#ದಾಮಾಯಣ | ಪ್ರತೀ ಬದುಕಿಗೆ ತಾಂಟಿಕೊಳ್ಳುವ ದಾಮೋದರ…! | ಉದ್ಯೋಗ ಹುಡುಕುವ ಯುವಕನ ಕತೆ | ಹೊಸ ಹುಡುಗರ ಹೆಮ್ಮೆಯ ಹೆಜ್ಜೆ |

July 12, 2023
11:33 AM
ಒಂದು ವಿಶಿಷ್ಟವಾದ ಚಲನಚಿತ್ರ ತೆರೆಯ ಮೇಲೆ ಬರುತ್ತಿದೆ. ಹೆಸರು "ದಾಮಾಯಣ". ಓದಿದ ಮೇಲೆ ಯಾರೂ ಮಾಡದ ಕೆಲಸ ಬ್ಯುಸಿನೆಸ್‌, ಸಿನೆಮಾ, ಎಗ್ರಿಕಲ್ಚರ್...!‌ ಇದು ಮೂರು ಕೂಡಾ ಪ್ರವಾಹದ ವಿರುದ್ಧ ಆಯ್ಕೆಗಳು. ಆದರೆ ಸುಳ್ಯದ ಈ ಹುಡುಗರು ಆಯ್ಕೆ ಮಾಡಿಕೊಂಡದ್ದು ಸಿನಿಮಾ...!. ಪ್ರವಾಹದ ವಿರುದ್ಧದ ಈಜಿನಲ್ಲಿ  ಅತ್ಯುತ್ತಮ ಸಂದೇಶ ನೀಡುವ ಹಾಸ್ಯ ಮಿಶ್ರಿತ ಚಿತ್ರವನ್ನು ತೆರೆದಿಟ್ಟಿದ್ದಾರೆ. ಉತ್ತಮ ಸಂದೇಶ ಇದೆ. ಕುಟುಂಬ ಸಮೇತರಾಗಿ ನೋಡಬಹುದಾದ ಒಂದು ಸಿನಿಮಾ.

ಒಂದು ವಿಶಿಷ್ಟವಾದ ಚಲನಚಿತ್ರ ತೆರೆಯ ಮೇಲೆ ಬರುತ್ತಿದೆ. ಹೆಸರು “ದಾಮಾಯಣ”. ಹತ್ತಾರು ಎಕ್ರೆ ಅಡಿಕೆ ತೋಟದ  ಹಳ್ಳಿ ಹುಡುಗನೊಬ್ಬ ಉದ್ಯೋಗ ಅರಸುವ ಹಾಗೂ ಸೋಲುವ, ಬದುಕಲ್ಲಿ ಗೆಲ್ಲುವ ಕಥೆ. ಉದ್ಯೋಗ ಏನು ಎಂಬುದನ್ನು ತಿಳಿಸುವ ಕಥೆ. ಎರಡೂವರೆ ಗಂಟೆ ಎಲ್ಲೂ ಬೋರಾಗದ ಹಾಗೆ ನವಿರಾದ ಹಾಸ್ಯದಿಂದ ಚಿತ್ರ ನಡೆಯುತ್ತದೆ. ಜು.14 ರಂದು ರಾಜ್ಯಾದ್ಯಂತ ತೆರೆಯ ಮೇಲೆ ಬರಲಿದೆ. ಚಿತ್ರದ  ದಾಮೋದರನ ಪಯಣ ಮುಂದುವರಿಯಲಿದೆ.

Advertisement

ಓದಿದ ಮೇಲೆ ಯಾರೂ ಮಾಡದ ಕೆಲಸ ಬಿ ಸಿ ಎ..!. ಬ್ಯುಸಿನೆಸ್‌, ಸಿನೆಮಾ, ಎಗ್ರಿಕಲ್ಚರ್…!‌ ಇದು ಮೂರು ಕೂಡಾ ಪ್ರವಾಹದ ವಿರುದ್ಧ ಆಯ್ಕೆಗಳು. ಆದರೆ ಸುಳ್ಯದ ಈ ಹುಡುಗರು ಆಯ್ಕೆ ಮಾಡಿಕೊಂಡದ್ದು ಸಿನಿಮಾ…!. ಪ್ರವಾಹದ ವಿರುದ್ಧದ ಈಜಿನಲ್ಲಿ  ಅತ್ಯುತ್ತಮ ಸಂದೇಶ ನೀಡುವ ಹಾಸ್ಯ ಮಿಶ್ರಿತ ಚಿತ್ರವನ್ನು ತೆರೆದಿಟ್ಟಿದ್ದಾರೆ. ಸಂಗೀತ, ಛಾಯಾಗ್ರಹಣ, ಸಾಹಿತ್ಯ … ಹೀಗೇ ಎಲ್ಲವೂ ಉತ್ತಮವಾಗಿದೆ. ಈ ತಂಡಕ್ಕೆ ಶಹಭಾಸ್‌ ಹೇಳುವವರು ವೀಕ್ಷಕರು. ನಿಜಕ್ಕೂ ಈ ಹೊಸ ಹುಡುಗರ ಪ್ರಯತ್ನಕ್ಕೆ ಶಹಭಾಸ್…‌

ದಾಮಾಯಣ ಚಿತ್ರದ ತಂಡ

ಹೆಸರು ದಾಮಾಯಣ. 2018 ರಲ್ಲಿ ಆರಂಭಗೊಂಡ ಪ್ರಾಜೆಕ್ಟ್‌  2019 ಶೂಟಿಂಗ್‌ ಶುರುವಾಯಿತು. ಕೊರೋನಾ ಕಾರಣದಿಂದ ತಡವಾಯಿತು. ಈ ನಡುವೆಯೇ ಹಲವು ಸಿನಿಮಾ  ಪೆಸ್ಟಿವಲ್‌ ಗಳಲ್ಲಿ ಭಾಗವಹಿಸಿತು. ಇದೀಗ 2023 ಜುಲೈ 14 ಕ್ಕೆ ಬಿಡುಗಡೆಯಾಗುತ್ತಿದೆ.  ಈಗಾಗಲೇ ಟೈಟಲ್‌ ಸಾಂಗ್‌ಗೆ ಉತ್ತಮ ಪತಿಕ್ರಿಯೆ ಬಂದಿದೆ. ಸುಳ್ಯದ ಯುವಕ ಶ್ರೀಮುಖ ಈ ಚಿತ್ರದ ರಚನೆ ಮಾಡಿ, ನಿರ್ದೇಶನ ಮಾಡಿ, ನಟನೆಯನ್ನೂ ಮಾಡಿದ್ದಾರೆ. ಕೀರ್ತನ್‌ ಬಾಳಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಘಾ ಭಟ್‌, ಆದಿತ್ಯ ಬಿಕೆ, ಅಕ್ಷಯ್‌ ರೇವಾಂಕರ್‌, ಡಾ.ಪ್ರತಿಭಾ ರೈ, ಆಶ್ರಿತಾ ಶ್ರೀನಿವಾಸ್, ಪದ್ಮಪ್ರಸಾದ್‌ ಜೈನ್‌ ಮೊದಲಾದವರು ನಟಿಸಿದ್ದಾರೆ. ಇವರೆಲ್ಲಾ ಸಿನಿಮಾ ರಂಗಕ್ಕೆ ಹೊಸಬರೇ ಆಗಿದ್ದಾರೆ.

ಚಿತ್ರ ಬಿಡುಗಡೆ ಬಳಿಕ

ದಕ್ಷಿಣ ಕನ್ನಡ ಜಿಲ್ಲೆಯ  ಸುಳ್ಯದ ಶ್ರೀಮುಖ ನಿರ್ದೇಶನ ಮಾಡಿದ್ದರೆ ನಿರ್ಮಾಪಕರಾಗಿ ರಾಘವೇಂದ್ರ ಕುಡ್ವ ಅವರು ತೊಡಗಿಸಿದ್ದಾರೆ.  ಕೀರ್ತನ್‌ ಬಾಳಿಲ ಸಂಗೀತ ನಿರ್ದೇಶನ ಮಾಡಿದ್ದಾರೆ.  ಸಿದ್ದು ಎಸ್‌ ಚಿತ್ರೀಕರಣ ಮಾಡಿದ್ದಾರೆ. ಕಾರ್ತಿಕ್‌ ಸಿಎಂ ಚಿತ್ರದ ಎಡಿಟಿಂಗ್‌ ಕಾರ್ಯ ಮಾಡಿದ್ದಾರೆ. ಮಹೇಶ್‌ ಕಡಂ ಸಹ ನಿರ್ದೇಶನ ಮಾಡಿದ್ದಾರೆ.

ದಾಮಾಯಣ

ಈ ಚಿತ್ರದಲ್ಲಿ ದಾಮೋದರ ಅವರದು ವಿಶೇಷ ಪಾತ್ರವಾಗಿದೆ. ಚಿತ್ರದ ಹಿರೋ ಎನ್ನುವುದಕ್ಕಿಂತಲೂ ಎಲ್ಲರ ಬದುಕಿನಲ್ಲೂ ತಾಂಟಿ ಹೋಗುವ ಪ್ರಸಂಗಗಳೇ ಇಲ್ಲಿ ವ್ಯಕ್ತವಾಗಿದೆ. ವ್ಯಕ್ತಿಯೊಬ್ಬ ಕಲಿಯುವುದು, ಆ ನಂತರ ಉದ್ಯೋಗ ಅರಸುವುದು, ಅಲ್ಲಿ ಬರುವ ಸಂಕಷ್ಟಗಳು, ಕಿರಿಕಿರಿ ನೀಡುವ ಸನ್ನಿವೇಶಗಳು, ಸವಾಲುಗಳು, ಇನ್ನೊಬ್ಬನ ಯಶಸ್ಸಿನ ಆಸೆಗಳು, ಶ್ರಮ ಪಡದೇ ಹಣ ಆಗಬೇಕು ಎಂಬ ಆಸೆಗಳು  ಇದೆಲ್ಲಾ ಈ ಪಾತ್ರದ ಮೂಲಕ ವ್ಯಕ್ತವಾಗುತ್ತದೆ. ಸಾಂದರ್ಭಿಕ ಹಾಸ್ಯದ ಮೂಲಕ ನಗೆಗಡಲಲ್ಲಿ ತೇಲಿಸುತ್ತದೆ ಈ ಚಿತ್ರ. ಎಲ್ಲರೂ ಹೊಸಬರಾದರೂ ಯಾವುದೇ ಕೊರತೆಯಾಗದಂತೆ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ವಿಶೇಷವಾಗಿ ಇದರಲ್ಲಿ ಯಕ್ಷಗಾನ ಕಲಾವಿದ ಪೆರುವಡಿ ನಾರಾಯಣ ಭಟ್‌ ಅವರು ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ.ಮೈಮ್‌ ರಾಮ್‌ ದಾಸ್‌ ಅವರೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಯಾರೊಬ್ಬರೂ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸದೇ ಕಡಿಮೆ ಬಜೆಟ್‌ನಲ್ಲಿ ಈ ಚಿತ್ರವನ್ನು ಯುವಕರು ಮಾಡಿ ತೋರಿಸಿದ್ದಾರೆ. ಗ್ರಾಮೀಣ ಭಾಗವೊಂದರ ಈ ಯುವಕರ ಶ್ರಮ ಸಾರ್ಥಕವಾಗಿದೆ. ಕರಾವಳಿಯಲ್ಲಿಯೇ ಎಲ್ಲಾ  ಶೂಟಿಂಗ್‌ ಮಾಡಲಾಗಿದೆ. ವಿಶೇಷವಾಗಿ ಸುಳ್ಯ, ಪುತ್ತೂರು, ಮಂಗಳೂರು ಸೇರಿದಂತೆ ಕರಾವಳಿ  ಪ್ರದೇಶದಲ್ಲಿಯೇ ಶೂಟಿಂಗ್‌ ನಡೆದಿದೆ. ಒಂದು ದೃಶ್ಯ ಮಾತ್ರಾ ಬೆಂಗಳೂರಿನ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದೆ. (ಚಿತ್ರದ ಟ್ರೇಲರ್‌ ಇಲ್ಲಿದೆ…. )

ಚಿತ್ರದ ಕೊನೆಗೆ ಅವಧಿಯಲ್ಲಿ ಉತ್ತಮ ಸಂದೇಶ ನೀಡಲಾಗಿದೆ. ಉದ್ಯೋಗ ಎಂದರೆ ಏನು ? ಎಂಬ ಪ್ರಶ್ನೆಗೆ ಉತ್ತರ ಇದೆ. ಕೃಷಿ ಕೂಡಾ ಒಂದು ಉದ್ಯೋಗ , ಪತ್ರಿಕೆ ಮಾರಾಟ ಕೂಡಾ ಉದ್ಯೋಗವೇ ಆಗಿದೆ. ಸ್ಟೇಟಸ್‌ ಹುಡುಕುತ್ತಾ ಹೋದರೆ ಉದ್ಯೋಗಕ್ಕೆ ಅರ್ಥವಿಲ್ಲ. ಬದುಕಿನಲ್ಲಿ ಸಂತಸವೇ ಮುಖ್ಯ ಎನ್ನುವುದನ್ನೂ ಸೂಕ್ಷ್ಮವಾಗಿ ಹೇಳುತ್ತದೆ ಈ ಚಿತ್ರ. ಕೃಷಿ ಕುಟುಂಬದಿಂದಲೇ ಬಂದಿರುವ ಎಲ್ಲಾ ಕಲಾವಿದರೂ ಕೃಷಿಗೆ ಗೌರವವನ್ನು ಈ ಚಿತ್ರದಲ್ಲಿ ನೀಡಿರುವುದು ಬಹು ಸೂಕ್ಷ್ಮವಾಗಿ ಗಮನಿಸಬೇಕು. ಕೃಷಿ ಇದ್ದರೂ ನಗರದಲ್ಲಿ ಉದ್ಯೋಗ ಏಕೆ ಎನ್ನುವ ಒಂದು ಪ್ರಶ್ನೆ ಚಿತ್ರದ ಕೊನೆಗೆ ಬರುತ್ತದೆ. ಅದಕ್ಕೆ ಉತ್ತರ ನಾಯಿಬಾಲ ಡೊಂಕು…!. ಇನ್ನೊಬ್ಬನ ಯಶಸ್ಸಿನ ಹಿಂದೆ ಹೋಗುವ ಬದಲಾಗಿ ತನ್ನದೇ ಮಾದರಿಯ ಮೂಲಕ ಯಶಸ್ಸು ಕಾಣಬೇಕು ಎನ್ನುವ ಚಿತ್ರದ ಸಂದೇಶವು ಈ ಚಿತ್ರದ ಮೂಲಕ ಸುಳ್ಯದ ಯುವಕರ ಯಶಸ್ಸೂ ಕಾಣಲಿದೆ.

ಇನ್ನೂ ಒಂದು ಪ್ರಮುಖವಾದ ಅಂಶವೆಂದರೆ ಚಿತ್ರದ ಸಂಗೀತ. ಉತ್ತಮವಾದ ಸಂಗೀತ ನಿರ್ದೇಶನ ಮಾಡಿದ್ದಾರೆ ಕೀರ್ತನ್‌ ಬಾಳಿಲ. ಒಟ್ಟು ಐದು ಹಾಡುಗಳು ಇವೆ. ಎಲ್ಲವೂ ಉತ್ತಮ ಸಾಹಿತ್ಯದಿಂದ ಕೂಡಿರುವ ಹಾಡುಗಳೇ ಆಗಿವೆ. ಚಿತ್ರಕ್ಕೆ ಹೊಂದುವ ಸಾಹಿತ್ಯವನ್ನು ರಚಿಸಿದ್ದಾರೆ.

ಒಟ್ಟಾರೆಯಾಗಿ ಕುಟುಂಬ ಸಮೇತರಾಗಿ ನೋಡಬಹುದಾದ ಒಂದು ಉತ್ತಮ ಚಿತ್ರ ದಕ್ಷಿಣ ಕನ್ನಡ ಜಿಲ್ಲೆಯಿಂದ ಅದರಲ್ಲೂ ಸುಳ್ಯದ ಯುವಕರ ತಂಡ ಚಿತ್ರರಂಗಕ್ಕೆ ನೀಡಿದೆ. ಗ್ರಾಮೀಣ ಭಾಗದ ಯುವಕರ ಶ್ರಮಕ್ಕೆ ಗೆಲುವಾಗಲಿ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ
April 23, 2025
3:13 PM
by: ಸಾಯಿಶೇಖರ್ ಕರಿಕಳ
ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ | ಅಂಚೆ ಇಲಾಖೆಯಿಂದ 6 ವರ್ಷಗಳಿಂದ ಯಶಸ್ವಿ | ದೆಹಲಿಯವರೆಗೂ ಮಾವಿನಹಣ್ಣು ರವಾನೆ |
April 23, 2025
11:24 AM
by: ದ ರೂರಲ್ ಮಿರರ್.ಕಾಂ
ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!
April 23, 2025
8:13 AM
by: ದ ರೂರಲ್ ಮಿರರ್.ಕಾಂ
ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group