ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

May 4, 2024
10:32 AM
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ಈ ಬಾರಿ ಕೊಕೋ ಧಾರಣೆ ವಿಪರೀತವಾಗಿ ಏರಿಕೆ ಕಂಡಿತ್ತು. 60-70 ರೂಪಾಯಿ ಆಸುಪಾಸಿನಲ್ಲಿದ್ದ ಧಾರಣೆ ಏರಿಕೆಯಲ್ಲಿ ಸಾಗಿ 325 ರೂಪಾಯಿವರೆಗೂ ಹೋಗಿತ್ತು. ಇದೀಗ ಮತ್ತೆ ಕುಸಿತ ಕಂಡಿದ್ದು 290 ರೂಪಾಯಿಗೆ ಇಳಿಕೆಯಾಗಿದೆ. 

Advertisement

ಅಡಿಕೆಯ ಜೊತೆಗೆ  ಕರಾವಳಿ , ಮಲೆನಾಡು ಪ್ರದೇಶದಲ್ಲಿ ಕೃಷಿಕರು ಉಪಬೆಳೆಯಾಗಿ ಕೊಕೋ ಬೆಳೆಸುತ್ತಿದ್ದರು. ಆದರೆ ಧಾರಣೆ ಕುಸಿತದ ಹಿನ್ನೆಲೆಯಲ್ಲಿ ಕೊಕೋ ಬೆಳೆ ಭಾರೀ ಪ್ರಚಾರ ಪಡೆದಿರಲಿಲ್ಲ. ಅಡಿಕೆ ಧಾರಣೆ ಏರಿಕೆಯಾದ ಹಿನ್ನೆಲೆಯಲ್ಲಿ ಇದ್ದ ಕೊಕ್ಕೋ ಗಿಡಗಳೂ ನಾಶವಾದವು. ಇದ್ದಕ್ಕಿದ್ದಂತೆ ಕೊಕ್ಕೋ ಧಾರಣೆ ಏರಿಕೆಯಾಯಿತು. ಮತ್ತೆ ಕೊಕೋ ಬೆಳೆಯತ್ತ ಎಲ್ಲರ ಚಿತ್ತ ನೆಟ್ಟಿತು. ಹಸಿ ಕೊಕ್ಕೋ ಧಾರಣೆ 325 ರೂಪಾಯಿವರೆಗೆ ಏರಿಕೆ ಕಂಡಿದ್ದರೆ, ಒಣ ಕೊಕೊ ಧಾರಣೆ 900 ರೂಪಾಯಿ ಆಸುಪಾಸಿಗೆ ಬಂದಿತ್ತು. ಇದೀಗ ಧಾರಣೆ ಇಳಿಕೆಯಾಗಿದೆ. ಹಸಿ ಕೊಕ್ಕೋ ಧಾರಣೆ 290 ರೂಪಾಯಿಗೆ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಕೊಕೊ  ಪ್ರಮುಖವಾಗಿ  ಆಫ್ರಿಕಾ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತದೆ. ಪ್ರಪಂಚದ ಬೇರೆ ಬೇರೆ ಕಡೆಗೆ ರಫ್ತು ಕೂಡಾ ಮಾಡುತ್ತದೆ. ಭಾರತವೂ ಕೂಡಾ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಚೆಗೆ ಕೊಕೋಗೆ  ವೈರಸ್ ರೋಗದ ದಾಳಿಗೆ ಒಳಗಾಗಿ  ಬೆಳೆ ನಾಶವಾಗಿದೆ. ಕೆಲವು ವರ್ಷಗಳ ಮಟ್ಟಿಗೆ ಬೆಳೆ ತೆಗೆಯಲು ಸಾಧ್ಯವಾಗದೇ ಇರುವುದು ಇಲ್ಲಿನ ಕೊಕೋಗೆ ಬೇಡಿಕೆ ಹೆಚ್ಚಾಗಿದೆ, ಧಾರಣೆ ಏರಿಕೆಯಾಯಿತು.ಕೊಕೊ ಬೆಳೆಯುವ ಪ್ರಮುಖ ಪ್ರದೇಶಗಳಾದ ಪಶ್ಚಿಮ ಆಫ್ರಿಕಾ, ದಕ್ಷಿಣ ಅಮೆರಿಕ, ಆಗ್ನೇಯ ಏಷ್ಯಾ ಮತ್ತು ಶಾಂತಿಸಾಗರ ಪ್ರದೇಶಗಳು ಹವಾಮಾನ ಬದಲಾವಣೆ ಮತ್ತು ಕೀಟಗಳು ಹಾಗೂ ವಿವಿಧ ವೈರಸ್ ಕಾಯಿಲೆಗಳಿಗೆ ಒಳಗಾಗಿವೆ.

2012 ರಲ್ಲಿಯೇ ಕೊಕೋ ಬೆಳೆಗೆ ಬೇಡಿಕೆ ಇರುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದರು. ಪ್ರಪಂಚದ ಎಲ್ಲಾ ಕಡೆಯಲ್ಲೂ ಕೊಕೋಗೆ ಬೇಡಿಕೆ ಇದೆ, ಒಂದು ವೇಳೆ ರೋಗ ಬಂದರೆ ತಕ್ಷಣವೇ ಕೊಕೋ ಕೊರತೆಯೂ ಆಗಲಿದೆ ಎಂದೂ ಎಚ್ಚರಿಸಿದ್ದರು. ಆದರೆ ಇತರ ಬೆಲೆಗಳ ನಡುವೆ ಕೊಕೋ ನಿರ್ಲಕ್ಷ್ಯವಾಗಿತ್ತು.

ತಜ್ಞರ ಪ್ರಕಾರ 2020ರ ಹೊತ್ತಿಗೆ ಶೇ. 25ರಷ್ಟು ಕೊಕೋ ಬಳಕೆ ಹೆಚ್ಚಾಗಲಿದೆ ಎಂದು 2012 ರಲ್ಲಿ ಹೇಳಿದ್ದರು. ಅದು ನಿರೀಕ್ಷೆಗೂ ಮೀರಿ ಬೆಳೆದಿತ್ತು 2020 ರ ವೇಳೆಗೆ ಶೇ.40 ರಷ್ಟು ಬೇಡಿಕೆ ಕಂಡುಬಂದಿತ್ತು, ಚಾಕೋಲೇಟ್‌ ಬಳಕೆ ಹೆಚ್ಚಾಗಿತ್ತು.ಆದರೆ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಕೊಕೊ ಕೃಷಿಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಕೊಕೊ ಕೃಷಿ ಈಗಲೂ ಬಹುತೇಕ ಎಲ್ಲೆಡೆ ಅಸ್ಥಿರತೆ  ಮುಂದುವರಿದಿದೆ. ಜಗತ್ತಿನಾದ್ಯಂತ ಕೃಷಿಕರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕೊಕೋಗೆ ಬೇಡಿಕೆ ಇರಲಿದೆ. ಸದ್ಯ ಮಳೆ ಹಾಗೂ ಹವಾಮಾನದ ಕಾರಣಗಳಿಂದ ಧಾರಣೆಯಲ್ಲಿ ಸ್ವಲ್ಪ ಏರಿಳಿತ ಕಂಡಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |
May 1, 2025
1:42 PM
by: ಸಾಯಿಶೇಖರ್ ಕರಿಕಳ
ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ
May 1, 2025
7:55 AM
by: The Rural Mirror ಸುದ್ದಿಜಾಲ
ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |
May 1, 2025
7:38 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |
April 30, 2025
1:54 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group