ಮುಂಗಾರು ಮಳೆಯ ಪೂರ್ವದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮೂಲಕ ಕೃಷಿಕರು ಬೆಳೆ ವಿಮೆಯ ಹಣ ಪಾವತಿ ಮಾಡಿದ್ದರು. ಇದೀಗ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಳೆಯಾದ ಕಾರಣದಿಂದ ಪರಿಹಾರದ ಹಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರ ಖಾತೆಗೆ ಜಮೆಯಾಗಲು ಆರಂಭಗೊಂಡಿದೆ. ಕೇಂದ್ರ ಸರ್ಕಾರವು ಕೃಷಿಕರ ಬೆಳೆ ಭದ್ರತೆಗಾಗಿ ವಿಮಾ ಕಂಪನಿಗಳ ಮೂಲಕ ಬೆಳೆ ವಿಮೆಯನ್ನು ರೈತರಿಂದ ಮಾಡಿಸಿತ್ತು. ಈ ಬಾರಿ ಕೂಡಾ ಬೆಳೆ ವಿಮೆಗೆ ಕೃಷಿಕರು ಸಹಕಾರಿ ಸಂಘಗಳ ಮೂಲಕ ಅಥವಾ ಖಾಸಗಿಯಾಗಿ ಹಣ ಪಾವತಿ ಮಾಡಿದ್ದರು. ಇದೀಗ ಹವಾಮಾನ ಆಧಾರಿತವಾಗಿ ಬೆಳೆ ವಿಮೆಗೆ ಹಣ ಪಾವತಿ ಆರಂಭವಾಗಿದೆ. ರೈತರು ಬೆಳೆ ವಿಮೆಯ ಸಂದರ್ಭ ನೀಡಿದ್ದ ಬ್ಯಾಂಕ್ ಖಾತೆಗೆ ಅಥವಾ ಆಧಾರ್ ಜೊತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ರೈತರಿಗೆ ಹಣ ಜಮೆಯಾದ ತಕ್ಷಣವೇ ಮೆಸೇಜ್ ಬರುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel