ಟೌಕ್ಟೇ ಚಂಡಮಾರುತದ ಬಳಿಕ ಇದೀಗ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ವಾಯುಭಾರ ಕುಸಿತದ ಪ್ರಭಾವ ಹೆಚ್ಚಾಗಿದ್ದು ಮೇ.23 ರ ಸುಮಾರಿಗೆ ಈ ಸ್ಪಷ್ಟತೆ ದೊರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸುಳಿವು ನೀಡಿದೆ.
ಅರಬೀ ಸಮುದ್ರದಲ್ಲಿ ಉಂಟಾಗಿರುವ ಟೌಕ್ಟೇ ಚಂಡಮಾರುತ ಆತಂಕ ಸೃಷ್ಟಿಸಿ ಗುಜರಾತ್ ಸಹಿತ ಕರಾವಳಿ ಭಾಗದಲ್ಲಿ ಸಾಕಷ್ಟು ಹಾನಿ ಮಾಡಿ ಇದೀಗ ಬಂಗಾಳಕೊಲ್ಲಿಯಲ್ಲಿ ಇನ್ನೊಂದು ಚಂಡಮಾರುತ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಚಂಡಮಾರುತವು ತಮಿಳುನಾಡು, ಒಡಿಸ್ಸಾ ಪ್ರದೇಶಗಳಲ್ಲಿ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಒಡಿಸ್ಸಾ ರಾಜ್ಯಕ್ಕೆ ಪ್ರತೀ ಬಾರಿಯೂ ಚಂಡಮಾರುತ ಅಪ್ಪಳಿಸುತ್ತಲೇ ಇರುತ್ತದೆ.
ಈ ಬಾರಿ ಮಳೆಗಾಲದ ಪೂರ್ವದಲ್ಲಿ ಉಂಟಾಗುತ್ತಿರುವ ಚಂಡಮಾರುತದ ಕಾರಣದಿಂದ ಮಳೆಗಾಲ ಆರಂಭದಲ್ಲಿ ವ್ಯತ್ಯಯವಾಗುವ ಸಾಧ್ಯತೆಯೂ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel