ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಟೆಂಡರ್(Tender) ಪಡೆದು ನಾಲ್ಕು ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಟ್ಟು ಪೋಷಣೆ ಮಾಡಿ, ಮಾರುಕಟ್ಟೆಯಲ್ಲಿ(Market) ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಲಕ್ಷಾಂತರ ಮತ್ಸ್ಯಗಳು ಸಾವನ್ನಪ್ಪಿದ್ದು, ಟೆಂಡರ್ ಪಡೆದವರಿಗೆ ನಷ್ಟವಾಗಿದೆ. ಕಿಡಿಗೇಡಿಗಳ್ಯಾರೋ ಕೆರೆಗೆ ವಿಷ ಹಾಕಿದ್ದು ಮೀನುಗಳು ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
‘ಲಕ್ಷ್ಮಿ ವೆಂಕಟೇಶ್ವರ ಮೀನು ಉತ್ಪಾದಕ, ಮಾರಾಟ ಮತ್ತು ಸಂಸ್ಕರಣ ಸಹಾಯಕ ಸಂಘ’ದಿಂದ ಮಂಜುನಾಥ್, ಸಿದ್ದೇಶ್, ಹನುಮಂತ ಎಂಬುವರು ಗ್ರಾಮಪಂಚಾಯತ್ ಮುಖೇನಾ ಟೆಂಡರ್ ಪಡೆದು ಮೀನು ಸಾಕಾಣಿಕೆ ಮಾಡುತ್ತಿದ್ದರು. ಈಗಾಗಲೇ ಮೀನುಗಳನ್ನು ಬಲೆ ಹಾಕಿ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಕೆರೆಯಲ್ಲಿ ಒಂದೊಂದು ಮೀನು 5 ರಿಂದ 10 ಕೆಜಿ ಇದ್ದು ಒಳ್ಳೆ ಬೆಲೆಗೆ ಮಾರಾಟ ಆಗುತಿತ್ತು. ಮೀನಿನ ಗಾತ್ರ ಕಂಡು ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕಳ್ಳತನದಿಂದ ಮೀನು ಹಿಡಿಯುತ್ತಿದ್ದರು. ಹೀಗಾಗಿ ಮೀನುಗಳ ರಕ್ಷಣೆಗೆ ಟೆಂಡರ್ ಪಡೆದವರು ಕೆರೆ ಬಳಿ ಕಾಯುತ್ತಿದ್ದರು. ಇದರಿಂದ ಮೀನು ಸಿಗದೆ ಇದ್ದಾಗ ಕೆಲ ಖದೀಮರು ಕೆರೆಗೆ ವಿಷ ಹಾಕಿರಬಹುದೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಕೆರೆಯಲ್ಲಿ ಸಣ್ಣ ಮೀನುಗಳಿಗಿಂತಲೂ ದೊಡ್ಡ ಗಾತ್ರದ ಮೀನುಗಳೇ ಸಾವನ್ನಪ್ಪಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿತನಕ ಒಟ್ಟು 1-2 ಲಕ್ಷ ಮೀನುಗಳು ಸತ್ತಿರಬಹುದೆಂದು ಅಂದಾಜಿಸಲಾಗಿದೆ. ಮೀನುಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ. ಹಾಗೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಮೂಲ : ಅಂತರ್ಜಾಲ ಮಾಹಿತಿ
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…