ಕಾಗೆಯಾ….? | ಎಂದು ಮುಖ ತಿರುಗಿಸ ಬೇಡಿ, ಕುತೂಹಲಕಾರಿ ಸಂಗತಿ ಇದೆ… | ಸ್ವಲ್ಪ ಓದಿ ನೋಡಿ….!

September 29, 2021
9:23 AM
ಮುಂಜಾನೆ ಮನೆ ಮುಂದೆ ಕಾಗೆ ಕೂಗಿತೆಂದು ಸ್ವಲ್ಪ ಹಾಲು ಜಾಸ್ತಿ ತನ್ನಿ , ಯಾರೋ ನೆಂಟರು ಬರುವವರಿದ್ದಾರೆ …. ಮನೆಯವರು ಹಾಲು ತಂದದ್ದೂ ಆಯಿತು. ಸಂಜೆಯಾದರೂ ಯಾರೂ ಬಂದ ಸುಳಿವಿಲ್ಲ. ಹೇಯ್ ಯಾರೂ ಬರಲಿಲ್ಲವಲ್ಲೇ ಹಾಲು ಜಾಸ್ತಿ ತರಲಿಕ್ಕೆ ಹೇಳಿದೆ ಅಲ್ವಾ ಎಂದಾಗ ಅದು ಕಾಗೆ ಬೆಳಿಗ್ಗೆ ಕೂಗಿತಲ್ವಾ ಹಾಗಾಗಿ ನೆಂಟರು ಬಂದಾರು ಎಂದು ನಾನೇ ಊಹಿಸಿದ್ದು ಅನ್ನುವುದೇ!

Advertisement
Advertisement

ಕಾಗೆ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು.ಆದರೆ ಇಡೀ ಪಕ್ಷಿ ಸಂಕುಲದಲ್ಲಿ ಅತ್ಯಂತ ಬುದ್ಧಿವಂತ ಹಕ್ಕಿಯೆಂದರೆ ಅದು ಕಾಗೆಯೇ ಸರಿ. ಅವುಗಳನ್ನು Feathered Apes  ( ಆಕಾಶದ ಮಂಗಗಳು) ಎಂದು ಕರೆಯುತ್ತಾರೆ. ಇತ್ತೀಚಿನ ಸಂಶೋಧನೆಗಳಲ್ಲಿ ಕಂಡು ಬಂದ ವಿಷಯ. ಕಾಗೆಗಳಿಗೆ ಪಕ್ಷಿ ಸಂಕುಲದಲ್ಲೇ ದೊಡ್ಡ ಮೆದುಳು( ದೇಹದ ಅನುಪಾತಕ್ಕೆ ಸರಿಯಾಗಿ) ಇದೆ. ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಬಿಟ್ಟರೆ ಕಾಗೆಯೇ ಶ್ರೇಷ್ಠ. ಬ್ರಾಹ್ಮಿಮುಹೂರ್ಥದಲ್ಲಿ ಕಾಗೆ ಏಳುತ್ತದೆ. ಆ ಹೊತ್ತಿನಲ್ಲಿ ಧ್ಯಾನ ಮಾಡಲು ಕಾಗೆ ನಮ್ಮನ್ನು ಕೂಗಿ ಕರೆದು ಪ್ರೇರೇಪಿಸುತ್ತದೆ. ಸಂಜೆಯಾದ ಮೇಲೆ ಆಹಾರವನ್ನು ಕಾಗೆ ಸೇವಿಸುವುದಿಲ್ಲ.

ಸುಮಾರು ಇಪ್ಪತ್ತು ರೀತಿಯಲ್ಲಿ ಕಾಗೆ ಧ್ವನಿ ಹೊರಡಿಸುತ್ತದೆ. ಒಂದು ಪ್ರದೇಶದ ಕಾಗೆಯ ಕೂಗಿಗೂ( ( accent)) ಗೂ‌ ಇನ್ನೊಂದು ಪ್ರದೇಶದ ಕಾಗೆಯ ಕೂಗಿಗೂ ವ್ಯತ್ಯಾಸವಿದೆ. ಕೇಳಲು ಒಂದೇ ರೀತಿಯಲ್ಲಿ ಇದ್ದರೂ ಶಬ್ದ ತರಂಗಗಳಲ್ಲಿ ವ್ಯತ್ಯಾಸವಿದೆ.

ನಾವು ಕಾಗೆಯನ್ನು ಕಾಕಾ ಎನ್ನುತ್ತೇವೆ. ಇನ್ನಾವುದೇ ಹಕ್ಕಿಯನ್ನು ಅವುಗಳು ಕೂಗುವ ದ್ವನಿಯಿಂದ ಕರೆಯುವ ಪರಿಪಾಠವಿಲ್ಲ. ಕಾಗೆಯನ್ನು ಶನಿ ದೇವರ ವಾಹನವೆಂದು ನಾವು ನಂಬುತ್ತೇವೆ. ಅಲ್ಲದೆ ಶ್ರಾದ್ಧ ಮೊದಲಾದ ಕ್ರಿಯೆಗಳಲ್ಲಿ ಹಿರಿಯರಿಗೆ ಸಲ್ಲಿಸುವ ಆಹಾರವನ್ನು ಕಾಗೆ ಸ್ವೀಕರಿಸಿದರೆ ಮಾಡಿದ ಕಾರ್ಯ ಸರಿಯಾಯಿತು, ಹಿರಿಯರಿಗೆ ಸಲ್ಲಿತು ಎಂಬುದು ರೂಡಿಯಲ್ಲಿರುವ ಮಾತುಗಳು.

ಈ ಬಗ್ಗೆ ನಮ್ಮಲ್ಲಿ ಮಾತ್ರ ಅಲ್ಲ, ಪಾಶ್ಚಾತ್ಯ ದೇಶಗಳಲ್ಲಿ ಕೂಡ ನಂಬಿಕೆಯಿದೆ.‌ ಸಾವಿನ ನಂತರ ಹನ್ನೆರಡು ದಿನದ ಒಳಗಾಗಿ ಕಾಗೆ ಮನೆಯ ಎದುರು, ಕಿಟಕಿಯ ಬಳಿ ಬಂದು ಕುಳಿತರೆ ಅಥವಾ ಕೂಗಿದರೆ ಆ ಮನೆಯ ಸತ್ತ ವ್ಯಕ್ತಿ ಪುನರ್ಜನ್ಮ ಪಡೆದಿದ್ದಾನೆ ಎಂದು ನಂಬುತ್ತಾರೆ.

ಯುರೋಪಿನಲ್ಲೂ ಕಾಗೆಗಳನ್ನು  Spirit animal  ಎನ್ನುತ್ತಾರೆ. ಸತ್ತ ನಂತರ ಅವನ ಆತ್ಮವನ್ನು ಪುನರ್ಜನ್ಮದೆಡೆಗೆ ಕರೆದೊಯ್ಯುವ ಪಕ್ಷಿ ಎಂಬ ನಂಬುಗೆಯಿದೆ.

ಮನುಷ್ಯರ ಮುಖ, ಧ್ವನಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟು ಕೊಳ್ಳ ಬಲ್ಲುದು. ಅಪಾಯ ಒಡ್ಡಿದ ವ್ಯಕ್ತಿಯನ್ನು ಮರೆಯದು ,ಮಾತ್ರವಲ್ಲ ಮುಂದಿನ ತಲೆಮಾರಿಗೂ ಈ ವಿಷಯವನ್ನು ಹಂಚ ಬಲ್ಲುದು. ಒಂದು ಕಾಗೆ ಸತ್ತರೆ ಎಲ್ಲಾ ಕಾಗೆಗಳು ಒಟ್ಟು ಸೇರುತ್ತವೆ. ಮಾತ್ರವಲ್ಲ ಸುತ್ತಲಿನ ಪ್ರದೇಶವನ್ನು ಅವಲೋಕಿಸಿ ಅಪಾಯದ ಸೂಚನೆ ದೊರೆತರೆ ಆ ಪ್ರದೇಶವನ್ನೇ ತೊರೆಯುತ್ತವೆ.

ಕಾಗೆ ಬಲಿಷ್ಠವಾದ ಉದ್ದ ಕೊಕ್ಕಿನ ಹಕ್ಕಿ,( 43 cm) ಹೊಳೆಯುವ ಕಪ್ಪು ಮೈ ಬಣ್ಣ, ಗಂಡು, ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ಒಂಟಿಯಾಗಿ ಅಥವಾ ಗುಂಪಿನಲ್ಲೂ ಇರುತ್ತವೆ. ಇವು ಸರ್ವ ಭಕ್ಷಕಗಳು. ಏನನ್ನಾದರೂ ತಿನ್ನುತ್ತವೆ. ಪರಿಸರ ಶುಚಿಯಾಗಿಡುವುದರಲ್ಲಿ ಇವುಗಳದು ದೊಡ್ಡ ಪಾಲಿದೆ. ಮಾರ್ಚ್ ನಿಂದ ಮೇ ವರೆಗೆ ಕಸ ಕಡ್ಡಿಗಳ ಸಹಾಯದಿಂದ ಗೂಡು ಕಟ್ಟುತ್ತವೆ.

ಜಂಗಲ್ ಕ್ರೋ, ಇಂಡಿಯನ್ ಬೂದುಕಂಠ, ಸಿಲೊನ್ ಅಥವಾ ಕೊಲಂಬೊ ಕಾಗೆ, ಭಾರತೀಯ ಕಾಗೆ ಅಥವಾ ಮನೆ ಕಾಗೆ ಎಂಬ ಹೆಸರುಗಳಿವೆ.
ಭಾರತ, ಪಾಕಿಸ್ತಾನ, ಬರ್ಮಾ, ಬಾಂಗ್ಲಾ, ಶ್ರೀ ಲಂಕಾಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಕಾಗೆಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಏನಿದೆ ಎಂದು ಹುಡುಕ ಹೊರಟ ನನಗೆ ಸಿಕ್ಕಿದ ಮಾಹಿತಿಯ ಸ್ವಲ್ಪ ಭಾಗ ನಿಮ್ಮ ಮುಂದಿಟ್ಟಿದ್ದೇನೆ. ಅರಿಯ ಬೇಕಾದ ವಿಷಯಗಳು ಇನ್ನೂ ಇದೆ. ಕಾಗೆಯೆಂದು ಮುಖ ತಿರುಗಿಸುವುದಲ್ಲ, ಹುಡುಕ ಹೊರಟರೆ ಮೂಗಿನ ಮೇಲೆ ಬೆರಳಿಡುವಷ್ಟು ಮಾಹಿತಿಗಳಿವೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಮಾಯಾಮೃಗ ಮಾಯಾಮೃಗ….
January 30, 2026
7:35 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror