ರೈತರ ನೆರವಿಗಾಗಿ ಇರುವ ಬೆಳೆ ವಿಮೆ ಯೋಜನೆ | ಈ ಬಗ್ಗೆ ರೈತರಿಗೆ ಅನುಮಾನ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ – ಕೃಷಿ ಸಚಿವ ಚಲುವರಾಯಸ್ವಾಮಿ

July 11, 2024
12:16 PM

ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ(Karnataka) ರೈತರ(Farmers) ಹಿತ ಕಾಪಾಡುವ ಸಾಲ ಸೌಲಭ್ಯ(Loan Facility), ಬೆಳೆ ವಿಮೆ(Crop insurance), ಸಬ್ಸಿಡಿ(Subsidy) ದರದಲ್ಲಿ ಕೃಷಿ ಯಂತ್ರೋಪಕರಣಗಳ(Agricultural instrument) ಸೌಲಭ್ಯ ಎಲ್ಲ ಇದೆ. ಆದರೆ ಕೆಲವೊಂದು ಸೌಲಭ್ಯಗಳು ರೈತರಿಗೆ ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ರೈತರ ನೆರವಿಗಾಗಿ ಸರ್ಕಾರ(Govt) ರೂಪಿಸಿರುವ ಬೆಳೆ ವಿಮೆ ಯೋಜನೆಯ(Crop Insurance Scheme) ಸಂಪೂರ್ಣವಾಗಿ ಫಲ ಕೃಷಿಕರಿಗೆ ಹೋಗುತ್ತಿಲ್ಲ, ಹಾಗಾಗಿ ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ ಎಲ್ಲರ ಅನುಮಾನಗಳನ್ನು ಸಂಪೂರ್ಣವಾಗಿ ಬಗೆಹರಿಸಿ ಎಂದು ಕೃಷಿ ಸಚಿವ(Agricultural Minister) ಎನ್. ಚಲುವರಾಯಸ್ವಾಮಿ(N Chaluvaraya Swami) ನಿರ್ದೇಶನ ನೀಡಿದ್ದಾರೆ.

Advertisement

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ಬೀಜ ನಿಗಮದ 313ನೇ ನಿರ್ದೇಶಕ ಮಂಡಳಿ ಸಭೆ ನಡೆಸಿದ ಸಚಿವರು, ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರ ಇಲ್ಲವೇ ಇಲ್ಲ. ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವು ರೈತರು, ಜನಪ್ರತಿನಿಧಿಗಳಲ್ಲಿರುವ ಅನುಮಾನಗಳನ್ನ ವ್ಯವಸ್ಥಿತವಾಗಿ ಮನವರಿಕೆ ಮಾಡಿಕೊಟ್ಟು ಬಗೆಹರಿಸಬೇಕು. ಇದಕ್ಕಾಗಿ ಒಂದು ಸಭೆ ಆಯೋಜಿಸುವಂತೆ ಚಲುವರಾಯಸ್ವಾಮಿ ಸೂಚಿಸಿದರು.

ತಳ ಹಂತದಿಂದ ಮೇಲುಮಟ್ಟದವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿ ಬೆಳೆ ವಿಮೆ ಕಂಪನಿಗಳಿಂದ ಒಂದು ಸಣ್ಣ ಅನುಕೂಲವನ್ನೂ ಪಡೆಯುತ್ತಿಲ್ಲ. ಆದರೂ, ಮುಂದೆಯೂ ಸಹ ಯಾವುದೇ ಸಂದರ್ಭದಲ್ಲಿಯೂ ನಡೆಯಬಾರದು ಎಂದು ಕೃಷಿ ಸಚಿವರು ತಾಕೀತು ಮಾಡಿದರು. ಇದೇ ವೇಳೆ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಭುಕುಮಾರ್ ಮತ್ತು ಆಯುಕ್ತ ವೈ.ಎಸ್. ಪಾಟೀಲ್ ಅವರು, ಬೆಳೆ ಸಮೀಕ್ಷೆ ಕೇವಲ ಕೃಷಿ ಇಲಾಖೆಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯಿಂದ ನಡೆಯುತ್ತಿದ್ದು, ಯಾವುದೇ ಲೋಪಗಳಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ಬೀಜ ನಿಗಮ ಇನ್ನಷ್ಟು ಕೃಷಿಗೆ ಪೂರಕ ಯೋಜನೆಗಳೊಂದಿಗೆ ಕೆಲಸ ಮಾಡಬೇಕು. ಮದ್ಯವರ್ತಿಗಳಿಗೆ ಅವಕಾಶ ನೀಡದೇ ಲಾಭದ ರೈತರ ಪಾಲು ಸಂಪೂರ್ಣ ನೇರ ವರ್ಗಾವಣೆಯಾಗಬೇಕು ಎಂದು ಸಚಿವರು ಹೇಳಿದರು.ನಿಗಮದ ಸೇವೆಯಲ್ಲಿ ಗುಣಾತ್ಮಕ ಬದಲವಣೆಯಾಗಬೇಕು ಲಾಭ ಗಳಿಕೆಯೊಂದೇ ಮಾನದಂಡವಾಗದೇ ಸೇವಾರ್ಪತೆ, ಧಕ್ಷತೆಯೂ ಬೇಕು ಎಂದು ಸಲಹೆ ನೀಡಿದರು‌.

ಅಕ್ಟೋಬರ್‌ ನಲ್ಲಿ ಚುನಾವಣೆ : ಇದೇ ವೇಳೆ ನಿಗಮಕ್ಕೆ ಬೆಳೆಗಾರ ಪ್ರತಿನಿಧಿಗಳ ಆಯ್ಕೆ ನಡೆಯುವ ಚುನಾವಣೆಯಲ್ಲಿ ಅಕ್ಟೋಬರ್ 15ರ ನಂತರ ನಡೆಸಲು ಕ್ರಮ ವಹಿಸುವಂತೆ ಸಚಿವರು ಹೇಳಿದರು. ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೇವರಾಜ್, ತೋಟಗಾರಿಕೆ ನಿರ್ದೇಶಕ ರಮೇಶ್, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಹೊನ್ನಲಿಂಗಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!
May 11, 2025
7:21 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ
May 10, 2025
7:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group