ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

May 16, 2024
5:43 PM

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಟೆಂಡರ್(Tender)​​​​​ ಪಡೆದು ನಾಲ್ಕು ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಟ್ಟು ಪೋಷಣೆ ಮಾಡಿ, ಮಾರುಕಟ್ಟೆಯಲ್ಲಿ(Market) ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಲಕ್ಷಾಂತರ ಮತ್ಸ್ಯಗಳು ಸಾವನ್ನಪ್ಪಿದ್ದು, ಟೆಂಡರ್​​​​ ಪಡೆದವರಿಗೆ ನಷ್ಟವಾಗಿದೆ. ಕಿಡಿಗೇಡಿಗಳ್ಯಾರೋ ಕೆರೆಗೆ ವಿಷ ಹಾಕಿದ್ದು ಮೀನುಗಳು ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

Advertisement

‘ಲಕ್ಷ್ಮಿ ವೆಂಕಟೇಶ್ವರ ಮೀನು ಉತ್ಪಾದಕ, ಮಾರಾಟ ಮತ್ತು ಸಂಸ್ಕರಣ ಸಹಾಯಕ ಸಂಘ’ದಿಂದ ಮಂಜುನಾಥ್, ಸಿದ್ದೇಶ್, ಹನುಮಂತ ಎಂಬುವರು ಗ್ರಾಮಪಂಚಾಯತ್​​ ಮುಖೇನಾ ಟೆಂಡರ್ ಪಡೆದು ಮೀನು ಸಾಕಾಣಿಕೆ ಮಾಡುತ್ತಿದ್ದರು. ಈಗಾಗಲೇ ಮೀನುಗಳನ್ನು ಬಲೆ ಹಾಕಿ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಕೆರೆಯಲ್ಲಿ ಒಂದೊಂದು ಮೀನು 5 ರಿಂದ 10 ಕೆಜಿ ಇದ್ದು ಒಳ್ಳೆ ಬೆಲೆಗೆ ಮಾರಾಟ ಆಗುತಿತ್ತು. ಮೀನಿನ ಗಾತ್ರ ಕಂಡು ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕಳ್ಳತನದಿಂದ ಮೀನು ಹಿಡಿಯುತ್ತಿದ್ದರು. ಹೀಗಾಗಿ ಮೀನುಗಳ ರಕ್ಷಣೆಗೆ ಟೆಂಡರ್​ ಪಡೆದವರು ಕೆರೆ ಬಳಿ ಕಾಯುತ್ತಿದ್ದರು. ಇದರಿಂದ ಮೀನು ಸಿಗದೆ ಇದ್ದಾಗ ಕೆಲ ಖದೀಮರು ಕೆರೆಗೆ ವಿಷ ಹಾಕಿರಬಹುದೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಮೃತ ಮೀನುಗಳು

ಕೆರೆಯಲ್ಲಿ ಸಣ್ಣ ಮೀನುಗಳಿಗಿಂತಲೂ ದೊಡ್ಡ ಗಾತ್ರದ ಮೀನುಗಳೇ ಸಾವನ್ನಪ್ಪಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿತನಕ ಒಟ್ಟು 1-2 ಲಕ್ಷ ಮೀನುಗಳು ಸತ್ತಿರಬಹುದೆಂದು ಅಂದಾಜಿಸಲಾಗಿದೆ. ಮೀನುಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ. ಹಾಗೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಮೀನುಗಳ ಮಾರಣಹೋಮ

ಮೂಲ : ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group