ಕಾಗೆ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು.ಆದರೆ ಇಡೀ ಪಕ್ಷಿ ಸಂಕುಲದಲ್ಲಿ ಅತ್ಯಂತ ಬುದ್ಧಿವಂತ ಹಕ್ಕಿಯೆಂದರೆ ಅದು ಕಾಗೆಯೇ ಸರಿ. ಅವುಗಳನ್ನು Feathered Apes ( ಆಕಾಶದ ಮಂಗಗಳು) ಎಂದು ಕರೆಯುತ್ತಾರೆ. ಇತ್ತೀಚಿನ ಸಂಶೋಧನೆಗಳಲ್ಲಿ ಕಂಡು ಬಂದ ವಿಷಯ. ಕಾಗೆಗಳಿಗೆ ಪಕ್ಷಿ ಸಂಕುಲದಲ್ಲೇ ದೊಡ್ಡ ಮೆದುಳು( ದೇಹದ ಅನುಪಾತಕ್ಕೆ ಸರಿಯಾಗಿ) ಇದೆ. ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಬಿಟ್ಟರೆ ಕಾಗೆಯೇ ಶ್ರೇಷ್ಠ. ಬ್ರಾಹ್ಮಿಮುಹೂರ್ಥದಲ್ಲಿ ಕಾಗೆ ಏಳುತ್ತದೆ. ಆ ಹೊತ್ತಿನಲ್ಲಿ ಧ್ಯಾನ ಮಾಡಲು ಕಾಗೆ ನಮ್ಮನ್ನು ಕೂಗಿ ಕರೆದು ಪ್ರೇರೇಪಿಸುತ್ತದೆ. ಸಂಜೆಯಾದ ಮೇಲೆ ಆಹಾರವನ್ನು ಕಾಗೆ ಸೇವಿಸುವುದಿಲ್ಲ.
ಸುಮಾರು ಇಪ್ಪತ್ತು ರೀತಿಯಲ್ಲಿ ಕಾಗೆ ಧ್ವನಿ ಹೊರಡಿಸುತ್ತದೆ. ಒಂದು ಪ್ರದೇಶದ ಕಾಗೆಯ ಕೂಗಿಗೂ( ( accent)) ಗೂ ಇನ್ನೊಂದು ಪ್ರದೇಶದ ಕಾಗೆಯ ಕೂಗಿಗೂ ವ್ಯತ್ಯಾಸವಿದೆ. ಕೇಳಲು ಒಂದೇ ರೀತಿಯಲ್ಲಿ ಇದ್ದರೂ ಶಬ್ದ ತರಂಗಗಳಲ್ಲಿ ವ್ಯತ್ಯಾಸವಿದೆ.
ನಾವು ಕಾಗೆಯನ್ನು ಕಾಕಾ ಎನ್ನುತ್ತೇವೆ. ಇನ್ನಾವುದೇ ಹಕ್ಕಿಯನ್ನು ಅವುಗಳು ಕೂಗುವ ದ್ವನಿಯಿಂದ ಕರೆಯುವ ಪರಿಪಾಠವಿಲ್ಲ. ಕಾಗೆಯನ್ನು ಶನಿ ದೇವರ ವಾಹನವೆಂದು ನಾವು ನಂಬುತ್ತೇವೆ. ಅಲ್ಲದೆ ಶ್ರಾದ್ಧ ಮೊದಲಾದ ಕ್ರಿಯೆಗಳಲ್ಲಿ ಹಿರಿಯರಿಗೆ ಸಲ್ಲಿಸುವ ಆಹಾರವನ್ನು ಕಾಗೆ ಸ್ವೀಕರಿಸಿದರೆ ಮಾಡಿದ ಕಾರ್ಯ ಸರಿಯಾಯಿತು, ಹಿರಿಯರಿಗೆ ಸಲ್ಲಿತು ಎಂಬುದು ರೂಡಿಯಲ್ಲಿರುವ ಮಾತುಗಳು.
ಈ ಬಗ್ಗೆ ನಮ್ಮಲ್ಲಿ ಮಾತ್ರ ಅಲ್ಲ, ಪಾಶ್ಚಾತ್ಯ ದೇಶಗಳಲ್ಲಿ ಕೂಡ ನಂಬಿಕೆಯಿದೆ. ಸಾವಿನ ನಂತರ ಹನ್ನೆರಡು ದಿನದ ಒಳಗಾಗಿ ಕಾಗೆ ಮನೆಯ ಎದುರು, ಕಿಟಕಿಯ ಬಳಿ ಬಂದು ಕುಳಿತರೆ ಅಥವಾ ಕೂಗಿದರೆ ಆ ಮನೆಯ ಸತ್ತ ವ್ಯಕ್ತಿ ಪುನರ್ಜನ್ಮ ಪಡೆದಿದ್ದಾನೆ ಎಂದು ನಂಬುತ್ತಾರೆ.
ಯುರೋಪಿನಲ್ಲೂ ಕಾಗೆಗಳನ್ನು Spirit animal ಎನ್ನುತ್ತಾರೆ. ಸತ್ತ ನಂತರ ಅವನ ಆತ್ಮವನ್ನು ಪುನರ್ಜನ್ಮದೆಡೆಗೆ ಕರೆದೊಯ್ಯುವ ಪಕ್ಷಿ ಎಂಬ ನಂಬುಗೆಯಿದೆ.
ಮನುಷ್ಯರ ಮುಖ, ಧ್ವನಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟು ಕೊಳ್ಳ ಬಲ್ಲುದು. ಅಪಾಯ ಒಡ್ಡಿದ ವ್ಯಕ್ತಿಯನ್ನು ಮರೆಯದು ,ಮಾತ್ರವಲ್ಲ ಮುಂದಿನ ತಲೆಮಾರಿಗೂ ಈ ವಿಷಯವನ್ನು ಹಂಚ ಬಲ್ಲುದು. ಒಂದು ಕಾಗೆ ಸತ್ತರೆ ಎಲ್ಲಾ ಕಾಗೆಗಳು ಒಟ್ಟು ಸೇರುತ್ತವೆ. ಮಾತ್ರವಲ್ಲ ಸುತ್ತಲಿನ ಪ್ರದೇಶವನ್ನು ಅವಲೋಕಿಸಿ ಅಪಾಯದ ಸೂಚನೆ ದೊರೆತರೆ ಆ ಪ್ರದೇಶವನ್ನೇ ತೊರೆಯುತ್ತವೆ.
ಕಾಗೆ ಬಲಿಷ್ಠವಾದ ಉದ್ದ ಕೊಕ್ಕಿನ ಹಕ್ಕಿ,( 43 cm) ಹೊಳೆಯುವ ಕಪ್ಪು ಮೈ ಬಣ್ಣ, ಗಂಡು, ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ಒಂಟಿಯಾಗಿ ಅಥವಾ ಗುಂಪಿನಲ್ಲೂ ಇರುತ್ತವೆ. ಇವು ಸರ್ವ ಭಕ್ಷಕಗಳು. ಏನನ್ನಾದರೂ ತಿನ್ನುತ್ತವೆ. ಪರಿಸರ ಶುಚಿಯಾಗಿಡುವುದರಲ್ಲಿ ಇವುಗಳದು ದೊಡ್ಡ ಪಾಲಿದೆ. ಮಾರ್ಚ್ ನಿಂದ ಮೇ ವರೆಗೆ ಕಸ ಕಡ್ಡಿಗಳ ಸಹಾಯದಿಂದ ಗೂಡು ಕಟ್ಟುತ್ತವೆ.
ಜಂಗಲ್ ಕ್ರೋ, ಇಂಡಿಯನ್ ಬೂದುಕಂಠ, ಸಿಲೊನ್ ಅಥವಾ ಕೊಲಂಬೊ ಕಾಗೆ, ಭಾರತೀಯ ಕಾಗೆ ಅಥವಾ ಮನೆ ಕಾಗೆ ಎಂಬ ಹೆಸರುಗಳಿವೆ.
ಭಾರತ, ಪಾಕಿಸ್ತಾನ, ಬರ್ಮಾ, ಬಾಂಗ್ಲಾ, ಶ್ರೀ ಲಂಕಾಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
ಕಾಗೆಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಏನಿದೆ ಎಂದು ಹುಡುಕ ಹೊರಟ ನನಗೆ ಸಿಕ್ಕಿದ ಮಾಹಿತಿಯ ಸ್ವಲ್ಪ ಭಾಗ ನಿಮ್ಮ ಮುಂದಿಟ್ಟಿದ್ದೇನೆ. ಅರಿಯ ಬೇಕಾದ ವಿಷಯಗಳು ಇನ್ನೂ ಇದೆ. ಕಾಗೆಯೆಂದು ಮುಖ ತಿರುಗಿಸುವುದಲ್ಲ, ಹುಡುಕ ಹೊರಟರೆ ಮೂಗಿನ ಮೇಲೆ ಬೆರಳಿಡುವಷ್ಟು ಮಾಹಿತಿಗಳಿವೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…