ಅ.11 ರಿಂದ ಅನ್ವಯವಾಗುವಂತೆ ಸಹಕಾರಿ ಸಂಘಗಳ ಮೂಲಕ ಹಾಲು ಒದಗಿಸುವ ಹೈನುಗಾರರಿಗೆ 2.05 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ವ್ಯಾಪ್ತಿಗಳಲ್ಲಿ ಹಾಲು ಒಕ್ಕೂಟ 732 ಸಹಕಾರಿ ಸಂಘಗಳನ್ನು ಹೊಂದಿದ್ದು, ಪ್ರತಿನಿತ್ಯ 68 ಸಾವಿರ ಹೈನುಗಾರರು ಒಕ್ಕೂಟಕ್ಕೆ ಹಾಲು ನೀಡುತ್ತಿದ್ದಾರೆ. ಹೈನುಗಾರರನ್ನು ಪ್ರೋತ್ಸಾಹಿಸಲು ಹೈನುಗಾರಿಕೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಅ.11 ರಿಂದ ಅನ್ವಯವಾಗುವಂತೆ ಸಹಕಾರಿ ಸಂಘದ ಮೂಲಕ ಹಾಲು ಒದಗಿಸುವ ಹೈನುಗಾರರಿಗೆ 2.05ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸದ್ಯ ರಾಜ್ಯ ಸರ್ಕಾರಕ್ಕೆ ಪ್ರೋತ್ಸಾಹ ಧನ ಹೆಚ್ಚಿಸುವ ಕುರಿತಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಅದು ಜಾರಿಯಾಗುವವರೆಗೆ ಈ ಪ್ರೋತ್ಸಾಹ ಧನ ಮುಂದುವರಿಯಲಿದೆ, ಈ ಮೂಲಕ ಹೈನುಗಾರರು ಗುಣಮಟ್ಟದ ಹಾಲು ಸಹಕಾರಿ ಸಂಘಕ್ಕೆ ನೀಡಲು ಅನುವು ಮಾಡಿಕೊಡುವ ಜೊತೆಗೆ ಹಾಲಿನ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಉದ್ದೇಶವನ್ನು ಹೊಂದಿದೆ.