ಇಂದು ವಿಶ್ವ ಪರಿಸರ ದಿನಾಚರಣೆ. ಸಾಮಾನ್ಯಾಯವಾಗಿ ಮಂತ್ರಿಗಳನ್ನು ಕರೆಸಿ ಅನೇಕ ಸಂಘ ಸಂಸ್ಥೆಗಳು, ಕಂಪನಿಗಳು, ಅಡಳಿತ ಮಂಡಳಿಗಳು ಗಿಡಿ ನೆಡುವ ಕಾರ್ಯಕ್ರಮ ಮಾಡಿಸಿ, ಪೋಟೋ ತೆಗೆಯಿಸಿ ಕಳುಹಿಸುತ್ತಾರೆ. ಮತ್ತೆ ಈ ಬಗ್ಗೆ ನೆನಪಾಗೋದು ಮುಂದಿನ ವರ್ಷದ ಪರಿಸರ ದಿನದಂದು. ಮಂತ್ರಿಗಳು ಅವರು ಹೇಳಿದಂತೆ ಗಿಡ ನೆಟ್ಟು ಒಂದು ಫೋಸ್ ಕೊಟ್ಟು ಹೋಗುತ್ತಾರೆ. ಆದರೆ ಈ ಬಾರಿ ಡಿಸಿಎಂ ಡಿ ಕೆ ಶಿವಕುಮಾರ್ ಮೂಲಕ ಪರಿಸರ ಕಾರ್ಯಕ್ರಮ ಮಾಡಿಸಿದ ಅರಣ್ಯಾಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳು ಚೆನ್ನಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಥಣಿಸಂದ್ರ ರಾಚೇನಹಳ್ಳಿಗೆ ಕೆರೆ ಬಳಿ ಬಿಬಿಎಂಪಿಯಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಾಲಿಕೆ ಅಧಿಕಾರಿಗಳು ಪಾರ್ಕ್ ಮಧ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಡಿಕೆಶಿ, ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೈದರು. ಕಾಮನ್ ಸೆನ್ಸ್ ಇರಬೇಕು ಎಲ್ಲಿ ಗಿಡ ನಡಬೇಕು ಅಂತ ಹೇಳಿದರು. ಪಾರ್ಕ್ ನಲ್ಲಿ ಗಿಡ ನಡುವ ಕಾರ್ಯಕ್ರಮ ಮಾಡಿದ್ದಕ್ಕೆ ಡಿಕೆಶಿ ಬಳಿಕ ನಡೆದ ತಮ್ಮ ಭಾಷಣದಲ್ಲೂ ಅಸಮಾಧಾನ ವ್ಯಕ್ತಪಡಿಸಿದರು.
ಪರಿಸರಕ್ಕೆ ನಾವು ಅಡ್ಜಸ್ಟ್ ಆಗಿಲ್ಲ, ಪರಿಸರವೇ ನಮಗೆ ಅಡ್ಜಸ್ಟ್ ಆಗಿದೆ. ಬಹಳ ಪ್ಯಾಷನ್ ನಿಂದ ಬೆಂಗಳೂರು ಅಭಿವೃದ್ಧಿ ಮಾಡಬೇಕು ಅನ್ನೋದು ನನ್ನ ಉದ್ದೇಶ ಎಂದರು. ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗೆ ಇಷ್ಟ ಇಲ್ಲ. ನಾವು ಮಾಡುವ ಕೆಲಸ ಶಾಶ್ವತವಾಗಿ ಇರಬೇಕು, ಹೊರತು ತೋರಿಕೆಗೆ ಇರಬಾರದು. ಮರ ಇರುವ ಕಡೆ ಗಿಡ ನೆಡಿಸುವುದಲ್ಲ, ಮರ ಇಲ್ಲದ ಕಡೆ ಗಿಡ ನೆಡಿಸಬೇಕು ಎಂದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel