ಒಂದು ವಿಶಿಷ್ಟವಾದ ಚಲನಚಿತ್ರ ತೆರೆಯ ಮೇಲೆ ಬರುತ್ತಿದೆ. ಹೆಸರು “ದಾಮಾಯಣ”. ಹತ್ತಾರು ಎಕ್ರೆ ಅಡಿಕೆ ತೋಟದ ಹಳ್ಳಿ ಹುಡುಗನೊಬ್ಬ ಉದ್ಯೋಗ ಅರಸುವ ಹಾಗೂ ಸೋಲುವ, ಬದುಕಲ್ಲಿ ಗೆಲ್ಲುವ ಕಥೆ. ಉದ್ಯೋಗ ಏನು ಎಂಬುದನ್ನು ತಿಳಿಸುವ ಕಥೆ. ಎರಡೂವರೆ ಗಂಟೆ ಎಲ್ಲೂ ಬೋರಾಗದ ಹಾಗೆ ನವಿರಾದ ಹಾಸ್ಯದಿಂದ ಚಿತ್ರ ನಡೆಯುತ್ತದೆ. ಜು.14 ರಂದು ರಾಜ್ಯಾದ್ಯಂತ ತೆರೆಯ ಮೇಲೆ ಬರಲಿದೆ. ಚಿತ್ರದ ದಾಮೋದರನ ಪಯಣ ಮುಂದುವರಿಯಲಿದೆ.
ಓದಿದ ಮೇಲೆ ಯಾರೂ ಮಾಡದ ಕೆಲಸ ಬಿ ಸಿ ಎ..!. ಬ್ಯುಸಿನೆಸ್, ಸಿನೆಮಾ, ಎಗ್ರಿಕಲ್ಚರ್…! ಇದು ಮೂರು ಕೂಡಾ ಪ್ರವಾಹದ ವಿರುದ್ಧ ಆಯ್ಕೆಗಳು. ಆದರೆ ಸುಳ್ಯದ ಈ ಹುಡುಗರು ಆಯ್ಕೆ ಮಾಡಿಕೊಂಡದ್ದು ಸಿನಿಮಾ…!. ಪ್ರವಾಹದ ವಿರುದ್ಧದ ಈಜಿನಲ್ಲಿ ಅತ್ಯುತ್ತಮ ಸಂದೇಶ ನೀಡುವ ಹಾಸ್ಯ ಮಿಶ್ರಿತ ಚಿತ್ರವನ್ನು ತೆರೆದಿಟ್ಟಿದ್ದಾರೆ. ಸಂಗೀತ, ಛಾಯಾಗ್ರಹಣ, ಸಾಹಿತ್ಯ … ಹೀಗೇ ಎಲ್ಲವೂ ಉತ್ತಮವಾಗಿದೆ. ಈ ತಂಡಕ್ಕೆ ಶಹಭಾಸ್ ಹೇಳುವವರು ವೀಕ್ಷಕರು. ನಿಜಕ್ಕೂ ಈ ಹೊಸ ಹುಡುಗರ ಪ್ರಯತ್ನಕ್ಕೆ ಶಹಭಾಸ್…
ಹೆಸರು ದಾಮಾಯಣ. 2018 ರಲ್ಲಿ ಆರಂಭಗೊಂಡ ಪ್ರಾಜೆಕ್ಟ್ 2019 ಶೂಟಿಂಗ್ ಶುರುವಾಯಿತು. ಕೊರೋನಾ ಕಾರಣದಿಂದ ತಡವಾಯಿತು. ಈ ನಡುವೆಯೇ ಹಲವು ಸಿನಿಮಾ ಪೆಸ್ಟಿವಲ್ ಗಳಲ್ಲಿ ಭಾಗವಹಿಸಿತು. ಇದೀಗ 2023 ಜುಲೈ 14 ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೈಟಲ್ ಸಾಂಗ್‌ಗೆ ಉತ್ತಮ ಪತಿಕ್ರಿಯೆ ಬಂದಿದೆ. ಸುಳ್ಯದ ಯುವಕ ಶ್ರೀಮುಖ ಈ ಚಿತ್ರದ ರಚನೆ ಮಾಡಿ, ನಿರ್ದೇಶನ ಮಾಡಿ, ನಟನೆಯನ್ನೂ ಮಾಡಿದ್ದಾರೆ. ಕೀರ್ತನ್ ಬಾಳಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಘಾ ಭಟ್, ಆದಿತ್ಯ ಬಿಕೆ, ಅಕ್ಷಯ್ ರೇವಾಂಕರ್, ಡಾ.ಪ್ರತಿಭಾ ರೈ, ಆಶ್ರಿತಾ ಶ್ರೀನಿವಾಸ್, ಪದ್ಮಪ್ರಸಾದ್ ಜೈನ್ ಮೊದಲಾದವರು ನಟಿಸಿದ್ದಾರೆ. ಇವರೆಲ್ಲಾ ಸಿನಿಮಾ ರಂಗಕ್ಕೆ ಹೊಸಬರೇ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶ್ರೀಮುಖ ನಿರ್ದೇಶನ ಮಾಡಿದ್ದರೆ ನಿರ್ಮಾಪಕರಾಗಿ ರಾಘವೇಂದ್ರ ಕುಡ್ವ ಅವರು ತೊಡಗಿಸಿದ್ದಾರೆ. ಕೀರ್ತನ್ ಬಾಳಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿದ್ದು ಎಸ್ ಚಿತ್ರೀಕರಣ ಮಾಡಿದ್ದಾರೆ. ಕಾರ್ತಿಕ್ ಸಿಎಂ ಚಿತ್ರದ ಎಡಿಟಿಂಗ್ ಕಾರ್ಯ ಮಾಡಿದ್ದಾರೆ. ಮಹೇಶ್ ಕಡಂ ಸಹ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ದಾಮೋದರ ಅವರದು ವಿಶೇಷ ಪಾತ್ರವಾಗಿದೆ. ಚಿತ್ರದ ಹಿರೋ ಎನ್ನುವುದಕ್ಕಿಂತಲೂ ಎಲ್ಲರ ಬದುಕಿನಲ್ಲೂ ತಾಂಟಿ ಹೋಗುವ ಪ್ರಸಂಗಗಳೇ ಇಲ್ಲಿ ವ್ಯಕ್ತವಾಗಿದೆ. ವ್ಯಕ್ತಿಯೊಬ್ಬ ಕಲಿಯುವುದು, ಆ ನಂತರ ಉದ್ಯೋಗ ಅರಸುವುದು, ಅಲ್ಲಿ ಬರುವ ಸಂಕಷ್ಟಗಳು, ಕಿರಿಕಿರಿ ನೀಡುವ ಸನ್ನಿವೇಶಗಳು, ಸವಾಲುಗಳು, ಇನ್ನೊಬ್ಬನ ಯಶಸ್ಸಿನ ಆಸೆಗಳು, ಶ್ರಮ ಪಡದೇ ಹಣ ಆಗಬೇಕು ಎಂಬ ಆಸೆಗಳು ಇದೆಲ್ಲಾ ಈ ಪಾತ್ರದ ಮೂಲಕ ವ್ಯಕ್ತವಾಗುತ್ತದೆ. ಸಾಂದರ್ಭಿಕ ಹಾಸ್ಯದ ಮೂಲಕ ನಗೆಗಡಲಲ್ಲಿ ತೇಲಿಸುತ್ತದೆ ಈ ಚಿತ್ರ. ಎಲ್ಲರೂ ಹೊಸಬರಾದರೂ ಯಾವುದೇ ಕೊರತೆಯಾಗದಂತೆ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ವಿಶೇಷವಾಗಿ ಇದರಲ್ಲಿ ಯಕ್ಷಗಾನ ಕಲಾವಿದ ಪೆರುವಡಿ ನಾರಾಯಣ ಭಟ್ ಅವರು ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ.ಮೈಮ್ ರಾಮ್ ದಾಸ್ ಅವರೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಯಾರೊಬ್ಬರೂ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸದೇ ಕಡಿಮೆ ಬಜೆಟ್‌ನಲ್ಲಿ ಈ ಚಿತ್ರವನ್ನು ಯುವಕರು ಮಾಡಿ ತೋರಿಸಿದ್ದಾರೆ. ಗ್ರಾಮೀಣ ಭಾಗವೊಂದರ ಈ ಯುವಕರ ಶ್ರಮ ಸಾರ್ಥಕವಾಗಿದೆ. ಕರಾವಳಿಯಲ್ಲಿಯೇ ಎಲ್ಲಾ ಶೂಟಿಂಗ್ ಮಾಡಲಾಗಿದೆ. ವಿಶೇಷವಾಗಿ ಸುಳ್ಯ, ಪುತ್ತೂರು, ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶದಲ್ಲಿಯೇ ಶೂಟಿಂಗ್ ನಡೆದಿದೆ. ಒಂದು ದೃಶ್ಯ ಮಾತ್ರಾ ಬೆಂಗಳೂರಿನ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದೆ. (ಚಿತ್ರದ ಟ್ರೇಲರ್ ಇಲ್ಲಿದೆ…. )
ಚಿತ್ರದ ಕೊನೆಗೆ ಅವಧಿಯಲ್ಲಿ ಉತ್ತಮ ಸಂದೇಶ ನೀಡಲಾಗಿದೆ. ಉದ್ಯೋಗ ಎಂದರೆ ಏನು ? ಎಂಬ ಪ್ರಶ್ನೆಗೆ ಉತ್ತರ ಇದೆ. ಕೃಷಿ ಕೂಡಾ ಒಂದು ಉದ್ಯೋಗ , ಪತ್ರಿಕೆ ಮಾರಾಟ ಕೂಡಾ ಉದ್ಯೋಗವೇ ಆಗಿದೆ. ಸ್ಟೇಟಸ್ ಹುಡುಕುತ್ತಾ ಹೋದರೆ ಉದ್ಯೋಗಕ್ಕೆ ಅರ್ಥವಿಲ್ಲ. ಬದುಕಿನಲ್ಲಿ ಸಂತಸವೇ ಮುಖ್ಯ ಎನ್ನುವುದನ್ನೂ ಸೂಕ್ಷ್ಮವಾಗಿ ಹೇಳುತ್ತದೆ ಈ ಚಿತ್ರ. ಕೃಷಿ ಕುಟುಂಬದಿಂದಲೇ ಬಂದಿರುವ ಎಲ್ಲಾ ಕಲಾವಿದರೂ ಕೃಷಿಗೆ ಗೌರವವನ್ನು ಈ ಚಿತ್ರದಲ್ಲಿ ನೀಡಿರುವುದು ಬಹು ಸೂಕ್ಷ್ಮವಾಗಿ ಗಮನಿಸಬೇಕು. ಕೃಷಿ ಇದ್ದರೂ ನಗರದಲ್ಲಿ ಉದ್ಯೋಗ ಏಕೆ ಎನ್ನುವ ಒಂದು ಪ್ರಶ್ನೆ ಚಿತ್ರದ ಕೊನೆಗೆ ಬರುತ್ತದೆ. ಅದಕ್ಕೆ ಉತ್ತರ ನಾಯಿಬಾಲ ಡೊಂಕು…!. ಇನ್ನೊಬ್ಬನ ಯಶಸ್ಸಿನ ಹಿಂದೆ ಹೋಗುವ ಬದಲಾಗಿ ತನ್ನದೇ ಮಾದರಿಯ ಮೂಲಕ ಯಶಸ್ಸು ಕಾಣಬೇಕು ಎನ್ನುವ ಚಿತ್ರದ ಸಂದೇಶವು ಈ ಚಿತ್ರದ ಮೂಲಕ ಸುಳ್ಯದ ಯುವಕರ ಯಶಸ್ಸೂ ಕಾಣಲಿದೆ.
ಇನ್ನೂ ಒಂದು ಪ್ರಮುಖವಾದ ಅಂಶವೆಂದರೆ ಚಿತ್ರದ ಸಂಗೀತ. ಉತ್ತಮವಾದ ಸಂಗೀತ ನಿರ್ದೇಶನ ಮಾಡಿದ್ದಾರೆ ಕೀರ್ತನ್ ಬಾಳಿಲ. ಒಟ್ಟು ಐದು ಹಾಡುಗಳು ಇವೆ. ಎಲ್ಲವೂ ಉತ್ತಮ ಸಾಹಿತ್ಯದಿಂದ ಕೂಡಿರುವ ಹಾಡುಗಳೇ ಆಗಿವೆ. ಚಿತ್ರಕ್ಕೆ ಹೊಂದುವ ಸಾಹಿತ್ಯವನ್ನು ರಚಿಸಿದ್ದಾರೆ.
ಒಟ್ಟಾರೆಯಾಗಿ ಕುಟುಂಬ ಸಮೇತರಾಗಿ ನೋಡಬಹುದಾದ ಒಂದು ಉತ್ತಮ ಚಿತ್ರ ದಕ್ಷಿಣ ಕನ್ನಡ ಜಿಲ್ಲೆಯಿಂದ ಅದರಲ್ಲೂ ಸುಳ್ಯದ ಯುವಕರ ತಂಡ ಚಿತ್ರರಂಗಕ್ಕೆ ನೀಡಿದೆ. ಗ್ರಾಮೀಣ ಭಾಗದ ಯುವಕರ ಶ್ರಮಕ್ಕೆ ಗೆಲುವಾಗಲಿ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…