ಚಂಡಮಾರುತ ಬಿಪೋರ್ ಜಾಯ್ ಗುಜರಾತ್ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿದೆ. ನಿನ್ನೆ ಸಂಜೆಯಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಭಾರೀ ಗಾಳಿ ಮಳೆಗೆ 5 ಮಂದಿ ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಚಂಡಮಾರುತದ ಕಾರಣದಿಂದ 22 ಮಂದಿ ಗಾಯಗೊಂಡಿದ್ದಾರೆ. 30 ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ. 900 ಕ್ಕೂ ಅಧಿಕ ಹಳ್ಳಿಗಳು ಕತ್ತಲಲ್ಲಿವೆ. ಭಾರೀ ಗಾಳಿಯ ಕಾರಣದಿಂದ ಮರಗಳು ಉರುಳಿ ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಗುಜರಾತಿನ ವಿವಿಧ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಗುರುವಾರ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತವು ಅಪ್ಪಳಿಸಿದ ನಂತರ ‘ಅತಿ ತೀವ್ರ’ ದಿಂದ ‘ತೀವ್ರ’ ಪ್ರಮಾಣಕ್ಕೆ ಇಳಿಕೆಯಾಗಿದೆ. ತನ್ನ ಪ್ರಭಾವ ತಗ್ಗಿಸಿದ ಚಂಡಮಾರುತವು ರಾಜಸ್ಥಾನಕ್ಕೆ ಚಂಡಮಾರುತ ಅಪ್ಪಳಿಸಲಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) 12 ತಂಡಗಳನ್ನು ನಿಯೋಜಿಸಿದ್ದು, ಮೂರು ಹೆಚ್ಚುವರಿ ತಂಡಗಳನ್ನು ಗುಜರಾತ್‌ನಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹೆಚ್ಚುವರಿಯಾಗಿ, 15 ತಂಡಗಳು ಅರ್ರಕೋಣಂ (ತಮಿಳುನಾಡು), ಮುಂಡ್ಲಿ (ಒಡಿಶಾ) ಮತ್ತು ಬಟಿಂಡಾ (ಪಂಜಾಬ್) ನಲ್ಲಿ ತಲಾ ಐದು ತಂಡಗಳನ್ನು ಅಲ್ಪಾವಧಿಯಲ್ಲಿ ಏರ್‌ಲಿಫ್ಟಿಂಗ್‌ಗಾಗಿ ಎಚ್ಚರಿಕೆ ವಹಿಸಲಾಗಿದೆ. ಕೋಸ್ಟ್ ಗಾರ್ಡ್, ಸೇನೆ ಮತ್ತು ನೌಕಾಪಡೆಯ ರಕ್ಷಣಾ ಮತ್ತು ಪರಿಹಾರ ತಂಡಗಳು ಹಡಗುಗಳು ಮತ್ತು ವಿಮಾನಗಳೊಂದಿಗೆ ಸಿದ್ಧವಾಗಿವೆ.
ಕಳೆದ ಕೆಲವು ದಿನಗಳಲ್ಲಿ ಚಂಡಮಾರುತ ಬಿಪರ್ ಜಾಯ್ ಕಾರಣದಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ 1,80,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.