ಬೆಳಕು ತರಲಿ ಹೊಸತು ಹರುಷ
ಹೊಸೆದು ಬಾಳ ಯಾನಕೆ
ಒನಪು ಇರಲಿ ಬೆಸೆದು ಮನಸ
ಬಸಿದು ನೋವ ದೂರಕೆ ||
ಹಳೆಯ ಕೊಳೆಯು ತೊಲಗಲಿಂದು
ಬೇವನಳಿಸಿ ಬಾಳಲಿ
ಕಳೆಯು ಮೂಡಿ ಬರಲಿ ಮೊಗದಿ
ಸಿಹಿಯನುಣಿಸಿ ಬದುಕಲಿ ||
ಸಹನೆಯೊರತೆ ನಿತ್ಯ ಹರಿದು
ಒಲವು ಮೂಡಿ ಅರಳಲಿ
ದ್ವೇಷ ರೋಷ ಕೋಪವಳಿದು
ಗೆಲುವು ಕೂಡಿ ನಲಿಯಲಿ ||
ಸತ್ಯ ನಿಷ್ಠೆ ನ್ಯಾಯ ಪಥವು
ನಮಗೆ ದಾರಿ ತೋರಲಿ
ನಿತ್ಯ ಸ್ನೇಹವಿರಲು ಮತವು
ಚೆಲುವು ನಗೆಯ ಬೀರಲಿ ||
ಬಡತನದ ಶಾಪವಳಿದು
ಹಸಿವು ದೂರವಾಗಲಿ
ಮುದಿತನಕೆ ಪ್ರೀತಿ ಒಲಿದು
ಬಾಳು ಸ್ವರ್ಗವೆನಿಸಲಿ ||
* ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement