ದೈಗೋಳಿಯ ಸಾಯಿನಿಕೇತನ ಸೇವಾಶ್ರಮ | ನೂತನ ಪುನರ್ವಸತಿ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ | ಮಾನವ ಸೇವೆಯೇ ಮಾಧವ ಸೇವೆ – ಎಂ ಪದ್ಮನಾಭ ಪೈ |

April 7, 2022
11:43 PM

ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ನೀಡಿದ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಅನುಸರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ‌ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕರ್ನಾಟಕ ಉತ್ತರದ ರಾಜ್ಯಾಧ್ಯಕ್ಷರಾದ ಎಂ ಪದ್ಮನಾಭ ಪೈ ಅವರು ಹೇಳಿದರು.

Advertisement
Advertisement

ಅವರು ದೈಗೋಳಿಯ ಸಾಯಿನಿಕೇತನ ಸೇವಾಶ್ರಮದ ನೂತನ ಪುನರ್ವಸತಿ ಕೇಂದ್ರ ದ ಕಟ್ಟಡದ ಶಿಲಾನ್ಯಾಸದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಈ ಆಶ್ರಮದ ಮೂಲಕ ನಡೆಸುತ್ತಿರುವ ನಿಸ್ವಾರ್ಥ ಸೇವೆ ಅತ್ಯಂತ ‌ಶ್ಲಾಘನೀಯ. 250 ಕ್ಕೂ ಮೀರಿದ ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವ ಈ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸುವುದರ ಮೂಲಕ ಭಗವಂತನ ಕೃಪಾಶೀರ್ವಾದ ಗಳಿಸೋಣ ಎಂದು ವಿವರಿಸಿದರು.

Advertisement
ವೈದಿಕ ವಿದ್ವಾಂಸರಾದ  ವೇದಮೂರ್ತಿ ಬೋಳಂತಕೋಡಿ ರಾಮಭಟ್ಟರು ಶಿಲಾನ್ಯಾಸವನ್ನು ವೇದೋಕ್ತವಾಗಿ ನಡೆಸಿಕೊಟ್ಟು, ಎಲ್ಲರ ಸಹಕಾರದಿಂದ ಅತಿ ಶೀಘ್ರದಲ್ಲಿ ಈ ಕಟ್ಟಡ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿ ಎಂದು ಆಶೀರ್ವದಿಸಿದರು.

ವಿಶೇಷ ‌ಆಹ್ವಾನಿತರಾಗಿ ಆಗಮಿಸಿದ ಇನ್ಫೋಸಿಸ್ ನ ಮಂಗಳೂರು ವಿಭಾಗದ ಅಧ್ಯಕ್ಷ  ವಾಸುದೇವ ಕಾಮತ್, ಸೇವಾಶ್ರಮದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ,ಸಮಾಜದಲ್ಲಿ ‌ಮಾನಸಿಕ ರೋಗಗಳಿಂದ ಬೀದಿಗೆ ಬೀಳಲ್ಪಟ್ಟ ರೋಗಿಗಳನ್ನು ತಂದು ಸಲಹಿ ಗುಣಮುಖರನ್ನಾಗಿಸಿ ಪುನಃ ಮನೆಗೆ‌ ಕಳಿಸುವ ವ್ಯವಸ್ಥೆ ಹೊಂದಿದ ಇಂತಹ ಸಂಸ್ಥೆ ಅತಿ ವಿರಳ. ಈ ಕಾರ್ಯಕ್ಕೆ ನಾವೆಲ್ಲರೂ ಭಾಗಿಗಳಾಗೋಣ ಎಂದರು.

Advertisement

ಕಳೆದ ಕೆಲವು ವರ್ಷಗಳಿಂದ ಆಶ್ರಮದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಬೆಂಗಳೂರಿನ ಭಟ್‌ ಬಯೋಟೆಕ್ ಕಂಪೆನಿಯ ಸ್ಥಾಪಕ ನಿರ್ದೇಶಕ ಡಾ|ಶಾಮ ಭಟ್ಟರು ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ತಮ್ಮ ದೇಣಿಗೆಯನ್ನು ಘೋಷಿಸಿದರು.

Advertisement
ಶ್ರೀ ‌ಸತ್ಯಸಾಯಿ ಸೇವಾಸಂಸ್ಥೆಗಳ ಕರ್ನಾಟಕ- ಉತ್ತರದ ಮಹಿಳಾ ಸೇವಾ ಸಂಯೋಜಕಿ  ಪ್ರಿಯಾ ಪಿ ಪೈ, ದ.ಕ. ಜಿಲ್ಲಾಧ್ಯಕ್ಷರಾದ  ಪ್ರಸನ್ನ ಭಟ್ ಬಲ್ನಾಡು, ಕಾಸರಗೋಡು ಜಿಲ್ಲಾಧ್ಯಕ್ಷರಾದ  ಹಿರಣ್ಯ ಮಹಾಲಿಂಗ ಭಟ್ , ಕಾಂಪ್ಕೋದ ನಿರ್ದೇಶಕ ಡಾ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಿಶೇಷ ಅತಿಥಿಗಳಾಗಿದ್ದು ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ಸೇವಾರೂಪದಲ್ಲಿ ನೂತನ ಕಟ್ಟಡದ. ನಕ್ಷೆ ನಿರ್ಮಿಸಿದ ಇಂಜಿನಿಯರ್  ‌ಪೂರ್ಣಿಮಾ ಅವರನ್ನು ಗೌರವಿಸಲಾಯಿತು. ಆಶ್ರಮದ ನಿವಾಸಿ  ‌ರೇಖಾ ಪ್ರಭು ಪ್ರಾರ್ಥನೆ ಮಾಡಿದರು. ಡಾ ಶಾರದಾ ಸ್ವಾಗತಿಸಿ  ಡಾ ಉದಯಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅಮೈ ಸುಬ್ರಹ್ಮಣ್ಯ ಭಟ್ ವಂದನಾರ್ಪಣೆಗೈದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ
ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ
ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror