ಸಾವಿನ ಮೊದಲೇ ಸಮಾಧಿ ನಿರ್ಮಿಸಿದ ವ್ಯಕ್ತಿ….! |

March 8, 2022
4:24 PM

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದ ನಿವಾಸಿ ತಿಪ್ಪಣ್ಣರಾವ್ ಎಂಬುವವರು ಸಾವಿನ ಮೊದಲೇ ತನಗೆ ತಾನೇ ಸಮಾಧಿ ನಿರ್ಮಿಸಿಕೊಂಡ ಅಪರೂಪದ ಘಟನೆ ವರದಿಯಾಗಿದೆ.

ಸಾಮಾನ್ಯವಾಗಿ ವ್ಯಕ್ತಿ ಸಾವನ್ನಪ್ಪಿದ ನಂತರ ಗುಂಡಿ ತೋಡಿ ಮಣ್ಣು ಮಾಡ್ತಾರೆ. ಆದರೆ ಈ ವ್ಯಕ್ತಿ  ಮರಣಕ್ಕೂ ಮೊದಲೇ ಸಮಾಧಿಯನ್ನು ತಯಾರಿಸಿಕೊಂಡಿದ್ದಾರೆ. 70 ವರ್ಷದ ತಿಪ್ಪಣ್ಣ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಮಾಧಿಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮರಳಿ ಮಣ್ಣಿಗೆ ಎಂದು ಹೆಸರಿಟ್ಟಿದ್ದಾರೆ. ಏಕೆ ಈ ಸಮಾಧಿ ಎಂದರೆ, ಜೀವನದಲ್ಲಿ ಜಿಗುಪ್ಸೆ ಎನ್ನುತ್ತಾರೆ.

ಯಾರೊಬ್ಬರ ಬಳಿಯೂ ಹಣ ಪಡೆಯದೆ ತಾವೇ ದುಡಿದು ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. ತಾನು ಸತ್ತರೆ ಇದೇ ಸಮಾಧಿಯಲ್ಲಿ ಹೂಳುವಂತೆ ತಮ್ಮ ಮಕ್ಕಳಿಗೆ ಹೇಳಿದ್ದಾರೆ.ಇದೇ ಸಮಾಧಿ ಮುಂದೆ ಪುಟ್ಟ ದೇವಾಲಯವನ್ನೂ ನಿರ್ಮಾಣ ಮಾಡಿ ಬರುವವರಿಗೆ ವಿಶ್ರಾಂತಿ ಪಡೆಯಲು ತಂಗುದಾಣ ಮಾಡಿದ್ದಾರೆ. ಮರಳಿ ಮಣ್ಣಿಗೆ ಸೇರುವ ಜ್ಞಾನೋದಯ ಇಲ್ಲಿ ಸದಾ ಜಾಗೃತವಾಗುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror