ಹಿರಿಯರ ಕಾಲಿಗೆ ಬಿದ್ದು ನಮಿಸುವಂತಹ ಸಂಪ್ರದಾಯ ಬೆಳೆಸಿಕೊಳ್ಳಿ | ಎಲ್ಲಾ ರೀತಿಯ ಅಹಂ ದೂರವಾಗುತ್ತದೆ |

February 19, 2024
12:20 PM

ಸಾಮಾನ್ಯವಾಗಿ ನಾವು ಹಿರಿಯರ ಕಾಲಿಗೆ ಬಿದ್ದು ನಮಿಸುವಂತಹ ಸಂಪ್ರದಾಯವನ್ನು, ಪಾಲಿಸುವುದು ನಮ್ಮ ಸಂಸ್ಕೃತಿಯ ವಿಶೇಷ, ನಾವು ಯೋಗ್ಯರ ಪಾದ ಸ್ಪರ್ಶಿಸಿ ನಮಸ್ಕರಿಸಿದರೆ ಆಗ ಎಲ್ಲಾ ರೀತಿಯ ಅಹಂ ದೂರವಾಗುತ್ತದೆ, ಮತ್ತು ಎದುರಿನ ವ್ಯಕ್ತಿಯ ವರ್ಚಸ್ಸು ಅನುಭವ ಸಾಧನೆ ಮತ್ತು ಜ್ಞಾನವನ್ನು ನಾವು ಗೌರವಿಸಿದಂತೆ ಅನ್ನೋದು ಇದರ ಅರ್ಥ, ಇದಕ್ಕೆ ಪ್ರತಿಯಾಗಿ ಹಿರಿಯರು, ಕೂಡ ನಮಗೆ ಆಶೀರ್ವಾದ ನೀಡುತ್ತಾರೆ.

Advertisement
Advertisement

ಆದ್ದರಿಂದ ಹಿಂದಿನ ಕಾಲದಿಂದಲೂ ಹಿರಿಯರನ್ನು ಕಂಡ ತಕ್ಷಣ ಮೊದಲು ಕಾಲಿಗೆ ನಮಸ್ಕರಿಸಿದ ನಂತರವೇ ಯೋಗ ಕ್ಷೇಮ, ಸಮಾಚಾರವನ್ನು, ವಿಚಾರಿಸುವ ಪದ್ಧತಿಯನ್ನು ರೂಡಿಸಿಕೊಂಡು ಬಂದಿದ್ದೇವೆ, ಅಷ್ಟೇ ಅಲ್ಲದೆ ಯಾವುದಾದರೂ, ಶುಭಕಾರ್ಯಗಳಿಗೆ ಹೋದಾಗ ಅಥವಾ ಸಮಾರಂಭಗಳಲ್ಲಿ, ಮನೆಯಲ್ಲಿ ಹಬ್ಬ ಇರುವಾಗ ದೇವರ ಪೂಜೆಯ ನಂತರ ಹಿರಿಯರ ಪಾದಸ್ಪರ್ಶ ಮಾಡಿ ಆಶೀರ್ವಾದವನ್ನು, ಪಡೆದುಕೊಳ್ಳುವುದು ನಮ್ಮ ಸಂಪ್ರದಾಯವಾಗಿದೆ. ಆದರೆ ಇಂದಿನ ಕಾಲದಲ್ಲಿ ವಯಸ್ಸಿನ ಭೇದವಿಲ್ಲದೆಎಲ್ಲರೂ ಕೂಡ ಹಾಯ್ ಬಾಯ್ ಎನ್ನುವುದರಲ್ಲಿಯೇ ಮಾತುಕತೆ ಮುಗಿಸಿ ಬಿಡುತ್ತಾರೆ. ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳುವುದಕ್ಕೆ ಹಿಂದು ಮುಂದೆ ನೋಡುತ್ತಾರೆ.

Advertisement

ಈ ರೀತಿ ಪಾದಸ್ಪರ್ಶಮಾಡಿ ಆಶೀರ್ವಾದ ಪಡೆದುಕೊಳ್ಳುವುದರಿಂದ, ಆಗುವ ಲಾಭಗಳು : ಹಿರಿಯರ ಪಾದಮಟ್ಟಿ ನಮಸ್ಕರಿಸಿದರೆ ಆ ವ್ಯಕ್ತಿಗೆ ಶಕ್ತಿ, ಜ್ಞಾನ, ವಿದ್ಯೆ ಮತ್ತು ಪ್ರಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ಇದರ ಅರ್ಥ. ಹಿರಿಯರು ಈ ಜಗತ್ತಿನಲ್ಲಿ ನಮಗಿಂತಲೂ ಅನುಭವಸ್ಥರಾಗಿರುತ್ತಾರೆ ಹಾಗೂ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿರುತ್ತಾರೆ. ಹಾಗೂ ಅವರು ಕ್ರಮಿಸಿರುವಂತಹ, ದೂರವು ದೀರ್ಘವಾಗಿದೆ. ಹಿರಿಯರ ಕಾಲಿನಲ್ಲಿರುವ ಧೂಳಿನಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಅಂತ ಹೇಳಲಾಗುತ್ತದೆ. ಹಿರಿಯರು ಅಥವಾ ಗೌರವಾನ್ವಿತ ವ್ಯಕ್ತಿಯ ಪಾದಮುಟ್ಟಿ ನಮಸ್ಕರಿಸುವದರಿಂದ, ನಮ್ಮ ದೇಹದ ಮೇಲಿನ ಭಾಗವನ್ನು ಬಾಗಿಸಬೇಕು, ಮೊಣಕಾಲನ್ನು ಬಗ್ಗಿಸದೆ ನೇರವಾಗಿ ಪಾದಗಳನ್ನು ಕೈಗಳಿಂದ ಮುಟ್ಟಬೇಕು, ಕೈಗಳು ನೇರವಾಗಿ ಇರಬೇಕು ಹಾಗೆ ನಮಸ್ಕಾರ ಮಾಡುವಾಗ ಮುಖ್ಯವಾಗಿ ನೆನಪಿಡಬೇಕಾದದ್ದು, ಬಲಗೈಯಲ್ಲಿ ಬಲಪಾದವನ್ನು ಹಾಗೂ ಎಡಗೈಯಲ್ಲಿ ಎಡಪಾದವನ್ನು ಮುಟ್ಟಿ ನಮಸ್ಕಾರ ಮಾಡಬೇಕು.

ನೆನಪಿಡಬೇಕಾದ ವಿಷಯ: ಹಿರಿಯ ವ್ಯಕ್ತಿಗಳು ಮತ್ತು ಗೌರವಾನ್ವಿತ ವ್ಯಕ್ತಿಗಳ ಪಾದ ಸ್ಪರ್ಶ ಮಾತ್ರ ಮಾಡಬೇಕು ಯಾಕೆಂದರೆ ಇವರು ಜೀವನಪೂರ್ತಿ ಹೆಚ್ಚು ಜ್ಞಾನ ಅನುಭವ ಮತ್ತು ಸದ್ಗುಣಗಳನ್ನು ಪಡೆದಿರುತ್ತಾರೆ. ಇವರ ಆಶೀರ್ವಾದ ತುಂಬಾ ಶಕ್ತಿಶಾಲಿ ಆಗಿರುತ್ತದೆ. ಇದರಿಂದ ನಮಗೆ ಹೆಚ್ಚಿನ ಜ್ಞಾನ ಸುಖ ಸಂತೋಷ ದೊರಕುತ್ತದೆ. ಇನ್ನು ವಿಜ್ಞಾನದ ಪ್ರಕಾರ ಈ ರೀತಿ ಬಾಗಿ ಪಾದಗಳಿಗೆ, ನಮಸ್ಕರಿಸದಾಗ ದೇಹದಲ್ಲಿ ರಕ್ತದ ಸಂಚಲನೆ ಸರಾಗವಾಗಿ ನಡೆಯುತ್ತದೆ. ಇದೇ ಕಾರಣದಿಂದ ಹುದ್ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಹಾಗೂ ಹಿರಿಯರ ಕೈಗೆ ಅಕ್ಷತೆಯನ್ನು ಕೊಟ್ಟು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವುದರಿಂದ, ಅಷ್ಟೈಶ್ವರ್ಯ, ಭಾಗ್ಯ, ನೆಮ್ಮದಿ ಸಿಗುತ್ತದೆ. ಸಮಾಜದ ಒಳಿತಿಗಾಗಿ ಇರೋರಿಗೆ ನಮಿಸೋದ್ರಲ್ಲಿ ಅರ್ಥವಿದೆ. ತಿಳುವಳಿಕೆ ಇಲ್ಲದೆ ಮೂರ್ಖತನದಿಂದ ವರ್ತಿಸುವ ವ್ಯಕ್ತಿಗಳು ಸಮಾಜಘಾತಕರು ಕೇವಲ ಹಣದಿಂದಲೇ ಶ್ರೀಮಂತರಾದವರು ಕೆಟ್ಟ ಗುಣ ಹೊಂದಿರುವ ವ್ಯಕ್ತಿಗಳು ಬೇರೆಯವರಿಗೆ ಕೆಡುಕು ಬಯಸುವ ವ್ಯಕ್ತಿಗಳಿಗೆ ಜೀವನದಲ್ಲಿ ಎಂದಿಗೂ ತಲೆಬಾಗಬಾರದು ಹಾಗೂ ನಮಸ್ಕರಿಸಬಾರದು. ಒಂದು ವೇಳೆ ನೀವು ಅವರ ಕಾಲಿಗೆ ನಮಸ್ಕಾರ ಮಾಡಿದರೆ ನಿಮ್ಮ ದುರಾದೃಷ್ಟವನ್ನು ನಿಮ್ಮ ಮೈ ಮೇಲೆ ಎಳೆದುಕೊಂಡು ಹಾಗೆ ಆಗುತ್ತದೆ.

Advertisement
ಬರಹ :
L  ವಿವೇಕಾನಂದ ಆಚಾರ್ಯ
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror