ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದ ನಿವಾಸಿ ತಿಪ್ಪಣ್ಣರಾವ್ ಎಂಬುವವರು ಸಾವಿನ ಮೊದಲೇ ತನಗೆ ತಾನೇ ಸಮಾಧಿ ನಿರ್ಮಿಸಿಕೊಂಡ ಅಪರೂಪದ ಘಟನೆ ವರದಿಯಾಗಿದೆ.
ಸಾಮಾನ್ಯವಾಗಿ ವ್ಯಕ್ತಿ ಸಾವನ್ನಪ್ಪಿದ ನಂತರ ಗುಂಡಿ ತೋಡಿ ಮಣ್ಣು ಮಾಡ್ತಾರೆ. ಆದರೆ ಈ ವ್ಯಕ್ತಿ ಮರಣಕ್ಕೂ ಮೊದಲೇ ಸಮಾಧಿಯನ್ನು ತಯಾರಿಸಿಕೊಂಡಿದ್ದಾರೆ. 70 ವರ್ಷದ ತಿಪ್ಪಣ್ಣ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಮಾಧಿಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮರಳಿ ಮಣ್ಣಿಗೆ ಎಂದು ಹೆಸರಿಟ್ಟಿದ್ದಾರೆ. ಏಕೆ ಈ ಸಮಾಧಿ ಎಂದರೆ, ಜೀವನದಲ್ಲಿ ಜಿಗುಪ್ಸೆ ಎನ್ನುತ್ತಾರೆ.
ಯಾರೊಬ್ಬರ ಬಳಿಯೂ ಹಣ ಪಡೆಯದೆ ತಾವೇ ದುಡಿದು ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. ತಾನು ಸತ್ತರೆ ಇದೇ ಸಮಾಧಿಯಲ್ಲಿ ಹೂಳುವಂತೆ ತಮ್ಮ ಮಕ್ಕಳಿಗೆ ಹೇಳಿದ್ದಾರೆ.ಇದೇ ಸಮಾಧಿ ಮುಂದೆ ಪುಟ್ಟ ದೇವಾಲಯವನ್ನೂ ನಿರ್ಮಾಣ ಮಾಡಿ ಬರುವವರಿಗೆ ವಿಶ್ರಾಂತಿ ಪಡೆಯಲು ತಂಗುದಾಣ ಮಾಡಿದ್ದಾರೆ. ಮರಳಿ ಮಣ್ಣಿಗೆ ಸೇರುವ ಜ್ಞಾನೋದಯ ಇಲ್ಲಿ ಸದಾ ಜಾಗೃತವಾಗುತ್ತದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…