ಉನ್ನತ ಶಿಕ್ಷಣವನ್ನು ಪಡೆದು ಬಹುದೊಡ್ಡ ಹುದ್ದೆಗೇರುವ ಕನಸು ರಾಮನದು.
ಆದರೆ ಮನೆಯಲ್ಲಿ ಕಡು ಬಡತನ.ಬಸ್ಟಾಂಡ್ ಪಕ್ಕದ ಅಂಗಡಿಯಲ್ಲಿ ಮುಂದಿನ ಭವಿಷ್ಯ ಹೇಗೆಂಬ ಚಿಂತೆಯಲ್ಲಿ ಕುಳಿತಿದ್ದ ಸ್ವಾಭಿಮಾನಿ ರಾಮನಿಗೆ ಕಂಡದ್ದು ಮುಂದಿದ್ದ ಕಸದ ತೊಟ್ಟಿಯ ಪಕ್ಕದಲ್ಲಿ ಯಾರೋ ಎಸೆದು ಹೋಗಿದ್ದ ಬೂಟ್ ಪಾಲಿಶ್ ಮಾಡುವ ಬ್ರಶ್ ಹಾಗೂ ಅಳಿದುಳಿದ ಸ್ವಲ್ಪವೇ ಸ್ವಲ್ಪ ಪಾಲಿಶ್ ನ ಡಬ್ಬ.
ಹಿಂದೆ ಮುಂದೆ ಯೋಚಿಸದೆ ಅದನ್ನೆತ್ತಿಕೊಂಡ ರಾಮ…ರಾಮನ ಕೈಯ್ಯಲ್ಲಿದ್ದ ವಸ್ತುಗಳನ್ನು ಕಂಡು ತಮ್ಮ ಬೂಟುಗಳನ್ನು ಅವನತ್ತ ಚಾಚಿದ ಅಂಗಡಿಯ ಮುತ್ತುಸ್ವಾಮಿ ದೀಕ್ಷಿತರು ಅವನ ಕೈಯಲ್ಲಿ ನೂರು ರೂಪಾಯಿಯ ನೋಟೊಂದನ್ನು ಕೊಟ್ಟು ಹೊಸ ಬ್ರಶ್ ಹಾಗೂ ಪಾಲೀಶ್ ಡಬ್ಬ ಖರೀದಿಸುವಂತೆ ಹೇಳಿ ಅಪ್ಯಾಯತೆಯಿಂದ ಅವನ ತಲೆ ಸವರಿದರು.
ಹೊಸ ಪಾಲೀಶ್ ಡಬ್ಬ ಖರೀದಿಸಿದ ರಾಮ ದಣಿವರಿಯದೆ ದುಡಿದ….ಇಂದು……….ಅಂದು ತಾನೇ ಪಾಲೀಶ್ ಮಾಡುತ್ತಿದ್ದ ಅದೆಷ್ಟೋ ಹೆಸರಾಂತ ಕಪೆನಿಗಳ ಬೂಟುಗಳ ಬಹುದೊಡ್ಡ ಶಾಖೆಯನ್ನೇ ತಾನು ಹೊಂದಿದ್ದಾನೆ ರಾಮ. ತಾನು ಅಂದು ಆ ಮಾಸಲು ಬಟ್ಟೆಯಲ್ಲಿ ದಣಿವರಿಯದೆ ಬೂಟು ಪಾಲೀಶ್ ಮಾಡುತ್ತಿರುವ ಚಿತ್ರ ಅವನ ಆಫೀಸಿನ ಗೋಡೆಯನ್ನಲಂಕರಿಸಿದೆ.
ಪಕ್ಕದಲ್ಲೇ ಮುತ್ತುಸ್ವಾಮಿ ದೀಕ್ಷಿತರ ವಾತ್ಸಲ್ಯ ಸೂಸುವ ನಗುಮೊಗದ ಚಿತ್ರವೂ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…