ದುಬಾರಿ ದರ ಹಾಗೂ ದ ಕ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಕುರಿತು ಸೆ. 22 ರಂದು ಸಮಾನ ಮನಸ್ಕರ ದುಂಡು ಮೇಜಿನ ಸಭೆ ಕೊಡಿಯಾಲ್ ಬೈಲಿನ ಸಿಬಿಇಯು ಗೋಲ್ಡನ್ ಜ್ಯುಬಿಲಿ ಹಾಲ್ ನಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಸಮಾನ ಮನಸ್ಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಸಭೆಯನ್ನು ಆಯೋಜಿಸಿದ್ದಾರೆ.
ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಸರಕಾರ ಕಡೆಗಣಿಸುತ್ತಿರುವುದರ ಪರಿಣಾಮ ಜನಸಾಮಾನ್ಯರು ಗುಣಮಟ್ಟದ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗಳು ಜನರ ಅನಾರೋಗ್ಯಕ್ಕೆ ಪರಿಹಾರ ಒದಗಿಸಲು ವಿಫಲವಾಗಿದ್ದರೆ, ಖಾಸಗಿ ಆಸ್ಪತ್ರೆಗಳ ನಿಯಮ ಬಾಹಿರ ದುಬಾರಿ ದರಗಳು ಜನಸಾಮಾನ್ಯರ ಬದುಕುವ ಹಕ್ಕನ್ನೆ ನಿರಾಕರಿಸುತ್ತಿದೆ. ಕೊರೋನಾ ಕಾಲದಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಜನರು ಹತಾಶರಾಗಿದ್ದಾರೆ. ಈ ಸ್ಥಿತಿಗೆ ಎದುರಾಗಿ ಡಿವೈಎಫ್ಐ ಕಳೆದು ಎರಡು ತಿಂಗಳಿಂದ ಜಿಲ್ಲೆಯಾದ್ಯಂತ ಹೋರಾಟವನ್ನು ನಡೆಸುತ್ತಿದೆ. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಆರೋಗ್ಯ ಕ್ಷೇತ್ರದ ಈ ಸಮಸ್ಯೆಗಳ ಎದುರಾಗಿ ಜನಾಭಿಪ್ರಾಯವನ್ನು ಮತ್ತಷ್ಟು ಕ್ರೋಢೀಕರಿಸುವ, ಹೋರಾಟವನ್ನು ಮತ್ತಷ್ಟು ವಿಶಾಲವಾಗಿ ಮುಂದುವರಿಸುವ ಹಿನ್ನಲೆಯಲ್ಲಿ ಸೆ. 22 ರಂದು ಕೊಡಿಯಾಲ್ ಬೈಲಿನ ಸಿಬಿಇಯು ಗೋಲ್ಡನ್ ಜ್ಯುಬಿಲಿ ಹಾಲ್ ನಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಸಮಾನ ಮನಸ್ಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement