ಶಿವಮಯವಾದ ಜಗವು | ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ ದಾರಿದ್ರ್ಯ- ದುಃಖದಹನ ಶಿವಸ್ತೋತ್ರ | ಇಲ್ಲಿದೆ ಕೇಳಿ ಈ ಸ್ತೋತ್ರ…

March 11, 2021
6:18 PM
ಶಿವರಾತ್ರಿ. ಈ ದಿನ ಜಗವೆಲ್ಲಾ ಶಿವಮಯವಾಗಿದೆ. ರಾತ್ರಿ ಇಡೀ ಜಾಗರಣೆ ಸಹಿತ ಶಿವಾರ್ಚನೆ ನಡೆಯುತ್ತದೆ. ಈ ಸಂದರ್ಭ ವಸಿಷ್ಠರಿಂದ ರಚಿಸಲ್ಪಟ್ಟ ದಾರಿದ್ರ್ಯ ದುಃಖದಹನ ಶಿವಸ್ತೋತ್ರ ಕೇಳುವುದರಿಂದ ಮತ್ತು ಪಠಿಸುವುದರಿಂದ  ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿಯಾಗುತ್ತದೆ ಎನ್ನುವುದು  ನಂಬಿಕೆ. ಇದೀಗ ಈ ಸ್ತೋತ್ರ ಗಮನ ಸೆಳೆದಿದೆ. ಸತ್ಯನಾರಾಯಣ ಭಟ್ರಕೋಡಿ ಅವರು ಹಾಡಿರುವ ಈ ಸ್ತೋತ್ರ ಶಿವ ಭಕ್ತಿಗೆ ಬೆಳಕಾಗಿದೆ.
ಸತ್ಯನಾರಾಯಣ ಭಟ್ರಕೋಡಿ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಬಯಸುವುದು ಆನಂದ ಮತ್ತು ಸುಖವನ್ನು. ಮಾನವನೂ ಅಷ್ಟೆ, ತನ್ನ ಐಹಿಕ ಬದುಕಿಗಾಗಿ ಸಂಪತ್ತನ್ನು ಗಳಿಸುವುದಕ್ಕಾಗಿ ದುಡಿಯುತ್ತಾನಾದರೂ ಆತನ ಅಂತಿಮ ಉದ್ದೇಶ ಆನಂದ ಮತ್ತು ಸುಖಮಯ ಬದುಕು. ಆದರೆ ನಾವು ಗಳಿಸುವ ಆಸ್ತಿ ಅಂತಸ್ತು ಸಂಪತ್ತುಗಳು ನಿಜವಾದ ಸುಖವನ್ನು ನೀಡಲಾರವು. ಈ ಲೌಕಿಕ ಜೀವನದಲ್ಲಿ ನಮ್ಮ ಕರ್ಮಗಳ ಫಲವಾಗಿ ದುಃಖ, ದಾರಿದ್ರ್ಯಗಳು ನಮ್ಮನ್ನು ಅಂಟಿಕೊಳ್ಳುತ್ತವೆ. ಇವುಗಳಿಂದ ಪಾರಾಗಬೇಕಾದರೆ ಪರಮೇಶ್ವನ ಮೊರೆಹೋಗುವುದೊಂದೇ ದಾರಿ.

Advertisement
Advertisement

‘ಶಿವ’ ಎಂದರೆ ಆನಂದ. ಮಹಾಶಿವರಾತ್ರಿಯಂದು ಮುಕ್ತೇಶ್ವರನಾದ ಮಹಾಶಿವನನ್ನು ಪ್ರಾರ್ಥಿಸಿಕೊಂಡರೆ ಕರುಣಾಮಯನಾದ ಮುಕ್ಕಣ್ಣ ನಮ್ಮೆಲ್ಲ ಪಾಪಗಳನ್ನು ಪರಿಹರಿಸಿ, ದುಃಖ ದಾರಿದ್ರ್ಯಗಳಿಂದ ನಮ್ಮನ್ನು ಮುಕ್ತನಾಗಿಸುವನು.

Advertisement
ಮಾಯೆಯ ಪ್ರಭಾವದಿಂದ ಮಾನವನು ಯಾವುದನ್ನು ಸುಖವೆಂದು ಭ್ರಮಿಸುತ್ತಾನೋ ಮತ್ತು ಅದರ ಪ್ರಾಪ್ತಿಗಾಗಿ ಆತನು ಏನೆಲ್ಲ ವ್ಯವಹಾರಗಳನ್ನು ಮಾಡುತ್ತಾನೋ, ಅವುಗಳ ಮೂಲಕ ಉಂಟಾಗುವ ಕರ್ಮಲೇಪದಿಂದ ದುಃಖ ಮತ್ತು ದಾರಿದ್ರ್ಯಗಳಿಂದ ಪೀಡಿತನಾಗುತ್ತಾನೆ.  ವಸಿಷ್ಠರಿಂದ ರಚಿಸಲ್ಪಟ್ಟ ಈ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ.
ಸರ್ವಪಾಪಗಳಿಂದ ವಿಶುದ್ಧಾತ್ಮರಾಗಿಸಿ, ಶಿವಸಾಯುಜ್ಯವನ್ನು ನೀಡಬಲ್ಲ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ಶಿವರಾತ್ರಿಯ ಉಪಾಸನೆಗೆ ಅತ್ಯಂತ ಪ್ರಶಸ್ತವಾಗಿದೆ.
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಹಳದಿ ಎಲೆರೋಗ | ಜನಪ್ರತಿನಿಧಿಗಳು ಮಾಡಬೇಕಾದ್ದೇನು..? | ಸರ್ಕಾರ ಮಾಡಬೇಕಾದ್ದೇನು..? | ಚುನಾವಣಾ ಸಮಯದಲ್ಲಿ ಏಕೆ ಚರ್ಚೆಯಾಗುತ್ತಿಲ್ಲ..?‌ |
April 23, 2024
7:00 AM
by: ಮಹೇಶ್ ಪುಚ್ಚಪ್ಪಾಡಿ
ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ದಂಡು | ರಾಮನ ದರ್ಶನ ಪಡೆದ 1.5 ಕೋಟಿ ಜನ – ಚಂಪತ್‌ ರಾಯ್‌
April 22, 2024
5:17 PM
by: The Rural Mirror ಸುದ್ದಿಜಾಲ
’ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಮೇ 6 ರಂದು ಸಂಕಲ್ಪ ಆರಂಭ |
April 22, 2024
1:28 PM
by: ದ ರೂರಲ್ ಮಿರರ್.ಕಾಂ
500 ವರ್ಷದ ಬಳಿಕ ಅಯೋಧ್ಯೆಯಲ್ಲಿ ರಾಮನವಮಿ | ಬಾಲ ರಾಮನನ್ನು ಸ್ಪರ್ಶಿಸಿದ ಸೂರ್ಯ ತಿಲಕ | ರಾಮನನ್ನು ನೋಡಲು ಬರುತ್ತಿದೆ ಭಕ್ತರ ದಂಡು |
April 17, 2024
2:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror