ಟೌಕ್ಟೇ ಚಂಡಮಾರುತ | ಕರಾವಳಿಯಲ್ಲಿ ತೀವ್ರಗೊಂಡ ಚಂಡಮಾರುತದ ಪ್ರಭಾವ | ಪಡುಬಿದ್ರಿಯಲ್ಲಿ ಬೋಟ್‌ ಪಲ್ಟಿ – ಓರ್ವ ಮೃತಪಟ್ಟು, ಐವರು ನಾಪತ್ತೆ |

May 15, 2021
10:05 PM

ಟೌಕ್ಟೇ ಚಂಡಮಾರುತ ತನ್ನ ಪ್ರಭಾವವನ್ನು  ಹೆಚ್ಚಿಸಿದೆ. ಕರಾವಳಿ ಜಿಲ್ಲೆಗಳಲ್ಲಿ  ಚಂಡಮಾರುತದ ಕಾರಣದಿಂದ ಮಳೆಯಾಗುತ್ತಿದೆ. ಚಂಡಮಾರುತದ ಪ್ರಭಾವಕ್ಕೆ ಸಿಕ್ಕಿ ಪಡುಬಿದ್ರಿ ಬಳಿ ಬೋಟ್‌ ಪಲ್ಟಿಯಾಗಿ ಒಬ್ಬ ಮೃತಪಟ್ಟು  5 ಜನ ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ಪಡುಬಿದ್ರಿಯಲ್ಲಿ ನಡೆದಿದೆ.

ಕೇರಳದಲ್ಲಿ  ಭಾರೀ ಅವಾಂತರ ಸೃಷ್ಟಿ ಮಾಡಿದ ಚಂಡಮಾರುತ ಕರಾವಳಿ ಜಿಲ್ಲೆಯಾದ್ಯಂತ ಪ್ರಭಾವ ಉಂಟು ಮಾಡಿದೆ. ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಸಮುದ್ರ ಪಾಲಾದ ಬೋಟು ಪಡುಬಿದ್ರಿ ಕಾಡಿಪಟ್ನ ಸಮುದ್ರ ತೀರದಲ್ಲಿ ಬಂದು ದಡಕ್ಕೆ ಅಪ್ಪಳಿಸಿದೆ. ಬೋಟಿನಲ್ಲಿ 8 ಜನರಿದ್ದು 2 ಜನ ಈಜಿಕೊಂಡು ಮಟ್ಟು ಬೀಚಿನಲ್ಲಿ ದಡ ಸೇರಿದ್ದಾರೆ. ಒಂದು ಮೃತ ದೇಹ ಪತ್ತೆಯಾಗಿದ್ದು, ಕಾಣೆಯಾದ ಐವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

ಚಂಡಮಾರುತವು ಮುಂದಿನ  12  ಗಂಟೆಗಳಲ್ಲಿ  ಇನ್ನೂ ಹೆಚ್ಚಿನ ತೀವ್ರತೆ ಪಡೆಯಲಿದೆ. ಭಾನುವಾರ ವೇಳೆಗೆ ಕರಾವಳಿ ಭಾಗದಲ್ಲೂ ಹೆಚ್ಚಿನ ಗಾಳಿ ಮಳೆಯಾಗಲಿದೆ.  ಮೇ 18 ರ ಸುಮಾರಿಗೆ ಪೋರಬಂದರ್ ಮತ್ತು ನಲಿಯಾ ನಡುವೆ ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಕೇರಳ ಜಿಲ್ಲೆಗಳಲ್ಲಿ ಮತ್ತು ಲಕ್ಷದ್ವೀಪದಲ್ಲಿ ‌ ರೆಡ್‌ ಎಲರ್ಟ್‌ ನೀಡಲಾಗಿದ್ದು , ಮೇ 16 ರಂದು ಕರ್ನಾಟಕ ಕರಾವಳಿ, ಕೊಂಕಣ ಪ್ರದೇಶ ಮತ್ತು ಗೋವಾದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಸದ್ಯ ಚಂಡಮಾರುತವು ತೀವ್ರಗೊಂಡಿದ್ದು ಗುಜರಾತ್ ಕರಾವಳಿ ಮತ್ತು ಕೇಂದ್ರ ಪ್ರದೇಶವಾದ ಡಿಯು ಮತ್ತು ದಮನ್ ಮತ್ತು ದಾದ್ರಾ ‌, ಹವೇಲಿ ಕಡೆಗೆ ಸಾಗುತ್ತಿದೆ ಎಂದು ಭಾರತ ಹವಾಮಾನ ಇಲಾಖೆ ಶನಿವಾರ ಸಂಜೆ ತಿಳಿಸಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
10:48 PM
by: ದ ರೂರಲ್ ಮಿರರ್.ಕಾಂ
ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ
August 3, 2026
10:24 PM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ
August 3, 2026
5:45 PM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
7:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror