ಬೆಳೆ ಪರಿವರ್ತನೆ | ರೋಗಗಳ ನಿಯಂತ್ರಣ-ಮಣ್ಣಿನ ಫಲವತ್ತತೆ ವೃದ್ಧಿ | ಅಡಿಕೆ ಹಳದಿ ಎಲೆರೋಗಕ್ಕೂ ಈ ಮಾದರಿ ಏಕೆ ಆಗದು..?

August 23, 2024
10:39 AM
ಬೆಳೆ ಪರಿವರ್ತನೆ ಮಾಡುವುದರಿಂದ ಹೆಚ್ಚಿನ ಮಣ್ಣಿನ ಫಲವತ್ತತೆ, ಕಡಿಮೆ ಕೀಟಗಳು ಮತ್ತು ಬೆಳೆ ರೋಗಗಳು ಮತ್ತು ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ ಎನ್ನುವುದು ಅಧ್ಯಯನ ವರದಿಗಳು ಹೇಳಿದೆ.

ಈಚೆಗೆ ಸುಳ್ಯದಲ್ಲಿ ಕಾರ್ಬನ್‌ ಕ್ರೆಡಿಟ್‌ ಹಾಗೂ ಮಣ್ಣಿನ ಫಲವತ್ತತೆ, ಸುಸ್ಥಿರ ಕೃಷಿಯ ಬಗ್ಗೆ ಪರಿಸರ ತಜ್ಞ, ಸುಸ್ಥಿರ ಕೃಷಿಯ ಬಗ್ಗೆ ಮಾತನಾಡುವ ದೆಹಲಿಯ ಅರುಣ್‌ ಕಶ್ಯಪ್‌ ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ, “ಒಂದೇ ಬೆಳೆ ದೀರ್ಘಕಾಲಿಕವಾಗಿ ಬೆಳೆದರೆ, ರೋಗಗಳ ಬಾಧೆ ಹೆಚ್ಚಾಗುವ ಸಾಧ್ಯತೆ ಇದೆ, ಕೃಷಿಯಲ್ಲಿ ಸಂಕಷ್ಟ, ಹೊಸ ಹೊಸ ರೋಗಗಳು, ಮಣ್ಣಿನ ಫಲವತ್ತತೆ ಕುಸಿಯುವ ಸಾಧ್ಯತೆ ಇದೆ” ಎಂದರು. ಮುಂದುವರಿಸುತ್ತಾ,” ಹಿಮಾಚಲ ಪ್ರದೇಶ, ಪಂಜಾಬ್‌ ಸೇರಿದಂತೆ ಬೇರೆ ಕೆಲವು ರಾಜ್ಯಗಳಲ್ಲಿ ಪ್ರತೀ ಬೆಳೆಯ ನಂತರ ಇನ್ನೊಂದು ಬೇರೆಯೇ ಬೆಳೆ ಮಾಡುತ್ತಾರೆ” ಎಂದರು.…..ಮುಂದೆ ಓದಿ….

Advertisement
Advertisement
Advertisement

ಈ ವೇಳೆ ಅಡಿಕೆಯ ಬಗ್ಗೆಯೂ ಹೊಂದಿಸಿಕೊಂಡಾಗ , ಇಲ್ಲೂ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ದೀರ್ಘಾವಧಿ ಬೆಳೆಯಾಗಿ ಕನಿಷ್ಟ 40-50 ವರ್ಷಗಳಿಂದ ಇದೆ. ಈಚೆಗೆ ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಸೇರಿದಂತೆ ಬೇರೆ ಬೇರೆ ರೋಗಗಳು ಕಾಣಿಸಿಕೊಂಡಿದೆ, ಹರಡುತ್ತಿದೆ. ಅಡಿಕೆಗೆ  ಧಾರಣೆ ಬರುತ್ತಿರುವಂತೆಯೇ ರೋಗಗಳೂ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲೂ ಬೆಳೆ ಪರಿವರ್ತನೆ ಮಾಡಿದರೆ ಹೇಗೆ? ಮಾಡಬಹುದೇ ? . ಆದರೆ. ಉತ್ತರದ ರಾಜ್ಯಗಳಲ್ಲಿ ಮಾಡಿದಂತೆ ಇಲ್ಲಿ ಸಾಧ್ಯವಿಲ್ಲ. ಅಡಿಕೆಯೇ ಇಲ್ಲಿ ಮುಖ್ಯ ಬೆಳೆ ಪರ್ಯಾಯವೇ ಇಲ್ಲದ ಕಾರಣದಿಂದ ಬೆಳೆ ಪರಿವರ್ತನೆ ತಕ್ಷಣಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಸಮಸ್ಯೆ ಆಗಿದೆ. ಇದಕ್ಕಾಗಿ ಈಗ ಇರುವ ವ್ಯವಸ್ಥೆಯಲ್ಲಿಯೇ ಇಲ್ಲಿ ಅಧ್ಯಯನ, ಸಂಶೋಧನೆಯನ್ನು ಮಾಡಲಾಗುತ್ತಿದೆ.

Advertisement

ಇದೇ ಸಲಹೆಯನ್ನು ಈ ಹಿಂದೆ ವಿಜ್ಞಾನಿಗಳೂ ನೀಡಿದ್ದರು. ಯಾರು ಬೆಳೆ ಪರಿವರ್ತನೆಗೆ ಆಸಕ್ತಿ ವಹಿಸುತ್ತಾರೋ ಅಂತಹವರ ತೋಟದಲ್ಲಿ ಅಡಿಕೆ ಹಳದಿ ಎಲೆರೋಗ ನಿವಾರಣೆ ಅಥವಾ ರೋಗ ನಿಯಂತ್ರಣ ಸಾಧ್ಯವಿದೆ. ಅಂದರೆ ಕನಿಷ್ಟ 10 ವರ್ಷಗಳ ಕಾಲ ಅಡಿಕೆ ಕೃಷಿಯಿಂದ ಪರ್ಯಾಯ ಕೃಷಿಗೆ ವರ್ಗಾವಣೆಯಾಗಬೇಕು, ಆ ನಂತರ ಮತ್ತೆ ಪುನಃ ಅಡಿಕೆ ಬೆಳೆ ಬೆಳೆದರೆ ಮುಂದಿನ 10-15 ವರ್ಷಗಳವರೆಗೆ ರೋಗ ನಿಯಂತ್ರಣ ಮಾಡಬಹುದು ಅಥವಾ ಇಲ್ಲದಂತೆಯೇ ಅಡಿಕೆ ಬೆಳೆ ಬೆಳೆಯಬಹುದು. ಆದರೆ ಈ ಪ್ರಕ್ರಿಯೆ ಸಾಮೂಹಿಕವಾಗಿ ಅಡಿಕೆ ಬೆಳೆಯಲ್ಲಿ ಮಾಡಲು ಸಾಧ್ಯವೇ..? ಒಂದೋ.. ಎರಡೋ ಕೃಷಿಕರು ಈ ಮಾದರಿ ಪ್ರಯತ್ನ ಮಾಡಬಹುದು. ಈಗಾಗಲೇ ಸಂಪಾಜೆಯಲ್ಲಿ ಅಂತಹ ಕೆಲವು ತೋಟಗಳ ಕಡೆಗೆ ಗಮನಹರಿಸಬಹುದು.

ಬೆಳೆ ಪರಿವರ್ತನೆ ಎಂದರೆ ಏನು…? : ಮಣ್ಣಿನ ಆರೋಗ್ಯವನ್ನು ಸುಧಾರಿಸಲು, ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಉತ್ತಮಗೊಳಿಸಲು ಮತ್ತು ಕೀಟ-ವೈರಾಣುಗಳನ್ನು ಮತ್ತು ಕಳೆಗಳನ್ನು ನಿವಾರಿಸಲು ಒಂದೇ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಅನುಕ್ರಮವಾಗಿ ನೆಡುವ ಪದ್ಧತಿ. ಉದಾಹರಣೆಗೆ, ಒಬ್ಬ ಕೃಷಿಕ ಭತ್ತವನ್ನು ಈ ಬಾರಿ ಬೆಳೆದರೆ  ಕೊಯ್ಲು ಮುಗಿದ ನಂತರ, ಅವನು ಇನ್ನೊಂದು ಬೆಳೆ ಅಂದರೆ ತರಕಾರಿ ಕೃಷಿ, ಜೋಳದ ಕೃಷಿಯನ್ನು ಮಾಡಬಹುದು. ಅಂದರೆ ಒಂದು ಬೆಳೆಯು ಇನ್ನೊಂದು ಬೆಳೆಗೆ ಪೂರಕವಾಗಿರಬೇಕು. ಅಂದರೆ ವಿಭಿನ್ನ ಸಸ್ಯಗಳು ವಿಭಿನ್ನ ಪೌಷ್ಟಿಕಾಂಶದ ಅಗತ್ಯಗಳನ್ನು ಹೊಂದಿವೆ ಮತ್ತು ವಿವಿಧ ರೋಗಕಾರಕಗಳು ಮತ್ತು ಕೀಟಗಳನ್ನು ಆಕರ್ಷಿಸುತ್ತವೆ. ಬೆಳೆ ಪರಿವರ್ತನೆಯ ಕಾರಣದಿಂದ ಈ ಕೀಟಗಳು ಸಾಯುತ್ತವೆ.

Advertisement

ಸಾಂಪ್ರದಾಯಿಕ ಬೇಸಾಯದಲ್ಲಿ ಸಾಮಾನ್ಯವಾಗಿರುವಂತೆ, ಪ್ರತಿ ವರ್ಷವೂ ಒಂದೇ  ಸ್ಥಳದಲ್ಲಿ ಒಂದೇ ಬೆಳೆಯನ್ನು ರೈತರು ಬೆಳೆದರೆ, ನಿರಂತರವಾಗಿ ಮಣ್ಣಿನಿಂದ ಅದೇ ಪೋಷಕಾಂಶಗಳನ್ನು ಹೊರತೆಗೆಯುತ್ತದೆ. ಕೀಟಗಳು ಮತ್ತು ರೋಗಗಳು ತಮ್ಮ ಆದ್ಯತೆಯ ಆಹಾರವನ್ನು ಖಾತ್ರಿ ಪಡಿಸಿ ಅಲ್ಲಿಯೇ ವಾಸ ಮಾಡುತ್ತವೆ. ಇದರ ಜೊತೆಗೆ ಒಂದೇ ಅಂಶಗಳನ್ನು ಗಿಡಗಳು ಬಯಸುವುದರಿಂದ ಹೆಚ್ಚುವರಿಯಾಗಿ ರಾಸಾಯನಿಕ ಬಳಕೆ ಅನಿವಾರ್ಯವಾಗುತ್ತದೆ.

ಹೀಗೆ ಬೆಳೆ ಪರಿವರ್ತನೆ ಮಾಡುವುದರಿಂದ ಹೆಚ್ಚಿನ ಮಣ್ಣಿನ ಫಲವತ್ತತೆ, ಕಡಿಮೆ ಕೀಟಗಳು ಮತ್ತು ಬೆಳೆ ರೋಗಗಳು ಮತ್ತು ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ ಎನ್ನುವುದು ಅಧ್ಯಯನ ವರದಿಗಳು ಹೇಳಿದೆ. ಇದರ ಜೊತೆಗೆ, ವಿವಿಧ ಸಸ್ಯಗಳಿಂದ ಉಳಿದಿರುವ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಶೇಷವು ಮಣ್ಣಿನಲ್ಲಿ ಸಾವಯವ ಪದಾರ್ಥಗಳ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Advertisement

ಹಾಗಿದ್ದರೆ ಅಡಿಕೆ ಬೆಳೆಗಾರರೂ ಈಗ ಅನುಭವಿಸುವ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಂತಹ ಗಂಭೀರ ಸಮಸ್ಯೆಗಳಿಂದ ಹೊರಬರಲು ಬೆಳೆ ಪರಿವರ್ತನೆ ಕನಿಷ್ಟ ಅವಧಿಗೆ ಮಾಡಲು ಸಾಧ್ಯ ಇದೆಯೇ ? ಇದಕ್ಕಾಗಿ ಸರ್ಕಾರಗಳು ಕನಿಷ್ಟ 10 ವರ್ಷದ ಅವಧಿಗೆ ಸಹಕಾರಿ ಸಂಘಗಳ ಮೂಲಕ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಂತಹ ಪ್ರದೇಶದಲ್ಲಿ ಅಡಿಕೆ ಬೆಳೆಗಾರರಿಗೆ ನೆರವು ನೀಡಿ, ಹಣ್ಣಿನ ಬೆಳೆ, ತರಕಾರಿ ಬೆಳೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿಗಳಿಗೆ ಸಹಕಾರ ನೀಡುವ ಮೂಲಕ ಏಕೆ ಪರಿಹಾರ ಕಾಣುವಂತೆ ಮಾಡಬಾರದು ? ಪ್ರತೀ ವರ್ಷ ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಂತಹ ಸಮಸ್ಯೆಗಳಿಂದಲೇ ಅಡಿಕೆ ಬೆಳೆಗಾರರು ಕಂಗಾಲಾಗುವುದರಿಂದ ಹೊರಬರಲು ಏಕೆ ಪ್ರಯತ್ನ ಮಾಡಬಾರದು..?

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…


Advertisement

Arun Kashyap, an environmental expert from Delhi, recently discussed the topic of carbon credits and soil fertility in the context of sustainable agriculture in Sullia. He emphasized the importance of crop rotation to prevent the spread of diseases and maintain soil fertility. Kashyap also mentioned the potential challenges that may arise from monocropping, such as increased susceptibility to diseases and declining soil health. In addition, he highlighted similar issues in other states, including Hima. Kashyap’s professional tone and expertise on the subject were evident in his presentation.

Arecanut have been a staple crop in highland and coastal areas for over 40-50 years. Recently, there has been a noticeable increase in diseases such as yellow leaf disease and leaf spot disease, which are spreading rapidly. These diseases are becoming more prevalent as the yield of walnuts increases. Therefore, it is crucial to consider how to alter the cultivation of this crop in order to address these challenges.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror