ್ಷಣವೇ ಗಮನಹರಿಸಬೇಕಿದೆ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ
February 27, 2025
12:10 AM
by: The Rural Mirror ಸುದ್ದಿಜಾಲ
ಈಶಾ ಫೌಂಡೇಷನ್ ನಿಂದ ಶಿವರಾತ್ರಿ | ಆತ್ಮ ಜಾಗೃತಿಯ ರಾತ್ರಿ, ಆತ್ಮಕ್ಕೆ ಮೂಲ ಆಧಾರ
February 26, 2025
11:52 PM
by: The Rural Mirror ಸುದ್ದಿಜಾಲ
ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ
February 26, 2025
11:45 PM
by: The Rural Mirror ಸುದ್ದಿಜಾಲ
ಮಹಾಕುಂಭದಿಂದ ನಿರ್ಗಮಿಸಲು ವಿಶೇಷ ರೈಲು ಸಂಚಾರ | ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲು ಓಡಾಟ
February 26, 2025
11:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror