ಒಂದೇ ಸಾಲಿನ ವಿವರ ಹೀಗಿದೆ,
ಬೆಳೆ ವಿಮೆ ಕಡ್ಡಾಯವಾಗುತ್ತಿದೆ. ಹಳ್ಳಿಯ ಕೃಷಿಕರೂ ಈಗ ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಅದು ಅಗತ್ಯವಾಗಿತ್ತಿದೆ. ಇದೀಗ ಜೂನ್ ಅಂತ್ಯದ ಒಳಗೆ ಎಲ್ಲಾ ಬೆಳೆ ವಿಮೆ ಮಾಡಿಸಬೇಕು. ಹೀಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತುರ್ತು ಕೆಲಸದಲ್ಲಿವೆ. ಅದರ ಜೊತೆ ಜೊತೆಗೇ ನೆಟ್ವರ್ಕ್ ಸಮಸ್ಯೆ, ಸರ್ವರ್ ಸಮಸ್ಯೆ. ಹೀಗಿದ್ದರೂ ಇಂದಿನ ಆನ್ ಲೈನ್ ವ್ಯವಸ್ಥೆಯಲ್ಲಿ ಸರಳ ವ್ಯವಸ್ಥೆಗೆ ಏಕೆ ಸರಕಾರ ಮುಂದಾಗುತ್ತಿಲ್ಲ.?
ಬೆಳೆ ವಿಮೆಯ ದಾಖಲಾತಿ ಮಾಡುವ ವಿಧಾನದಲ್ಲಿ ರಾಜ್ಯದ ವೆಬ್ ಪೋರ್ಟಲ್ ನ್ಯಾಶನಲ್ ಪೋರ್ಟಲ್ ಗೆ ಸೇರಿಲ್ಲ , ಹೀಗಾಗಿ ಸದ್ಯ ಕರ್ನಾಟಕದ ರೈತರು ಪ್ರಾಥಮಿಕ ಸಹಕಾರಿ ಸಂಘಗಗಳು ಅಥವಾ ಸಿ ಎಸ್ ಸೆಂಟರ್ ಗಳಲ್ಲಿ ಮಾತ್ರವೇ ಬೆಳೆ ವಿಮೆ ಮಾಡಿಸಬಹುದಾಗಿದೆ. ಇದೇ ವೆಬ್ಸೈಟ್ ನಲ್ಲಿ ಸ್ವತ: ರೈತರೇ ಮನೆಯಿಂದ ಅಥವಾ ಸೈಬರ್ ಸೆಂಟರ್ ಗಳಿಂದ ಬೆಳೆ ವಿಮೆ ಮಾಡಿಸುವ ಅವಕಾಶ ಇದೆ. ಆದರೆ ಈ ಅವಕಾಶವನ್ನು ಈಗ ಮಾಡಲಾಗಿಲ್ಲ. ಇದರಿಂದಾಗಿ ನೇರವಾಗಿ ರೈತರಿಗೆ ಬೆಳೆವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಪರದಾಟ ನಡೆಸುತ್ತಿವೆ, ಈ ಪರದಾಟ ತಪ್ಪಿಸಲು ಸರಕಾರ ಮನಸು ಮಾಡಬಹುದಾಗಿದೆ. ಸದ್ಯ ಕರ್ನಾಟಕ ಹಾಗೂ ಗುಜರಾತ್ ಮಾತ್ರವೇ ಈ ಅವಕಾಶದಿಂದ ವಂಚಿತವಾಗಿದೆ, ಉಳಿದ ಎಲ್ಲಾ ರಾಜ್ಯಗಳಲ್ಲಿ ನೇರವಾಗಿ ರೈತರೇ ಬೆಳೆವಿಮೆ ಪಾವತಿ ಮಾಡುವ ಅವಕಾಶ ಕೊಡಲಾಗಿದೆ.
ಈಗ ಸಹಕಾರಿ ಸಂಘಗಳಿಂದ ಡಿಸಿಸಿ ಬ್ಯಾಂಕ್ ಮೂಲಕ ರಾಜ್ಯಕ್ಕೆ ಲಭ್ಯವಾಗಿ ನಂತರ ಕೇಂದ್ರದ ಪೋರ್ಟಲ್ ಗೆ ಬೆಳೆವಿಮೆ ದಾಖಲಾಗುತ್ತದೆ. ಒಂದು ವೇಳೆ ರೈತರಿಗೇ ಅವಕಾಶ ನೀಡಿದರೆ ನೇರವಾಗಿ ಕೇಂದ್ರದ ಪೋರ್ಟಲ್ ಗೆ ಬೆಳೆವಿಮೆ ಪಾವತಿ ಮಾಡಲು ಸಾಧ್ಯವಾಗುತ್ತದೆ. ಆಗ ಬಹುಪಾಲು ಗೊಂದಲ ನಿವಾರಣೆಯಾಗಲು ಸಾಧ್ಯವಿದೆ, ಜೂನ್.30 ರ ಗೊಂದಲವೂ ದೂರವಾಗಲಿದೆ. ಈ ಬಗ್ಗೆ ತಕ್ಷಣವೇ ಗಮನಹರಿಸಬೇಕಿದೆ.
ನೀರು ಕಲ್ಲಿಗಿಂತ ಮೆದುವಾದರೂ, ನಿರಂತರತೆಯಿಂದ ಕಲ್ಲನ್ನೂ ಕೊರೆಯಬಲ್ಲದು. ನಿರಂತರತೆಗೆ ಇರುವ ಶಕ್ತಿ ಅಪಾರ.…
ಸುಚನ್ಯ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ , | ಕ್ರಿಯೇಟಿವ್…
ಪೃಥ್ವಿ ಜಿ ಎಂ, 6 ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ |…
ಶರಾವತಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ…
ಕೇಂದ್ರ ಸರ್ಕಾರ ಕೃಷಿ ವಲಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಟ…
19.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…