ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ | ಇದು ಡಿಸೆಂಬರ್ ತಿಂಗಳು ಅಷ್ಟೇ…! | ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ತಾಪ, ಉರಿ ಬಿಸಿಲು ಹೇಗಿರಬಹುದು?

December 8, 2023
3:39 PM
ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಚಳಿಗಾಲವೂ ಈ ಬಾರಿ ಕೈಕೊಡುತ್ತದಾ..?

ಈ ಬಾರಿ ಮಳೆ ಕೈಕೊಟ್ಟಿದೆ. ಬರಗಾಲ ಎಲ್ಲೆಡೆಯೂ ಕಾಟ ನೀಡಿದೆ.  ಈ ಹಿಂದೆ ನಮ್ಮ ಕಾಲ ಮಾನ ಮಳೆಗಾಲ, ಚಳಿಗಾಲ(Winter), ಬೇಸಿಗೆಗಾಲ(Summer) ಎಂಬುದಾಗಿತ್ತು. ಆದರೆ ಈಗ ಮಳೆಗಾಲ ಸೆಕೆಗಾಲ(Hot season), ಬರಗಾಲ ಎಂಬಂತೆ ಆಗಿದೆ. ಮಳೆ ಮುಗಿದ ಕೂಡಲೇ ಚಳಿ ಇರಬೇಕಾಗಿತ್ತು, ಆದರೆ ಈಗ ಚಳಿಗಾಲ ಮಾಯವಾಗಿ ನೇರವಾಗಿ ಮುಂದಿನ ಮಳೆಗಾಲದವರೆಗೆ ಬರಗಾಲ ತನ್ನ ಅಟ್ಟಹಾಸವನ್ನು ಪ್ರದರ್ಶಿಸುತ್ತದೆ. ಈಗಲೇ ಸೆಕೆ ಏರಿಕೆಯಾಗುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಚಳಿಯ ಕೊರತೆಯೂ ಕಾಡುತ್ತಿದೆ..!

Advertisement
Advertisement
Advertisement

ಯಾಕೆ ಹೀಗೆ ಬದಲಾವಣೆ ಆಯಿತು ? ಪ್ರಕೃತಿ ಯಾಕೆ ಈ ರೀತಿ ಮುನಿಸುತ್ತಿದೆ? ಇದರ ದುಷ್ಪರಿಣಾಮ ಏನಾಗಬಹುದು? ನಮ್ಮ ಮಕ್ಕಳ ಭವಿಷ್ಯ ಏನಾಗಬಹುದು ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವವರು ಯಾರೂ ಇಲ್ಲ. ಯಾರಿಗೂ ಇದರ ಬಗ್ಗೆ ಚಿಂತನೆ ಮಾಡಲು ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ. ಅದು ಮುಂದಕ್ಕೆ ಅಲ್ಲ ಮುಂದೆ ನೋಡುವ ಎಂಬ ಮಂದೆಯೇ ಹೆಚ್ಚಾಗುತ್ತಿದೆ.

Advertisement

ಪ್ರಕೃತಿ ಯಾವಾಗಲೂ ಅದರ ಕೆಲಸವನ್ನು ಸಮರ್ಪಕವಾಗಿಯೇ ಮಾಡುತ್ತಿದೆ. ಆದರೆ ಪ್ರಕೃತಿಗೆ ವಿರುದ್ಧವಾಗಿ ಹೋಗಿರುವ ನಮ್ಮ ಕೆಲಸ ಕಾರ್ಯಗಳೇ ಇಂದು ಈ ರೀತಿ ಪರಿಸರ ಅಸಮತೋಲನ ಆಗಲು ಕಾರಣ. ನಾವೇ ಆರೋಪಿಗಳಾಗಿ ಪ್ರಕೃತಿಯ ಮೇಲೆ ದೋಷಾರೋಪಣೆ ಮಾಡುವಷ್ಟು ನೀಚರಾಗುತ್ತಿದ್ದೇವೆ ನಾವು. ಮನುಜ ಸಂತಾನದ ಐಷಾರಾಮಿ ಬದುಕಿಗೋಸ್ಕರ, ರಾಜಕಾರಣಿಗಳ ‘ ಅಭಿವೃದ್ಧಿ ‘ ಎಂಬ ಸರ್ಟಿಫಿಕೇಟ್ ಗೋಸ್ಕರ ಇಂದು ನಮ್ಮ ಪ್ರಕೃತಿ ಬಲಿಯಾಗುತ್ತಿದೆ. ಪಶ್ಚಿಮ ಘಟ್ಟದ ಧಾರಣಾ ಶಕ್ತಿಗೂ ಮೀರಿ ಅಸಂಬದ್ಧ, ಅವೈಜ್ಞಾನಿಕ, ಅಸಮರ್ಪಕ ಯೋಜನೆಗಳನ್ನು ಮಾಡಿ ಇಂದು ಬರಗಾಲಕ್ಕೆ ನಾವೇ ಆಮಂತ್ರಣ ನೀಡಿ ಆಹ್ವಾನಿಸುವಂತೆ ಆಗಿದೆ. ನಾವೇ ಮಾಡಿರುವ ಕರ್ಮಕ್ಕೆ ನಾವೇ ಏಟು ತಿನ್ನಬೇಕೇ ಹೊರತು ಈ ಅಮೂಲ್ಯ ನಿಸರ್ಗದ ಮೇಲೆ ದೋಷಾರೋಪ ಮಾಡುವುದೆಂದರೆ ಅದರ ಪ್ರತಿಫಲ ಮತ್ತು ಪ್ರತೀಕಾರಗಳ ಫಲಿತಾಂಶವೇ ಈಗ ಆಗುತ್ತಿರುವ ಎಲ್ಲಾ ನೈಸರ್ಗಿಕ ದುರಂತಗಳಿಗೆ ನೇರ ಕಾರಣವಾಗಿರುತ್ತದೆ.

ಮನೆಗಳಲ್ಲಿ ಮಕ್ಕಳಿಗೆ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಪರಿಸರ ಪಾಠ, ಅಥವಾ ಪರಿಸರದ ಅಗತ್ಯ ಮತ್ತು ಮಹತ್ವಗಳನ್ನು, ಪ್ರಕೃತಿಯ ಸೂಕ್ಷ್ಮ ಜೀವ ವೈವಿದ್ಯತೆ, ಜೀವ ಸಂಕುಲಗಳ ಕಾರ್ಯ ವಿಧಾನಗಳನ್ನು, ಅಡವಿ, ನದೀ ಮೂಲ, ಪಶ್ಚಿಮ ಘಟ್ಟದ ಸಕಲ ಜೀವ ಸಂಕಲೆಯ ವ್ಯವಸ್ಥೆ, ನದಿ, ಸಾಗರಗಳ ನಡುವಿನ ಸಂಕೀರ್ಣವನ್ನು, ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಶೋಲಾ ಅಡವಿಯ ಸಂಬಂಧವನ್ನು, ಬುಡಕಟ್ಟು ಸಮುದಾಯದವರು ಅಡವಿಯ ಒಳಿತಿಗಾಗಿ ಬದುಕುವ ರೀತಿ, ವಿಧಾನಗಳನ್ನು, ಪ್ರಕೃತಿಯ ಫಲಾನುಭವಿಗಳಾದ ನಾವು ಪ್ರಕೃತಿಯನ್ನೇ ಕಳೆದುಕೊಂಡರೆ ಮುಂದೆ ಆಗಲಿರುವ ದುರಂತಗಳನ್ನು ಮಕ್ಕಳಿಗೆ ನಾವು ತಿಳಿಸದೇ ಇದ್ದರೆ ಇಂದಿನ ಮಕ್ಕಳಿಗೆ ಪರಿಸರದ ಮೇಲೆ ಯಾವ ಕಾಳಜಿ, ಗೌರವ, ಅಭಿಮಾನವೂ ಉಳಿಯಲಿಕ್ಕಿಲ್ಲ.

Advertisement

ಮಕ್ಕಳನ್ನು ಕೇವಲ ನಗರದ ಮಾಲ್, ಮಹಲ್ ಗಳಿಗೆ ಕರೆದು ಕೊಂಡು ಹೋದರೆ  ಅವರಿಗೆ ಈ ಕಾಂಕ್ರೀಟು ಕಾಡೇ ಸತ್ಯ ಅದರ ಆಚೆ ಇರುವ ನೈಸರ್ಗಿಕ ಕಾಡು ಬರೇ ಶೂನ್ಯ ಎಂಬ ಮನೋಭಾವ ಬೆಳೆಯಬಹುದು. ನಮ್ಮ, ನಿಮ್ಮ ಮಕ್ಕಳಿಗೆ ಪರಿಸರ, ಪ್ರಕೃತಿ ಬಗ್ಗೆ ನಾವೇ ಮಾಹಿತಿ, ತಿಳುವಳಿಕೆ, ಜಾಗೃತಿ ಮೂಡಿಸಿ, ಮುಂದಕ್ಕೆ ಭದ್ರವಾಗಿ ಇರಬೇಕಾದ ಅವರ ಬದುಕು ಛಿದ್ರವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಬೇಕು. ಪ್ರಕೃತಿಯ ಬಗ್ಗೆ ಕೇವಲ ಬೋಧನೆ ಸಾಲದು, ಶೋಧನೆಯೂ ಆದರೆ ಮಾತ್ರ ಮಕ್ಕಳ ಮನಸಿಗೆ ತಲುಪುವಂತೆ ಅನುಮೋಧನೆ ಆಗಬಹುದು. ‘ ವನ ಚೇತನಾ ‘ ಕಾರ್ಯಕ್ರಮವು ಕಾಡಿನ ನಡುವೆನೇ ಆಗುತ್ತಿರುವುದರಿಂದ ಮಕ್ಕಳನ್ನು ಕಾಡಿನ ಸುತ್ತ ಇರುವ ಬೆಟ್ಟ, ಅಡವಿ, ನದಿಗಳ ತೊರೆ, ಹರಿವು ಗಳನ್ನು ತೋರಿಸಿ ಪಶ್ಚಿಮಘಟ್ಟ ಮತ್ತು ಅದರ ಜೀವ ಸಂಕೀರ್ಣದ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತದೆ.

ಮೂಲ : ದಿನೇಶ್ ಹೊಳ್ಳ ಅವರು ಪೇಸ್‌ ಬುಕ್‌ ಬರಹ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ | ಭಾರತದ ಗುಕೇಶ್ ಚಾಂಪಿಯನ್‌ | ವಿಶ್ವದ ಕಿರಿಯ ಚಾಂಪಿಯನ್ ಆದ ಗುಕೇಶ್‌ |
December 12, 2024
6:48 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12.12.2024 | ರಾಜ್ಯದ ಹಲವೆಡೆ ಮೋಡದ ವಾತಾವರಣ | ಸಂಜೆ ಸಾಮಾನ್ಯ ಮಳೆ ಸಾಧ್ಯತೆ | ಡಿ.17 ರ ನಂತರ ಕರಾವಳಿಯಲ್ಲಿ ಮತ್ತೆ ಮಳೆ ನಿರೀಕ್ಷೆ..?
December 12, 2024
12:22 PM
by: ಸಾಯಿಶೇಖರ್ ಕರಿಕಳ
ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |
December 10, 2024
11:12 PM
by: ವಿಶೇಷ ಪ್ರತಿನಿಧಿ
ಹವಾಮಾನ ವರದಿ | 10.12.2024 | ರಾಜ್ಯದ ಕೆಲವೆಡೆ ಇಂದೂ ಮಳೆ ಸಾಧ್ಯತೆ | ಡಿ.16ರಿಂದ ವಾಯುಭಾರ ಕುಸಿತ| ಮತ್ತೆ ಮಳೆ ಸಾಧ್ಯತೆ
December 10, 2024
1:33 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror