ಟೌಕ್ಟೇ ಚಂಡಮಾರುತ | ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಭಾರೀ ಮಳೆ | ಚೆಲ್ಲಾನಂ ಪ್ರದೇಶದಲ್ಲಿ ಪ್ರವಾಹ | ಕೊರೋನಾ ಭೀತಿಯಿಂದ ಮನೆಯಿಂದ ಹೊರಬರಲು ಜನರಿಗೆ ಭಯ |

May 14, 2021
5:53 PM

ಟೌಕ್ಟೇ ಚಂಡಮಾರುತ ಕೇರಳದ ಎರ್ನಾಕುಲಂ ಜಿಲ್ಲೆಯ ಹಲವು ಕಡೆ ಹಾನಿ ಉಂಟು ಮಾಡಿದೆ. ಎರ್ನಾಕುಲಂ ಜಿಲ್ಲೆಯ ಕರಾವಳಿ ತೀರದ ಚೆಲ್ಲಾನಂ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಗುರುವಾರ ಬೆಳಗ್ಗಿನಿಂದಲೇ ಭಾರೀ ಮಳೆ ಸುರಿಯುತ್ತಿದೆ. ಪ್ರವಾಹದ ಭೀತಿ ಎದುರಾದರೂ ಜನರು ರಕ್ಷಣಾ ಕೇಂದ್ರಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಕೊರೋನಾ ಈ ಪ್ರದೇಶದಲ್ಲಿ  ವ್ಯಾಪಕವಾಗಿರುವುದರಿಂದ ಇನ್ನಷ್ಟು ಭಯದ ವಾತಾವರಣ ಜನರಲ್ಲಿದೆ.

ಗುರುವಾರ ಬೆಳಗ್ಗಿನಿಂದಲೇ ಚೆಲ್ಲಾನಂ ಪ್ರದೇಶದಲ್ಲಿ ಗಾಳಿ ಹಾಗೂ ಮಳೆಯಾಗುತ್ತಿದೆ. ಹೀಗಾಗಿ ಸಮುದ್ರ ಕೊರತೆ ಉಂಟಾಗಿದ್ದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ನಿರಂತರ ಮಳೆ ಮತ್ತು ಸಮುದ್ರ ಕೊರೆತದಿಂದಾಗಿ, ಗ್ರಾಮದ ಅನೇಕ ಮನೆಗಳು ನೀರಿನಿಂದ ಜಲಾವೃತವಾಗಿದ್ದು ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಜಿಲ್ಲಾಡಳಿತವು ಸ್ಥಳೀಯ ಶಾಲೆಯಲ್ಲಿ  ಪರಿಹಾರ ಕೇಂದ್ರವನ್ನು  ತೆರೆದಿದೆ.

ಆದರೆ ಸ್ಥಳೀಯ ಜನರು ಕೊರೋನಾ ಪ್ರಕರಣಗಳಿಂದಾಗಿ  ಈ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ  4000 ಕ್ಕೂ ಅಧಿಕ ಕೊರೋನಾ ಪ್ರಕರಣ ಇರುವುದರಿಂದ ಜನರು ಕೊರೋನಾ ವೈರಸ್‌ ಹರಡುವ ಭೀತಿಗೊಂಡಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2026 ಜೂನ್‌ನಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮುನ್ಸೂಚನೆ | ಪಶ್ಚಿಮ ಘಟ್ಟ-ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ
April 12, 2026
3:03 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12-04-2026 | ಬಿಸಿಲಿನ ತಾಪ ಹೆಚ್ಚಳದ ನಡುವೆ ಮಳೆಯ ನಿರೀಕ್ಷೆ| ಎಪ್ರಿಲ್ 15 ನಂತರ ಗುಡುಗು ಮಳೆ ಸಾಧ್ಯತೆ
April 12, 2026
2:37 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
April 11, 2026
7:09 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror