ಇಷ್ಟು ದಿನ ಏರುತ್ತಲೇ ಇದ್ದ ಟೊಮೆಟೋ ಬೆಲೆಯಲ್ಲಿ ಕುಸಿತ ಕಂಡಿದೆ. ಗ್ರಾಹಕರ ಕಹಿಯಾದರೂ ರೈತರ ಬಾಳು ಬೆಳಗಿದ್ದ ಟೊಮೆಟೋ ಬೆಲೆ ಇಂದು ಕೋಲಾರ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ. ಹೆಚ್ಚುವರಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯುಂಟಾಗಿದೆ.
ಕೋಲಾರದ ಮಾರುಕಟ್ಟೆಯಲ್ಲಿ ಒಂದೇ ದಿನ 15 ಕೆಜಿ ಬಾಕ್ಸ್ ಮೇಲೆ 500 ರೂಪಾಯಿವರೆಗೆ ಇಳಿಕೆಯಾಗಿದೆ. ಬುಧವಾರ 15 ಕೆಜಿ ಟೊಮೆಟೋ ಬಾಕ್ಸ್ 2,200 ರೂಪಾಯಿಗೆ ಮಾರಾಟವಾಗಿತ್ತು. ಇಂದು 500 ರೂಪಾಯಿಯವರೆಗೆ ಬೆಲೆ ಇಳಿಕೆ ಕಂಡಿದೆ. 15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1,700 ರೂಪಾಯಿ ಆಗಿದೆ. ಇಂದು 15 ಕೆಜಿಯ ಒಂದು ಬಾಕ್ಸ್ ಗರಿಷ್ಠ 1,700 ರೂಪಾಯಿವರೆಗೆ ಮಾರಾಟಗೊಂಡಿದೆ. ಒಂದು ಕೆಜಿ ಟೊಮೆಟೋ ಬೆಲೆ 113 ರೂಪಾಯಿ ಆಗಿದೆ. ಗ್ರಾಹಕರಿಗೆ 120 ರಿಂದ 130 ರೂ.ಗಳವರೆಗೆ ಸಿಗಲಿದೆ. ಟೊಮೆಟೊ ಬೆಲೆ ಅಧಿಕವಾದ ಬೆನ್ನಲ್ಲೇ ಹೊರ ರಾಜ್ಯದ ದಲ್ಲಾಳಿಗಳು ಖರೀದಿಗೆ ಮುಂದಾಗಿರಲಿಲ್ಲ. ಇತ್ತ ಟೊಮೆಟೋ ಬೆಲೆ ಕೆಜಿಗೆ 150 ರಿಂದ 200 ರೂ.ಗೆ ತಲುಪಿದ ಕಾರಣ ಗ್ರಾಹಕರಿಗೂ ಕೆಂಪು ಸುಂದರಿ ಬೇಡವಾಗಿದ್ದಾಳೆ.
ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೆ ಏರಿಕೆ ಕಂಡಿದೆ. ಹೊರ ರಾಜ್ಯಗಳಲ್ಲಿ ಟೊಮೆಟೋಗೆ ಬೇಡಿಕೆ ಕುಸಿತ ಹಿನ್ನೆಲೆ ದಲ್ಲಾಳಿಗಳು ಖರೀದಿಗೆ ಹಿಂದೇಟು ಹಾಕಿದ ಕಾರಣ ಕೋಲಾರದಲ್ಲಿ 500 ರೂ.ವರೆಗೆ ಇಳಿಕೆಯಾಗಿದೆ. ಮೂರು ದಿನದ ಹಿಂದೆ 15 ಕೆಜಿ ಬಾಕ್ಸ್ 2,600 ರೂಪಾಯಿವರೆಗೆ ಟೊಮೆಟೊ ಮಾರಾಟವಾಗಿತ್ತು. ಇಂದು ಭರ್ಜರಿ ಬೆಲೆ ನಿರೀಕ್ಷಿಸಿದ್ದ ರೈತರಿಗೆ ಭಾರೀ ನಿರಾಸೆ ಉಂಟಾಗಿದೆ. ಬೆಲೆ ಏರಿಕೆಯಾದ ಹಿನ್ನೆಲೆ ಗ್ರಾಹಕರು ಟೊಮೆಟೋಗೆ ಪರ್ಯಾಯ ವಸ್ತುಗಳನ್ನು ಕಂಡು ಕೊಂಡಿದ್ದಾರೆ. ಹುಣಸೆ ಹಣ್ಣು, ನಿಂಬೆ ಹಣ್ಣು ಖರೀದಿ ಮಾಡುತ್ತಿದ್ದಾರೆ.
Source: Digital Media
ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…
ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…
ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ…
ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…
ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…
ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…