ಅವಿಭಜಿತ ದಕ್ಷಿಣ ಕನ್ನಡ(Dakshina Kannada) ಹಾಗೂ ಉಡುಪಿ(Udupi) ಜಿಲ್ಲೆಯ ಕೆಲವು ತಾಲೂಕುಗಳನ್ನು ತುಳುನಾಡು(Tulunadu) ಎನ್ನಲಾಗುತ್ತದೆ. ಇಲ್ಲಿನ ಬಹುತೇಕ ಮಂದಿ ತುಳು ಭಾಷೆಯನ್ನು(Tulu language) ಮಾತನಾಡುತ್ತಿದ್ದಾರೆ. ಇತ್ತೀಚೆಗೆ ತುಳು ಲಿಪಿ(Tulu inscription) ಕಲಿಯುವ ಅಭಿಯಾನವೂ ಆರಂಭವಾಗಿದೆ. ಹಲವು ದಶಕಗಳಿಂದ ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಬೇಕು ಅನ್ನುವುದು ತುಳುವರ ಕೂಗು. ಆದರೆ ಅದು ಇದುವರೆಗೆ ಸಾಧ್ಯವಾಗಿಲ್ಲ. ಇದೀಗ ತುಳು ಭಾಷೆಯನ್ನು (Tulu language) 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ ಎಂದು ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ಒತ್ತಾಯಿಸಿದರು. ತುಳುವಲ್ಲೇ ಮಾತನಾಡಿದ ಅಶೋಕ್ ರೈ (Ashok Kumar Rai) ಅವರು ಸದನದಲ್ಲಿ ಮನವಿ ಮನವಿ ಮಾಡಿದ್ದರು. ಆ ಕಡೆಯಿಂದ ಸ್ಪೀಕರ್ ಯು.ಟಿ ಖಾದರ್ (UT Khader) ಕೂಡ ತುಳುವಿನಲ್ಲೇ ಉತ್ತರ ಕೊಟ್ಟರು.
ಈ ವೇಳೆ ನೀವಿಬ್ಬರೇ ಮಾತನಾಡಿದ್ರೆ ಹೇಗೆ? ನಮಗೆ ನಿಮ್ಮ ಭಾಷೆ ಹೇಗೆ ಗೊತ್ತಾಗಬೇಕು? ಅಂತ ಹಲವು ಶಾಸಕರು ತಮಾಷೆಗೆಳೆದ ಪ್ರಸಂಗವೂ ಸದನದಲ್ಲಿ ನಡೆಯಿತು. ನೀವು ಏನು ಹೇಳಿದ್ರಿ ನಮಗೆ ಗೊತ್ತಾಗಲಿಲ್ಲ. ನಾವೇನು ಮಂಗಳೂರಿನ (Mangaluru) ಅಧಿವೇಶನದಲ್ಲಿ ಇದ್ದೇವಾ? ಅಂತಾ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ಜೋರಾಗಿ ನಕ್ಕು, ಕನ್ನಡದಲ್ಲಿ ಮಾತನಾಡಿ ಎಂದರು. ಈ ವೇಳೆ ವೇದವ್ಯಾಸ ಕಾಮತ್ ರಿಂದಲೂ (Veda Vyasa Kamath) ತುಳು ಸಂಭಾಷಣೆ ನಡೆಯಿತು. ಶಾಸಕ ಅಶೋಕ್ ರೈ ಹೇಳಿದಂತೆ 2ನೇ ಅಧಿಕೃತ ಭಾಷೆ ಮಾಡಿ ಎಂದು ಸದನದಲ್ಲಿ ಕೈಮುಗಿದು ಮನವಿ ಮಾಡಿದರು.
ಇದರಿಂದ ತಂಗಡಗಿ ಅನುಪಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಉತ್ತರ ನೀಡಿ, ಬೇರೆ ರಾಜ್ಯಗಳಲ್ಲಿ ಎರಡು ಭಾಷೆಗಳಿವೆ. ಬಿಹಾರದಲ್ಲೂ ಎರಡು ಭಾಷೆಗಳಿವೆ, ಸ್ವಂತ ಖರ್ಚಿನಲ್ಲಿ ಅಧ್ಯಯನ ಮಾಡಿ ತಂದಿದ್ದಾರೆ. ತುಳು ಭಾಷೆಯ ಪ್ರಾಚೀನತೆ ಇತಿಹಾಸ ಗಮನಕ್ಕಿದೆ. ನನ್ನ ಬಾಲ್ಯ ಸ್ನೇಹಿತ ಶ್ರವಣ್ ಅನ್ನುವವರಿದ್ದರು. ಅವರಿಗೆ ಅವರ ತಾಯಿ ತುಳುವಿನಲ್ಲೇ ಬೈಯ್ಯುತ್ತಿದ್ರು. ಹಾಗಾಗಿ ನೀವೇನು ಹೇಳಿದ್ರಿ ನನಗೂ ಅರ್ಥವಾಗಿದೆ. ನಾನು ಇದರ ಪರವಾಗಿದ್ದೇನೆ. ನಾಳೆಯೇ ಸಚಿವರ ಗಮನಕ್ಕೆ ತರುತ್ತೇನೆ. ಸಭೆ ಮಾಡಿ ನಿರ್ಧಾರ ಮಾಡ್ತೇವೆ, ಅಂತ ಸದನಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು. ಈ ವೇಳೆ ಲಂಬಾಣಿಯನ್ನೂ ಸೇರಿಸುವಂತೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮನವಿ ಮಾಡಿದರು. 8ನೇ ಪರಿಚ್ಚೇದಕ್ಕೆ ಸೇರಿಸಲು ಮನವಿ ಮಾಡಿದರು.
- ಅಂತರ್ಜಾಲ ಮಾಹಿತಿ