ದ ಕ ಜಿಲ್ಲೆಯಲ್ಲಿ ಅಭಿವೃದ್ಧಿ ಪರವಾದ ಹೆಜ್ಜೆ ಇರಿಸಿದ ಎಎಪಿ |‌ ಅನೇಕ ಪ್ರಮುಖರಿಂದ ಬೆಂಬಲ | ಎಂ ಬಿ ಪುರಾಣಿಕ್ ಎಎಪಿ ಸಭೆಗೆ ಹಾಜರು |

October 4, 2022
1:54 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಆಮ್‌ ಆದ್ಮಿ ಪಕ್ಷ ಅಭಿವೃದ್ಧಿ ನೆಲೆಯಲ್ಲಿ ತನ್ನ ಚಟುವಟಿಕೆ ಆರಂಭಗೊಳಿಸಿದೆ. ಇದೇ ಕಾರಣದಿಂದ ಗಾಂಧಿ ಜಯಂತಿಯಂದು ನಾಗರಿಕ ಕುಂದುಕೊರತೆಗಳ ಪೋರ್ಟಲ್‌ ಅನಾವರಣಗೊಳಿಸಿದೆ. ಜನಪರವಾದ ಕೆಲಸಗಳ ಕಡೆಗೆ ಹೆಜ್ಜೆ ಇರಿಸಿರುವ ದ ಕ ಜಿಲ್ಲೆಯ ಎಎಪಿ ಪರವಾಗಿ ಅನೇಕ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕೆಲಸಗಳಿಗೆ ಬೆಂಬಲವಿದೆ ಎಂದು ಹಿಂದೂ ಮುಖಂಡ, ದಕ್ಷಿಣ ಕನ್ನಡ ಜಿಲ್ಲೆಯ ಸಂಘಪರಿವಾರದ ಪ್ರಮುಖರಾದ ಎಂ ಬಿ ಪುರಾಣಿಕ್‌ ಅವರು ನಾಗರಿಕ ಕುಂದುಕೊರತೆಗಳ ಪೋರ್ಟಲ್‌ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ಸಮಯಗಳಿಂದ ಕೋಮುಗಲಭೆ ಹಾಗೂ ಕೋಮು ಸೂಕ್ಷ್ಮ ಪ್ರದೇಶಗಳಾಗಿ ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ಕಾಣಿಸಿಕೊಂಡಿದೆ. ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಹಿಂದೆ ಉಳಿದಿದೆ. ಸುಳ್ಯದಿಂದ ತೊಡಗಿ ಮಂಗಳೂರುವರೆಗೆ ಬಹುತೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದೆ. ಚುನಾವಣೆಯ ಕೆಲ ಸಮಯಗಳ ಹಿಂದೆ ಕೋಮು ಸೂಕ್ಷ್ಮ ಸಂಗತಿಗಳು ನಡೆದು ಆ ಮೂಲಕ ಜನರಲ್ಲಿ ಮತೀಯ ಹಾಗೂ ಮತೀಯವಾದ ಸಂಚಲನ ಸೃಷ್ಟಿಸಿ ಮತ ಗಳಿಸುವ ತಂತ್ರಗಳು ನಡೆಯುತ್ತಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳ ಕಡೆಗೂ ಮತದಾರರು ಆದ್ಯತೆ ನೀಡದೇ ಇರುವುದು  ಕಂಡುಬಂದಿದೆ ಎನ್ನುವುದು  ವರದಿ.

ಇದೇ ಕಾರಣದಿಂದ ಸಾಕಷ್ಟು ಪಾದಯಾತ್ರೆ ನಡೆದರೂ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಜನರ ಪ್ರತಿರೋಧ ಇದ್ದರೂ ಎತ್ತಿನಹೊಳೆ ಯೋಜನೆ ಅನುಷ್ಟಾನ ಆಗಿಯೇ ಬಿಟ್ಟಿದೆ. ಅಷ್ಟೂ ಪಾದಯಾತ್ರೆ ಮಾಡಿರುವ ಜನರು ನಂಬಿ ಮೋಸ ಹೋದರು. ಇದೇ ವೇಳೆ ಮಂಗಳೂರು-ಬೆಂಗಳೂರು ಹೆದ್ದಾರಿ, ಮಂಗಳೂರು ನಗರ ಅಭಿವೃದ್ಧಿ, ಟೋಲ್‌ ಸಮಸ್ಯೆ, ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಸ್ಯೆಗಳು ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಕಡೆಗೆ ಇಂದಿಗೂ ಧ್ವನಿಯಾಗುವವರು ಕಡಿಮೆಯಾಗಿದ್ದಾರೆ. ಆದರೆ ಮತೀಯವಾದ ಚರ್ಚೆಗಳು ನಡೆದು ಕೇಸುಗಳಾಗಿ ಅಲೆದು ಉದ್ಯೋಗ, ಆರ್ಥಿಕ ಸಂಕಷ್ಟ ಅನುಭವಿಸಿದವರು ಅನೇಕ ಮಂದಿ ಇದ್ದಾರೆ. ಇಂತಹ ಅನೇಕರು ಈಗ ಎಎಪಿ ಪರವಾದ  ಒಲವು ಹೊಂದಿದ್ದಾರೆ ಎಂದು ಪಕ್ಷದ ಸಮೀಕ್ಷೆ ತಿಳಿಸಿತ್ತು.

ಎಎಪಿಯ ಅಭಿವೃದ್ಧಿ ಪರವಾದ ಚಿಂತನೆಗೆ ಒಲವು ತೋರಿದ ದ ಕ ಜಿಲ್ಲೆಯ ಪ್ರಮುಖರಾದ ವಿಜಯ ವಿಠಲನಾಥ ಶೆಟ್ಟಿ ಸೇರಿದಂತೆ ಹಲವು ಮಂದಿ ಎಎಪಿ ಶಾಲು ಹಾಕಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.

ಸಂತೋಷ್‌ ಕಾಮತ್

ಈಗಾಗಲೇ ಆನ್‌ ಲೈನ್‌ ಮೂಲಕ ನಡೆಸಿದ ಸದಸ್ಯತ್ವ ಅಭಿಯಾನದಲ್ಲಿ ಸಾಕಷ್ಟು ಜನರು ಎಎಪಿ ಪರವಾಗಿ ಒಲವು ಹೊಂದಿದ್ದಾರೆ. ಅಂದರೆ ಅಭಿವೃದ್ಧಿ ಪರವಾದ ಒಲವು ಹೊಂದಿದ್ದರು. ಇದೇ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನಾಗರಿಕ ಕುಂದುಕೊರತೆಗಳ ಪೋರ್ಟಲನ್ನು ದಕ್ಷಿಣ ಕನ್ನಡ ಜಿಲ್ಲಾ ಎಎಪಿ ತೆರೆದಿದೆ. ಈ ಮೂಲಕ ಜನರ ಪರವಾಗಿ ಧ್ವನಿ ಎತ್ತಲಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಹೇಳಿದ್ದಾರೆ.

 

ಎಎಪಿಯು ಪ್ರಮುಖವಾಗಿ ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡುತ್ತದೆ. ಅದರ ಜೊತೆಗೆ ಜನರಿಗೆ ಅವಶ್ಯವಾಗಿರುವ ಶಿಕ್ಷಣ, ಆರೋಗ್ಯ, ಭ್ರಷ್ಟಾಚಾರ ನಿರ್ಮೂಲನೆ, ದೇಶ ಪ್ರೇಮ, ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಕೆಲಸ ಮಾಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಕೃಷಿ ಅಭಿವೃದ್ಧಿ ಹಾಗೂ ಕೃಷಿ ಪರವಾದ ಧ್ವನಿಯನ್ನೂ ಎತ್ತಲು ಯೋಜನೆ ರೂಪಿಸಿದೆ. ಇದೆಲ್ಲದರ ಮೊದಲ ಭಾಗವಾಗಿ ಮಂಗಳೂರು ನಗರ ಪಾಲಿಕೆಗೆ ಸೀಮಿತವಾದ ನಾಗರಿಕ ಕುಂದುಕೊರತೆ ಪೋರ್ಟಲ್‌ ರಚನೆ ಮಾಡಲಾಗಿದೆ. ಮುಂದೆ ದ ಕ ಜಿಲ್ಲೆಗೂ ವಿಸ್ತರಿಸಲಾಗುತ್ತದೆ. ದ ಕ ಜಿಲ್ಲೆ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಉದ್ದೇಶ ಎಂದು ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ ಹೇಳುತ್ತಾರೆ.

ಆಮ್‌ ಆದ್ಮಿ ಪಕ್ಷವು ಯಾವುದೇ ಜಾತಿ, ಧರ್ಮದ ಪರವಾಗಿ ಕೆಲಸ ಮಾಡುವುದಿಲ್ಲ, ಲಾಬಿಯೂ ಮಾಡುವುದಿಲ್ಲ. ಯಾರೇ, ಯಾವುದೇ ಧರ್ಮದ  ವ್ಯಕ್ತಿಗಳು ತಪ್ಪು ಮಾಡಿದರೆ ತಪ್ಪೇ. ದೇಶದ ವಿರುದ್ಧವಾದ ಯಾವುದೇ ಚಟುವಟಿಕೆ ನಡೆದರೂ ಎಎಪಿ ಖಂಡಿಸುತ್ತದೆ. ದೇಶಾಭಿಮಾನ, ಗ್ರಾಮಾಭಿಮಾನ ಬೆಳೆಸಿಕೊಂಡು ಸಂವಿಧಾನಕ್ಕೆ ಬದ್ಧವಾಗಿ ಸಮಾನತೆಯ ಆಶಯದಂತೆ  ಅಭಿವೃದ್ಧಿ ಕಾರ್ಯಗಳಲ್ಲಿ ಎಎಪಿ ತೊಡಗಿಸಿಕೊಳ್ಳುತ್ತದೆ ಎಂದು ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್‌ ಎಡಮಲೆ ಹೇಳುತ್ತಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror