ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ದಕ  ಜಿ.ಪಂ ಸಿಇಓ ಸೂಚನೆ

March 24, 2025
8:05 PM

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗ್ರಾಮ ಪಂಚಾಯತ್‍ಗಳು ಮುನ್ನೆಚ್ಚರಿಕೆ ವಹಿಸುವಂತೆ  ಜಿಲ್ಲಾ ಪಂಚಾಯಿತಿ ಸಿಇಒ  ಡಾ. ಆನಂದ್ ಕೆ   ಸೂಚಿಸಿದರು.

Advertisement

ಅವರು ಸೋಮವಾರ ಜಿಲ್ಲಾ  ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ   ಅಧ್ಯಕ್ಷತೆ ವಹಿಸಿ ಮಾತನಾಡಿದರು.  ನೀರು ಸದಾ ಪೂರೈಕೆ ಇರುವಂತೆ  ಗಮನಹರಿಸಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು   ಅವರು ಸೂಚಿಸಿದರು. ನೀರು ಸರಬರಾಜು ಪೈಪ್‍ಲೈನ್ ಅಳವಡಿಸಲು  ಲೋಕೋಪಯೋಗಿ ರಸ್ತೆಗಳ ಕತ್ತರಿಸುವ ಅಗತ್ಯವಿದ್ದರೆ ಸಂಬಂಧಪಟ್ಟ ಇಲಾಖೆಯು ಸಮನ್ವಯದೊಂದಿಗೆ  ತ್ವರಿತವಾಗಿ ಕಾಮಗಾರಿ ನಡೆಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು  ಕಾಮಗಾರಿಯಲ್ಲಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ ಎಂದು ಅವರು  ಹೇಳಿದರು. ಗ್ರಾಮ ಪಂಚಾಯತ್‍ಗಳು ಹೊಸ ಬೋರ್‍ವೆಲ್‍ಗಳು ಅಗತ್ಯ ವಿದ್ದರೆ ತಮ್ಮ ಸ್ವಂತ ನಿಧಿಯಿಂದ ಕೊರೆಯಬಹುದಾಗಿದೆ. ಹಾಲಿ ಬೋರ್‍ವೆಲ್‍ಗಳ   ಪುನಶ್ಚೇತನವನ್ನು ಜಿಲ್ಲಾ ಪಂಚಾಯತ್‍ನಿಂದ ಮಾಡಲಾಗುವುದು ಎಂದು  ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು  ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು  ಜಲಜೀವನ್ ಮಿಷನ್ ಸೇರಿದಂತೆ  ವಿವಿಧ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ  ಜಯಲಕ್ಷ್ಮಿ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಂಜಿನಿಯರಿಂಗ್ ಇಲಾಖೆ ಇ.ಇ  ರಘುನಾಥ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ  ಇ.ಇ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ
April 26, 2025
9:21 AM
by: The Rural Mirror ಸುದ್ದಿಜಾಲ
ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror