ಕಾಡು ಪ್ರಾಣಿಗಳ ಕಾಟಕ್ಕೆ ಬೇಸತ್ತ ರೈತರು | ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಳ | ಸರ್ಕಾರದಿಂದ ರೈತರಿಗೆ ಸಹಾಯಹಸ್ತ |

February 17, 2023
1:42 PM

ರೈತ ಬೆಳೆದ ಬೆಳೆಯ ಫಸಲು ಕೈಗೆ ಬರುವವರೆಗೆ ಅದೆಷ್ಟೋ ನಷ್ಟಗಳನ್ನು ಅನುಭವಿಸುತ್ತಾನೆ. ಮಳೆ ಜಾಸ್ತಿಯಾದರೆ ಕೊಚ್ಚಿ ಕೊಂಡು ಹೋಗುತ್ತೆ, ಮಳೆ ಬಂದಿಲ್ಲಾಂದ್ರೆ ಬೆಳೆ ಒಣಗಿ ಹೋಗುತ್ತೆ. ಇದಲ್ಲದೆ ಕಾಡಂಚಿನ ಕೃಷಿ ಭೂಮಿಗೆ ಪ್ರಾಣಿಗಳ ಕಾಟ.. ಅದರಲ್ಲೂ ಆನೆ, ಕಾಡುಕೋಣ, ಹಂದಿ, ನವಿಲು, ಜಿಂಕೆ ಹೀಗೆ ಒಂದಾ ಎರಡಾ..? ತಮಗೆ ಬೇಕಾದ್ದನ್ನು ತಿಂದು ಬೆಳೆ ಹಾನಿ ಮಾಡಿ ಹೋಗುತ್ತವೆ. ಇದರ ಮುಂದೆ ರೈತ, ಏನು ಮಾಡಲಾಗದೆ ಕೈಕಟ್ಟಿ ಕೂರುವ ಪರಿಸ್ಥಿತಿ.

ಕೆಲವೊಂದು ಸಮಸ್ಯೆಗಳಿಗೆ ಸರ್ಕಾರ ಬೆಳೆವಿಮೆ ನೀಡುತಿತ್ತು. ಆದರೆ ಅದು ಅರೆ ಕಾಸಿನ ಮಜ್ಜಿಗೆ. ಇದೀಗ ರೈತರಿಗೆ ನಷ್ಟ ಆಗದ ರೀತಿಯಲ್ಲಿ ಬೆಳೆಗಳಿಗೆ ಬೆಳೆವಿಮೆ ನೀಡಲು ನಿರ್ಧರರಿಸಿದೆ. ಕಾಡು ಪ್ರಾಣಿಗಳ ಕಾಟದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೂ ಪರಿಹಾರ ನೀಡಲು ಸರ್ಕಾರ ಮುಂದೆ ಬಂದಿದೆ.

ಕಾಡು ಪ್ರಾಣಿಗಳು ಬೆಳೆ ನಾಶ ಮಾಡಿದರೆ ಸರ್ಕಾರ ನೀಡುತ್ತೆ ಪರಿಹಾರ :

ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ನೀಡುವ ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂಗಳಿಂದ 1 ಲಕ್ಷಕ್ಕೆ ಏರಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ರೈತರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಾಂತಾಗಿದೆ. ವನ್ಯ ಜೀವಿಗಳಿಂದ ಉಂಟಾಗೋ ಜಾನುವಾರುಗಳ ಪ್ರಾಣ ಹಾನಿ  ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ  ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ.

ಅಡಿಕೆ ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ, ಟೊಮ್ಯಾಟೋ, ಹಿಪ್ಪು ನೇರಳೆ ಬೆಳೆಗಳ ಪರಿಹಾರ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಅದೇ ರೀತಿ ಅಧಿಕಾರಿಗಳ ಸರ್ವೆ ಮುಖಾಂತರ ಸರ್ಕಾರದ ಗಮನಕ್ಕೆ ತಂದು ರೈತರಿಗೆ ನಷ್ಟದ ಪರಿಹಾರ ನೀಡಲು ಮುಂದಾಗಿದೆ. ವನ್ಯ ಜೀವಿಗಳ ಕಾಟದಿಂದ ಬೇಸತ್ತಿದ್ದ ರೈತರಿಗೆ ಸರ್ಕಾರದ ಈ ಯೋಜನೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror