ಬಿಪರ್ ಜಾಯ್ ಚಂಡಮಾರುತ ಗುಜರಾತ್ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿತು. ಗುಜರಾತಿನ ಕಚ್-ಸೌರಾಷ್ಟ್ರ ಪ್ರದೇಶದಲ್ಲಿ ಅಪ್ಪಳಿಸಿದ ಬಿಪರ್ ಜಾಯ್ ಚಂಡಮಾರುತವು ಹಲವು ಹಾನಿಯನ್ನುಂಟು ಮಾಡಿತ್ತು. ಚಂಡಮಾರುತದ ಕಾರಣದಿಂದ 4,600 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. 24 ಗಂಟೆಯಲ್ಲಿ 3,580 ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ, ಇನ್ನೂ 1,000 ಹಳ್ಳಿಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಧಿಕಾರಿಗಳು, ಸಿಬಂದಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಗುಜರಾತಲ್ಲಿ ಈಗ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ಮಳೆ ಹಾಗೂ ಗಾಳಿಯ ಪ್ರಭಾವ ತಗ್ಗಿದೆ. ಗುಜರಾತಿನ ಕಚ್-ಸೌರಾಷ್ಟ್ರ ಪ್ರದೇಶಕ್ಕೆ ಅಪ್ಪಳಿಸಿದ ಬಿಪರ್ ಜಾಯ್ ಚಂಡಮಾರುತದ ಕಾರಣದಿಂದ ಅಧಿಕೃತವಾಗಿ 5,120 ವಿದ್ಯುತ್ ಕಂಬಗಳನ್ನು ಹಾನಿಗೊಳಿಸಿತ್ತು ಹಾಗೂ 4,600 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಚಂಡಮಾರುತದ ಕಾರಣದಿಂದ 34 ಜನರು ಗಾಯಗೊಂಡಿದ್ದಾರೆ ಮತ್ತು 94 ಪ್ರಾಣಿಗಳು ಮೃತಪಟ್ಟಿದ್ದವು. ಇಲಾಖೆಗಳ ಮುನ್ಸೂಚನೆಯ ಕಾರಣದಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಚಂಡಮಾರುತದ ಕಾರಣದಿಂದ ಮರಗಳು ಧರೆಗೆ ಉರುಳಿದ್ದವು, ವಿದ್ಯುತ್ ಮತ್ತು ಪ್ರಸರಣ ಕಂಬಗಳು ಮತ್ತು ಮನೆಗಳು ಕೂಡಾ ಧರೆಗೆ ಉರುಳಿತ್ತು. ವಿದ್ಯುತ್ ಕಂಬಗಳು ಉರುಳಿದ ಕಾರಣದಿಂದ 4600 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಗುಜರಾತ್‌ನ ಜಾಮ್‌ನಗರ ಸೇರಿದಂತೆ ವಿವಿದೆಡೆ ಅಧಿಕಾರಿಗಳ ತಂಡ ಸತತ ಕೆಲಸ ಮಾಡುತ್ತಿದ್ದು, ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಪಿಜಿವಿಸಿಎಲ್‌ನ 119 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ 3,580 ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ, ಇನ್ನೂ 1,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇನ್ನೂ ವಿದ್ಯುತ್ ಸ್ಥಾಪಿಸಲು ಸಾಧ್ಯವಾಗಿಲ್ಲ.
ಗುಜರಾತ್‌ನ ನಂತರ ಚಂಡಮಾರುತವು ರಾಜಸ್ಥಾನದ ಜಲೋರ್ ಮತ್ತು ಬಾರ್ಮರ್ ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.