ಅಕಾಲಿಕ ಮಳೆ | ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ |

October 17, 2024
7:27 PM

ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಭಾರೀ ಮಳೆಗೆ ಹಲವು ಜಿಲ್ಲೆಗಳಲ್ಲಿ ಬೆಳೆ ನಷ್ಟವಾಗಿದೆ. ಭತ್ತ, ಜೋಳ ಸೇರಿದಂತೆ ತರಕಾರಿ ಕೃಷಿಗೂ ಹಾನಿಯಾಗಿದೆ. 

Advertisement
Advertisement

ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಎಡಬಿಡದೆ ಬೀಳುತ್ತಿರುವ ಮಳೆಯಿಂದ ಬದ್ಧಿಪಲ್ಲಿ, ಪೆದ್ದೂರು  ಗ್ರಾಮಗಳಲ್ಲಿ ರೈತರ ಬೆಳೆ ಹಾನಿ ಆಗಿದ್ದು, ಸತತ ಮಳೆಯಿಂದ ಕಟಾವಿಗೆ ಬಂದಿರುವ ಭತ್ತ, ಟೊಮೊಟೋ ಹಾಗು ಇತರೆ ಬೆಳೆಗಳು ನೀರು ಪಾಲಾಗಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಟೊಮೊಟೊ ರೈತರು  ಕಂಗಾಲಾಗಿದ್ದು, ಪ್ರಸ್ತುತ 15 ಕೆ.ಜಿ ಬಾಕ್ಸ್ ಟೊಮೊಟೊ 600 ರಿಂದ 800 ರೂಪಾಯಿ ಮಾರಾಟವಾಗುತ್ತಿದೆ. ಆದರೆ ಮಳೆಯಿಂದ ಟೊಮೊಟೋ ನೆಲಕ್ಕೆ ಉದುರುತ್ತಿವೆ. ಅಲ್ಲದೆ ತೋಟಕ್ಕೆ ಕಪ್ಪು ಮಚ್ಚೆ ಹಾಗೂ ಗಜ್ಜಿ ರೋಗ ಹರಡುವ ಆತಂಕ ರೈತರಲ್ಲಿ ಮನೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿಗೆ ಸಮಸ್ಯೆ  ಎದುರಾಗಿದೆ. ತೋಟಗಾರಿಕೆ ಬೆಳೆಗಳಾದ ಟೊಮೊಟೋ, ತರಕಾರಿ ಬೆಳೆಗಳು, ಹೂವಿನ ತೋಟಗಳಲ್ಲಿ ನೀರು ನಿಂತಿದ್ದು, ಇದರಿಂದ ಫಸಲು ನಾಶವಾಗಿ ರೈತರು ಕಂಗಾಲಾಗಿದ್ದಾರೆ.

ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಒತ್ತಾಯ

ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬೇಳೆ-ಕಾಳುಗಳು, ಆಹಾರ ಧಾನ್ಯಗಳು, ಎಣ್ಣೆ ಕಾಳುಗಳು, ವಾಣಿಜ್ಯ ಬೆಳೆಗಳು, ತರಕಾರಿ, ಹೂ-ಹಣ್ಣು ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿವೆ. ಕೂಡಲೇ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ವಿತರಿಸಬೇಕೆಂದು  ವಿರೋಧ ಪಕ್ಷದ ನಾಯಕ ಆರ್.ಅಶೋಕ  ಆಗ್ರಹಿಸಿದ್ದಾರೆ

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ
ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ
July 26, 2025
9:09 PM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ
July 26, 2025
9:05 PM
by: The Rural Mirror ಸುದ್ದಿಜಾಲ
ಎತ್ತಿನಹೊಳೆ ಯೋಜನೆಗೆ ಅತ್ಯಂತ ಎತ್ತರದ ಮೇಲ್ಗಾಲುವೆ | ತುಮಕೂರು ಜಿಲ್ಲೆ ಚೇಳೂರು ಬಳಿ ನಿರ್ಮಾಣ
July 26, 2025
8:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group