ರಸ್ತೆ ಬದಿಯ ಮರಗಳ ಸುತ್ತ ತುಂಬಿರುವ ಕಾಂಕ್ರೀಟ್ ತೆಗೆಯಲು ಹಾಗೂ ಅಂತಹ ಮರಗಳನ್ನು ಸಂರಕ್ಷಿಸಲು ಮರಗಳ ಡಿಕಾಂಕ್ರೀಟೀಕರಣ ಉಪಕ್ರಮʼಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಮರಗಳ ಬೇರುಗಳು ಸಡಿಲಗೊಂಡು ಅವು ಬಹುಬೇಗ ಬಿದ್ದು ಹೋಗುವುದನ್ನು ತಡೆಯುವುದಲ್ಲದೆ, ಮರಗಳು ದೀರ್ಘಕಾಲ ಬಾಳುವಂತೆ ಮಾಡುವ ಉದ್ದೇಶವಿದೆ. ಡಿಕಾಂಕ್ರೀಟೀಕರಣ ಎಂಬುದು ವೈಜ್ಞಾನಿಕ ರೀತಿಯಲ್ಲಿ ಮರಗಳ ಬೇರಿಗೆ ಶಕ್ತಿ ತುಂಬುವ ವಿಧಾನವಾಗಿದೆ. ಮರಗಳ ಸುತ್ತ ಒಂದು ಮೀಟರ್ ಸ್ಥಳವನ್ನು ಕಟ್ ಮಾಡಿ ಅಲ್ಲಿನ ಕಾಂಕ್ರೀಟ್ ಅಥವಾ ಟೈಲ್ಸ್ ತೆರವುಗೊಳಿಸುವುದು. ಆ ಜಾಗಕ್ಕೆ ಆರೋಗ್ಯಯುತ ಮಣ್ಣು ಮತ್ತು ಸಾವಯವ ಗೊಬ್ಬರ ಹಾಕುವುದು. ಆನಂತರ ಮರಗಳ ಬೇರಿಗೆ ಗಾಳಿ ಸರಾಗವಾಗಿ ಹೋಗುವಂತೆ ಮಾಡಿ ನೀರು ಹಾಕಿ, ಮರದ ಸುತ್ತ ಮಣ್ಣನ್ನು ಹಾಕಿ ಮುಚ್ಚುವುದು ಸರಿಯಾದ ವಿಧಾನವಾಗಿದೆ.
ಜಗತ್ತಿನ ಯಾವುದೇ ಕಡೆಗಳಲ್ಲಿ ನೆಲೆಸಿದರೂ ನಮ್ಮ ಭಾಷೆ- ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯಬಾರದು ಎಂದು…
ಕರ್ನಾಟಕದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ…
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ…
ಹವಾಮಾನ ಆಧಾರಿತ ಬೆಳೆವಿಮೆಯ ಕಳೆದ ಸಾಲಿನ ವಿಮಾ ವರ್ಷವು ಅಂತ್ಯವಾಗಿದೆ. ಈಗ ಜಿಲ್ಲಾಧಿಕಾರಿಗಳ…
ಮಕ್ಕಳಲ್ಲಿ ಮೌನವನ್ನು ಮುರಿದು ಮಾತನಾಡುವ ಹಂಬಲ ಪ್ರಾರಂಭವಾಗುವುದೇ ಮೂರು ತಿಂಗಳಿನ ನಂತರ. ಅಲ್ಲಿಯ…
ಕಳೆದ 3 ವರ್ಷಗಳಲ್ಲಿ ಭಾರತದ ಆರ್ಥವ್ಯವಸ್ಥೆ ಏರುಗತಿಯಲ್ಲಿ ಸಾಗಿದೆ. ಈ ಅವಧಿಯಲ್ಲಿ, ಸರಾಸರಿ…