ಕುಸಿಯುತ್ತಿರುವ ರುದ್ರಭೂಮಿಯ ವಿಡಿಯೋ
ಟೌಕ್ಟೇ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಕೇರಳದ ವಿವಿದೆಡೆ ಭಾರೀ ಮಳೆಯಾಗುತ್ತಿದೆ. ಕೇರಳದ ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರು, ಕಾಸರಗೋಡು ಮತ್ತು ಕೇಂದ್ರ ಪ್ರದೇಶವಾದ ಲಕ್ಷದ್ವೀಪದಲ್ಲಿ ಶನಿವಾರ ರೆಡ್ ಅಲರ್ಟ್ ಘೋಷಣೆಯಾಗಿದ್ದು 20 ಸೆಂ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರದ ಅಲೆಗಳ ಅಬ್ಬರದಿಂದ ಹಲವಾರು ಮನೆಗಳು ಪ್ರವಾಹಕ್ಕೆ ಸಿಲುಕಿದೆ. ಕರಾವಳಿ ತೀರದ ಜನರನ್ನು ಶುಕ್ರವಾರ ಸುರಕ್ಷತೆಗೆ ಸ್ಥಳಾಂತರಿಸಲಾಗಿದೆ.
Advertisement
Advertisement
ಮಂಗಳೂರು ಪ್ರದೇಶದಲ್ಲೂ ಚಂಡಮಾರುತದ ಪರಿಣಾಮ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಶನಿವಾರ ಮಳೆಯಾಗುತ್ತಿದೆ. ಅರಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು ಸಮುದ್ರ ಬದಿಯ ಜನರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆಯನ್ನು ಜಿಲ್ಲಾಡಳಿತದ ಮೂಲಕ ನೀಡಲಾಗಿದೆ.
ಮಂಗಳೂರು ತೀರದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು ದೈತ್ಯ ಅಲೆಗಳು ಸಮುದ್ರಕ್ಕೆ ಅಪ್ಪಳಿಸುವ ಕಾರಣದಿಂದ ಮಂಗಳೂರು ಹೊರವಲಯದ ಉಳ್ಳಾಲ,ಕೋಟೆಪುರ,ಸೋಮೇಶ್ವರ ಪ್ರದೇಶ ದಲ್ಲಿ ಕಡಲ ಕೊರೆತದ ಆತಂಕ ಉಂಟಾಗಿದೆ. ಏಕಾಏಕಿ ದಡಕ್ಕೆ ಅಪ್ಪಳಿಸುವ ಅಲೆಗಳ ಕಾರಣದಿಂದ ಸೋಮೇಶ್ವರದಲ್ಲಿ ಹಿಂದೂ ರುದ್ರಭೂಮಿ ಸಮುದ್ರಪಾಲಾಗಿದೆ.
ಚಂಡಮಾರುತದ ಅಬ್ಬರ ಇನ್ನೂ ಹೆಚ್ಚಾಗಿದ್ದು ಸಮುದ್ರ ಕಿನಾರೆಯಿಂದ ಸುಮಾರು 250 ಕಿಮೀ ದೂರದಲ್ಲಿ ಚಂಡಮಾರುತ ಹಾದುಹೋಗುತ್ತಿದೆ , ಇಂದು ರಾತ್ರಿ ಅಥವಾ ನಾಳೆ ಮಹಾರಾಷ್ಟ್ರ ತಲುಪುವ ಸಾಧ್ಯತೆಯಿದೆ. ಇದು ಪಶ್ಚಿಮ ಕರಾವಳಿಯಿಂದ ದೂರವಿರುವುದರಿಂದ ಕನಿಷ್ಠ ಪರಿಣಾಮ ಬೀರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಗಾಳಿ, ಮಳೆ ನಿರೀಕ್ಷಿಸಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಚಂಡಮಾರುತವು ಭಾರತದ ಪಶ್ಚಿಮ ಕರಾವಳಿಯಲ್ಲಿ – ಕೇರಳದಿಂದ ಗುಜರಾತ್ ವರೆಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement