ಇತ್ತೀಚೆಗೆ ಮೊಬೈಲ್‌ಗಳ(Mobile), ಲ್ಯಾಪ್‌ಟಾಪ್(Lap top), ಕಂಪ್ಯೂಟರ್(Computer) ಮೂಲಕ ವಿವಿಧ ರೀತಿಯಲ್ಲಿ ಹಣ(Money) ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಮೊದಲೆಲ್ಲಾ ಎಲ್ಲೋ ಯಾರೋ ಹಾಗೆ ದುಡ್ಡು ಕಳಕೊಂಡ್ರು.. ಹೀಗೆ ದುಡ್ಡು ಕಳಕೊಂಡ್ರು ಅಂತ ನ್ಯೂಸ್ ಕೇಳುತ್ತಿದ್ದೆವು. ಈಗ ನೋಡಿದರೆ ನಮ್ಮ ಸುತ್ತಮುತ್ತವೇ ಹಣ ಕಳೆದುಕೊಳ್ಳುತ್ತಿರುವುದು, ಮೋಸ ಹೋಗುತ್ತಿರುವುದು ಕಾಣಿಸುತ್ತಿದೆ. ಯಾವ ರೀತಿಯಲ್ಲಿ ವಂಚನೆ(Fraud) ಮಾಡುತ್ತಾರೆ ಅನ್ನೋದೆ ತಿಳಿಯದ ರೀತಿಯಲ್ಲಿ ಜನರನ್ನು ಸೈಬರ್ ವಂಚಕರು ಟಾರ್ಗೆಟ್(Target) ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸೈಬರ್ ವಂಚನೆಗಳಿಂದ (Cyber Fraud) ಭಾರತೀಯರು(Indians) 25,000 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದು ಸಿಕ್ಕಿಂನ(Sikkim) ವಾರ್ಷಿಕ ಬಜೆಟ್‌ಗಿಂತ(Budget) ದ್ವಿಗುಣವಾಗಿದೆ ಎಂದು ಕೇಂದ್ರ ಸರ್ಕಾರದ(Central Govt) ಮೂಲಗಳು ಹೇಳಿವೆ.
ಎಲ್ಲಾ ಕಂಪನಿಗಳು ಆರಂಭಿಕ ಹಂತದಲ್ಲಿಯೂ ಸಹ ವಿವಿಧ ರೀತಿಯ ವಿವರಗಳನ್ನು ಕೇಳುತ್ತವೆ. ಇದು ಸೈಬರ್ ವಂಚನೆಯನ್ನು ತಡೆಯುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ವಂಚಕರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಆಂಪ್ಲಿಫೈಯರ್‌ಗಳಾಗಿ ಬಳಸುತ್ತಿದ್ದಾರೆ. ಇದರಲ್ಲಿ ವಂಚಕರು ಸುಲಭವಾಗಿ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏಮ್ಸ್, ಐಸಿಎಮ್‌ಆರ್ ಸೈಬರ್ ದಾಳಿಯಿಂದ ಸಾಲ ನೀಡುವ ಅಪ್ಲಿಕೇಶನ್ ವಂಚನೆಗಳವರೆಗೆ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ (NCRP) 2020 ರಿಂದ ಫೆಬ್ರವರಿ 2024ರ ನಡುವೆ 31 ಲಕ್ಷ ದೂರುಗಳನ್ನು ಸ್ವೀಕರಿಸಿದೆ. ಕೇಂದ್ರ ಸರ್ಕಾರದ ಅಧಿಕೃತ ಸಂವಹನದ ಪ್ರಕಾರ, ಸೈಬರ್ ವಂಚನೆ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಬಂಧನವಾಗುತ್ತಿರುವ ಹಿನ್ನೆಲೆ ಈ ಬೆಳವಣಿಗೆ ಹೆಚ್ಚುತ್ತಿದೆ ಎನ್ನಲಾಗಿದೆ. ವಿವಿಧ ಕಾನೂನು ಜಾರಿ ಸಂಸ್ಥೆಗಳು ದಾಖಲಾದ ಪ್ರಕರಣಗಳು ಅಥವಾ ಎಫ್‌ಐಆರ್‌ಗಳು 66,000 ಕ್ಕಿಂತ ಹೆಚ್ಚಿವೆ. ಆದರೆ ಈ ವರ್ಷದವರೆಗೆ ಕೇವಲ 500 ಪ್ರಕರಣಗಳಲ್ಲಿ ಬಂಧನವಾಗಿದೆ. ಈ ಮೂಲಕ 1% ವಂಚಕರ ಬಂಧನವಾಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಸಾಲದ ಆ್ಯಪ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಸ್ಟಾಕ್ ಟ್ರೇಡಿಂಗ್ ಗ್ರೂಪ್‌ಗಳಲ್ಲಿ ನಕಲಿ ಜಾಹೀರಾತುಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚಲು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರ ತಿಳಿಸಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…