ಶಬ್ದ ಮಾಲಿನ್ಯದ ಅನಾಹುತಗಳು… | ಜೋರು ಶಬ್ದ ಇಟ್ಟುಕೊಂಡು ಟಿವಿ ನೋಡುವುದು, ಹಾಡು ಕೇಳುವುದು ಮಕ್ಕಳಿಗೆ ಅಪಾಯಕಾರಿ | 2 ರೋಗಗಳ ಅಪಾಯ ಇದೆ ಎನ್ನುತ್ತಾರೆ ತಜ್ಞರು….. |

July 8, 2024
1:37 PM

ಟಿವಿ, ಮೊಬೈಲ್ ಮುಂತಾದ ಸಾಧನಗಳು ಈಗ ಪ್ರತಿ ಮನೆಯಲ್ಲೂ ಇವೆ. ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮತ್ತು ಅವರ ಕಾರುಗಳಲ್ಲಿ ಧ್ವನಿ ವ್ಯವಸ್ಥೆಯನ್ನು ಹೊಂದಿದ್ದಾರೆ. ಹಾಗಾಗಿ ಮಕ್ಕಳು ಅಥವಾ ಅವರ ಪೋಷಕರು ಮನೆಯಲ್ಲಿ, ಕಾರಿನಲ್ಲಿ ಹಾಡುಗಳನ್ನು ಕೇಳುವುದು ಸಾಮಾನ್ಯವಾಗಿದೆ. ದೂರದರ್ಶನವನ್ನು ಹೆಚ್ಚಾಗಿ ಮನೆಯಲ್ಲಿ ಬಳಸಲಾಗುತ್ತದೆ. ಹಾಡು ಕೇಳುವುದು, ದೂರದರ್ಶನ ವೀಕ್ಷಿಸುವುದು ನಿಮ್ಮ ಆಸಕ್ತಿ ಇದ್ದರೆ ನೀವು ಅದನ್ನು ಮಾಡುವ ಸ್ವಾತಂತ್ರ್ಯವಿದೆ. ಆದರೆ, ಹಾಡುಗಳನ್ನು ಕೇಳುವಾಗ ಅಥವಾ ಟಿವಿ ನೋಡುವಾಗ, ಅದರ ಧ್ವನಿಯು ಯಾವ ಮಟ್ಟಕ್ಕೆ ಏರುತ್ತದೆ ಎಂಬ ಅಂಶವನ್ನು ಪರಿಗಣಿಸಬೇಕು. ಇಷ್ಟೇ ಅಲ್ಲದೆ, ಅನೇಕರು ತಮ್ಮ ಮನೆಗಳಲ್ಲಿ ಹಾಗೂ ಕಾರುಗಳಲ್ಲಿ ಡಾಲ್ಬಿ ಧ್ವನಿ ವ್ಯವಸ್ಥೆಯನ್ನು ಕೂಡ ಅಳವಡಿಸಿರುತ್ತಾರೆ. ಅಲ್ಲದೆ, ಸಾರ್ವಜನಿಕ ಮೆರವಣಿಗೆಗಳಲ್ಲಿ ಸಮಾರಂಭಗಳಲ್ಲಿ ಡಾಲ್ಬಿ ಬಳಸುವುದು ಸರ್ವೇಸಾಮಾನ್ಯ. ಈ ಡಾಲ್ಬಿ ವ್ಯವಸ್ಥೆಗಳ ಸದ್ದು ತಾರಕಕ್ಕೇರಿರುತ್ತದೆ! ಆದರೆ, ಇಂಥ ತೀವ್ರತರ ಧ್ವನಿಯನ್ನು ಆಲಿಸುವ ಬಗ್ಗೆ ಜಾಗ್ರತೆಯಾಗಿರಲು ತಜ್ಞರು ಹೇಳುತ್ತಾರೆ.

Advertisement
Advertisement
Advertisement

ಜೋರಾದ ಧ್ವನಿಯನ್ನು ಆಲಿಸುವುದು ಎಷ್ಟು ಅಪಾಯಕಾರಿ ಮತ್ತು ವಿಶೇಷವಾಗಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ. ಖಾಸಗಿ ನ್ಯೂಸ್‌ನ ವರದಿಯ ಪ್ರಕಾರ ಜರ್ಮನಿಯ ಪರಿಸರ ಸಂಶೋಧನೆಯ ಹೈಮ್‌ಹೋಲ್ಟ್ಜ್ ಕೇಂದ್ರದಲ್ಲಿ ಈ ಕುರಿತು ಅಧ್ಯಯನವನ್ನು ನಡೆಸಲಾಯಿತು. ಇದರಲ್ಲಿ 5 ರಿಂದ 12 ವರ್ಷದೊಳಗಿನ 500 ಮಕ್ಕಳನ್ನು ಅಧ್ಯಯನ ಮಾಡಲಾಯಿತು. ಆ ಮಕ್ಕಳಿಗೆ ವಿವಿಧ ಹಂತದ ಅನೇಕ ಧ್ವನಿಗಳು ಕೇಳಿಸಲಾಯಿತು. ಅದೇ ಸಮಯದಲ್ಲಿ ವಿವಿಧ ಕಾರ್ಯಗಳನ್ನು ಮತ್ತು ಅಧ್ಯಯನಗಳನ್ನು ಮಾಡಲು ಅವರನ್ನು ಕೇಳಲಾಯಿತು. ಸದಾ ಗಲಾಟೆ ಅಥವಾ ಗದ್ದಲದ ಜಾಗದಲ್ಲಿ ಇರುವ ಮಕ್ಕಳ ಕೆಲಸ, ಅಧ್ಯಯನ ಅರ್ಧಕ್ಕೆ ನಿಂತಿರುವುದು ಕಂಡು ಬಂತು. ಏಕೆಂದರೆ, ಅಲ್ಲಿ ಅವರಿಗೆ ಅಂತಹ ಏಕಾಗ್ರತೆ ಸಿಗಲಿಲ್ಲ. ಅಲ್ಲದೆ, ಆ ಮಕ್ಕಳು ಅನೇಕ ಕೆಲಸಗಳನ್ನು ಮಾಡುವುದನ್ನು ಮರೆತಿದ್ದರು. ಅಂದರೆ, ಅವರಲ್ಲಿ ಮರೆವು ಕೂಡ ಹೆಚ್ಚಾಯಿತು.

Advertisement

ಇದರಿಂದ, ಜೋರಾಗಿ ಶಬ್ದಗಳನ್ನು ನಿರಂತರವಾಗಿ ಆಲಿಸುವುದರಿಂದ ಮೆದುಳಿನ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ಈ ಏಕಾಗ್ರತೆಯಿಂದಾಗಿ ಇದು ಕಡಿಮೆಯಾದಂತೆ ಮಕ್ಕಳಲ್ಲಿ ಕಿರಿಕಿರಿಯೂ ಹೆಚ್ಚುತ್ತದೆ. ಅವರಲ್ಲಿ ಮಾನಸಿಕ ಆಯಾಸ ಬೇಗ ಕಂಡು ಬರುತ್ತದೆ. ಇಂತಹ ಮಕ್ಕಳು ಸಹಜವಾಗಿಯೇ ಅಧ್ಯಯನದಲ್ಲಿ ಹಿಂದೆ ಬೀಳುತ್ತಾರೆ. ಆದ್ದರಿಂದ, ಶೀಘ್ರದಲ್ಲೇ ಮಕ್ಕಳು ಜೋರಾಗಿ ಟಿವಿ ಮತ್ತು ಹಾಡುಗಳನ್ನು ಕೇಳುವುದನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಈ ಅಧ್ಯಯನವು ತೋರಿಸುತ್ತದೆ. ಇತ್ತೀಚೆಗೆ ಡಾಲ್ಬಿ ವ್ಯವಸ್ಥೆಯಲ್ಲಿ ಸಂಗೀತ ಅಥವಾ ಧ್ವನಿಯನ್ನು ಕೇಳುವುದು ಸರ್ವಸಾಮಾನ್ಯವಾಗಿದೆ. ಆದರೆ ಇದು ಅಪಾಯಕಾರಿ ಮಟ್ಟದ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತಿರುವುದಲ್ಲದೆ ಜನರ ಆರೋಗ್ಯದ ಮೇಲೆ ಭಯಂಕರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ ಎಂಬುದು ಅನೇಕರಿಗೆ ಅರಿವಾಗುತ್ತಿಲ್ಲ!

ತೀವ್ರ ಶಬ್ದ ಮಾಲಿನ್ಯದಿಂದ ಉಂಟಾಗುವ ಆರೋಗ್ಯ ಹಾನಿಗಳು: ತಾತ್ಕಾಲಿಕ ಕಿವುಡುತನ, ಶಾಶ್ವತಕ್ಕೆ ಕಿವುಡುತನ, ಕಿವಿಗಳಲ್ಲಿ ವೇದನೆ, ಕಿವಿಯಲ್ಲಿ ವಿಚಿತ್ರ ಶಬ್ದಗಳು (ಟಿನಿಟಸ್), ಏಕಾಗ್ರತೆಯ ಕೊರತೆ, ಕಲಿಕೆಯಲ್ಲಿ ಸಮಸ್ಯೆಗಳು, ಶೀಘ್ರ ಕೋಪ, ಸಿಡಿಮಿಡಿಕೊಳ್ಳುವುದು, ಹೃದಯದ ಸಮಸ್ಯೆಗಳು, ಹೃದಯಾಘಾತ, ರಕ್ತದ ಒತ್ತಡದಲ್ಲಿ ಏರಿಕೆ, ಮೆದುಳಿನಲ್ಲಿ ರಕ್ತಸ್ರಾವ, ಇತ್ಯಾದಿ.

Advertisement
ಕಳೆದ ನವರಾತ್ರಿ ಉತ್ಸವದ ಸಮಯದಲ್ಲಿ ಡಾಲ್ಬಿ ಸಂಗೀತದ ತಾಳದ ಮೇಲೆ ಗರಬಾ ನೃತ್ಯವನ್ನು ಮಾಡುವಾಗ ಸುಮಾರು ಎರಡು ಡಜನ್ ಯುವಕರು ಪ್ರಾಣ ಕಳೆದುಕೊಂಡ ಸುದ್ದಿಗಳನ್ನು ಈಗಾಗಲೇ ನಾವು ಕೇಳಿದ್ದೇವೆ/ಓದಿದ್ದೇವೆ.
ಮಾನವನ ಮಹತ್ವಾಕಾಂಕ್ಷೆಗಳಿಗೆ ಮತ್ತು ದುರಾಸೆಗಳಿಗೆ ಅಂತ್ಯವಿಲ್ಲ. ಸಂಗೀತವನ್ನು ಆಲಿಸಬೇಕು, ಕುಣಿಯಬೇಕು, ಆನಂದಿಸಬೇಕು. ಆದರೆ, ಇನ್ನೊಂದು ಗ್ರಹದವರೆಗೂ ಕೇಳಿಸುವಷ್ಟು ಕರ್ಕಶ ಧ್ವನಿಯಲ್ಲಿ ಸಂಗೀತ ಹಾಕುವುದರ ಔಚಿತ್ಯವೇನು? ಸುತ್ತಮುತ್ತಲಿನ ಪರಿಸರದಲ್ಲಿ ಅನೇಕರಿಗೆ ಇದರಿಂದ ತೊಂದರೆ ಆಗುತ್ತಿರುತ್ತದೆ ಅಲ್ಲದೆ ಹಲವರು ಪರೀಕ್ಷೆಗಳಾಗಿ ಓದಿಕೊಳ್ಳುತ್ತಿರುತ್ತಾರೆ ಕೆಲವರು ಧ್ಯಾನ ಮಾಡುತ್ತಿರುತ್ತಾರೆ ಇನ್ನೂ ಕೆಲವರು ರೋಗಿಗಳು ವಿಶ್ರಾಂತಿ ಪಡೆಯುತ್ತಿರುತ್ತಾರೆ ಈ ಎಲ್ಲರಿಗೂ ಈ ಕರ್ಕಶೋನಿಯ ತೊಂದರೆ ಆಗುತ್ತದೆ. ದುರದೃಷ್ಟಕ್ಕೆ ಈ ಬಗ್ಗೆ ಯಾರೊಬ್ಬರೂ ಚಿಂತಿಸುವುದಿಲ್ಲ! ವಾಸ್ತವಿಕವಾಗಿ, ಡಾಲ್ಬಿ ಎಂಬ ಧ್ವನಿ ದೈತ್ಯದ ಬಳಕೆಯ ಮೇಲೆ ಸರ್ಕಾರವೇ ನಿರ್ಬಂಧನೆಯನ್ನು ಹೇಳಬೇಕು. ವಿಪರ್ಯಾಸ ಎಂದರೆ ಸರಕಾರದ ಕಾರ್ಯಕ್ರಮಗಳಲ್ಲೂ, ಚುನಾವಣೆಯ ವಿಜಯೋತ್ಸವದಲ್ಲೂ ಇವುಗಳನ್ನು ಬಳಸಲಾಗುತ್ತದೆ!
ಬರಹ :
ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror