ಸಮಾಜದ ಕಟ್ಟಕಡೆಯ ಗ್ರಾಮವನ್ನು ತಲುಪಿದ ಯಾದಗಿರಿಯ ಜಿಲ್ಲಾಧಿಕಾರಿ | ತಾಂಡಾ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ ಬಿ ಸುಶೀಲಾ |

August 10, 2023
11:51 AM
ಯಾದಗಿರಿ ಜಿಲ್ಲೆಯ ಪ್ರಥಮ ಸರ್ಕಾರಿ ಅಧಿಕಾರಿ ಸ್ವತಃ ತಾಂಡಾ ಗ್ರಾಮವೊಂದಕ್ಕೆ ಬಂದು ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ್ದಾರೆ. ಮತ್ತು ಗ್ರಾಮೀಣ ಮಕ್ಕಳ  ಜ್ಞಾನವನ್ನು ಮೆಚ್ಚಿ ಕೊಂಡಾಡಿದ್ದಾರೆ.

ಅದೆಷ್ಟೋ ಮಂದಿ ಸಮಾಜ ಸೇವೆ ಮಾಡಬೇಕು ಅನ್ನೋ ಗುರಿಯನ್ನು ಇಟ್ಟುಕೊಂಡು ಸರ್ಕಾರಿ ಅಧಿಕಾರಿಗಳಾಗಿ ಕೆಲಸಕ್ಕೆ ಬರ್ತಾರೆ. ಆದರೆ ಆಮೇಲೆ ಸಮಾಜ ಸೇವೆ ಬಿಟ್ಟು ತಮ್ಮ ಸ್ವಾರ್ಥ ನೋಡಿ ಕೊಳ್ಳುತ್ತಾರೆ. ಆದರೆ ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಅವರು ಈ ಮಾತಿಗೆ ಅಪವಾದ ಎನ್ನುವಂತೆ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರೇವುನಾಯ್ಕ ತಾಂಡಾಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಕನ್ನಡ ಪಾಠ ಮಾಡಿ ಗಮನ ಸೆಳೆದರು.

ಯಾದಗಿರಿ ಜಿಲ್ಲೆಯ ಪ್ರಥಮ ಸರ್ಕಾರಿ ಅಧಿಕಾರಿ ಸ್ವತಃ ತಾಂಡಾ ಗ್ರಾಮವೊಂದಕ್ಕೆ ಬಂದು ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ್ದಾರೆ. ಮತ್ತು ಆ ಮಕ್ಕಳ ಜ್ಞಾನವನ್ನು ಮೆಚ್ಚಿ ಕೊಂಡಾಡಿದ್ದಾರೆ. ಜಿಲ್ಲಾಧಿಕಾರಿ ಯಾದಗಿರಿ ಸ್ವತಃ ಶಿಕ್ಷಕಿಯಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠಮಾಡಿದ್ದಾರೆ. ಹೀಗೆ ತಾಂಡಾ ಮಕ್ಕಳಿಗೆ ಪಾಠ ಮಾಡಿದವರು ಬಿ. ಸುಶೀಲಾ, ಯಾದಗಿರಿ ಡಿಸಿ.  ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಪಾಠದ ಜೊತೆಗೆ ತಾಂಡಾ ಮಕ್ಕಳಿಗೆ ಶಬ್ದಗಳ ಪರಿಚಯ ಮಾಡಿಸಿದರು. ಆ ವೇಳೆ ಮಕ್ಕಳ ಕನ್ನಡ ಜ್ಞಾನಕ್ಕೆ ಜಿಲ್ಲಾಧಿಕಾರಿ ಫಿದಾ ಆದರು.

ಕನ್ನಡ ಬಂದರೂ ಇಂಗ್ಲಿಷ್‌ ನಲ್ಲೇ ಮಾತನಾಡಿಸುವ ಅಧಿಕಾರಿಗಳಿರುವಾಗ ಇವರು ಮಕ್ಕಳಿಗೆ ಕನ್ನಡ ಪಾಠ ಮಾಡಿ ನಿಜಕ್ಕೂ ಕನ್ನಡ ಮಾತೆಗೆ ಅಪಾರ ಗೌರವ ಸಲ್ಲಿಸಿದ್ದಾರೆ. ಇವರಂಂತಹ ಅಧಿಕಾರಿಗಳಿಂದ ಇನ್ನುಳಿದ ಅಧಿಕಾರಿಗಳು ಕಲಿಯೋದು ಬಹಳವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ಉಷ್ಣತೆ ಕೃಷಿಗೆ ದೊಡ್ಡ ಸಂಕಷ್ಟ | ಉತ್ಪಾದನೆ ಕುಸಿತದ ಭೀತಿ
March 22, 2026
6:46 AM
by: ದ ರೂರಲ್ ಮಿರರ್.ಕಾಂ
ಅಕಾಲಿಕ ಮಳೆ ಹಾನಿ ಪರಿಶೀಲನೆ : ರೈತರಿಗೆ ತಕ್ಷಣ ಪರಿಹಾರಕ್ಕೆ ಕೇಂದ್ರ ಸೂಚನೆ
March 22, 2026
6:12 AM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಎಚ್ಚರಿಕೆ: ಜಾನುವಾರು–ಕೋಳಿಗಳಲ್ಲಿ ಉಷ್ಣ ಒತ್ತಡ ಹೆಚ್ಚಳ, ರೈತರಿಗೆ ಮಾರ್ಗಸೂಚಿ ಪ್ರಕಟ
March 21, 2026
10:06 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror