ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಕಾರ ತಕ್ಷಣ ಜಾರಿ ಮಾಡುವಂತೆ ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಸರಕಾರವನ್ನು ಒತ್ತಾಯಿಸಿದ್ದಾರೆ.
Advertisement
ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2016ರಿಂದ ಆರಂಭಗೊಂಡಿರುವ ಬೆಳೆ ವಿಮೆಯಿಂದ ಕೃಷಿಕರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಜೂ.30ರೊಳಗೆ ಪ್ರೀಮಿಯಂ ಪಾವತಿಯಾಗಿರುತ್ತದೆ. ಆದರೆ ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಕ್ಕೆ ಪ್ರೀಮಿಯಂ ಪಾವತಿಗೆ ಯಾವುದೇ ಆದೇಶಗಳು ಬಂದಿಲ್ಲ. ಹೀಗಾಗಿ ಸರಕಾರ ವಿಳೆವಿಮೆ ಪಾವತಿಗೆ ಸಹಕಾರಿ ಸಂಘಗಳಿಗೆ ತಕ್ಷಣ ಆದೇಶ ನೀಡಬೇಕು. ವಿಳಂಬವಾದರೆ ಸಹಕಾರಿ ಸಂಘಗಳಿಗೂ ಕೆಲಸದ ಒತ್ತಡಗಳು ಹೆಚ್ಚಾಗುತ್ತವೆ ಎಂದು ಹೇಳಿದರು
Advertisement
ಸಹಕಾರಿ ಯೂನಿಯನ್ ನಿರ್ದೇಶಕ ವಿಷ್ಣು ಭಟ್ ,ಸಹಕಾರಿ ಯೂನಿಯನ್ ನಿರ್ದೇಶಕರಾದ ದಯಾನಂದ ಕುರುಂಜಿ, ಶಾರದಾ ವಿ. ಶೆಟ್ಟಿ, ಸಹಕಾರಿ ಯೂನಿಯನ್ ಕಾರ್ಯದರ್ಶಿ ವಾಸುದೇವ ನಾಯಕ್ ಕೇರ್ಪಳ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement