Advertisement
ಸುದ್ದಿಗಳು

ಮೊಗ್ರದಲ್ಲಿ ದೀಪಾವಳಿ ಆಚರಣೆ | ಹಣತೆಗಳಿಂದ ಕಂಗೊಳಿಸಿದ ಮೊಗ್ರದ ಗ್ರಾಮಸೇತು

Share

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಜನರಿಂದಲೇ ನಿರ್ಮಾಣವಾದ ಕಾಲು ಸಂಕ ಗ್ರಾಮಸೇತು ಮೇಲೆ ಹಣತೆ ಬೆಳಗಿ ದೀಪಾವಳಿಯನ್ನು ಬುಧವಾರ ರಾತ್ರಿ ಆಚರಣೆ ಮಾಡಲಾಯಿತು.

ಊರಿನ ಜನರು ಸೇತುವೆಯ ಮೇಲೆ ಹಣತೆ ಬೆಳಗಿದರು. ಗ್ರಾಮದಲ್ಲಿ ಅಭಿವೃದ್ಧಿಯ ಬೆಳಕು ಹರಿಯಲಿ ಹಾಗೂ ಮೊಗ್ರದಲ್ಲಿ ಶಾಶ್ವತವಾದ ಸೇತುವೆ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದ ಬಳಿಕ ವೀಕ್ಷಿತ್‌ ಕುತ್ಯಾಳ ಹಾಗೂ ಉಜಿತ್‌ ಶ್ಯಾಂ ಚಿಕ್ಮುಳಿ ಅವರಿಂದ ಹಾಡು ಹಾಗೂ ಕೊಳಲು ವಾದನ ನಡೆಯಿತು.ಗ್ರಾಮಭಾರತ ತಂಡ ಕಾರ್ಯಕ್ರಮ ಆಯೋಜನೆ ಮಾಡಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜೇಸಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಶಶಿಧರ ಪಳಂಗಾಯ ಮಾತನಾಡಿ,” ಬೆಳಕಿನ ಮಹತ್ವ ದೀಪಾವಳಿಯಂದು ತಿಳಿಯುತ್ತದೆ. ಈ ದಿನ ಬೆಳಕಿನ ಮಹತ್ವ ತಿಳಿದುಕೊಳ್ಳಬೇಕಾದ್ದು ಅಗತ್ಯವೂ ಹೌದು.  ದೀಪಾವಳಿಯಂದು ನರಕಚತುರ್ದಶಿ ಕೂಡಾ ಮಹತ್ವ ಪಡೆದಿದೆ, ಅಂದು ನರಕಾಸುರನನ್ನು ಸಂಹಾರ ಮಾಡಿದ ದಿನ ಎಂದು ಕರೆಯಲಾಗುತ್ತದೆ. ಅಸುರ ಎಂದರೆ ಋಣಾತ್ಮಕ ಅಂಶಗಳು ನೆನಪಿಗೆ ಬರುತ್ತವೆ. ಇಂದು ಋಣಾತ್ಮಕ ಅಂಶಗಳಲ್ಲಿ ಅವಿಶ್ವಾಸ, ನಂಬಿಕೆದ್ರೋಹ, ಹೇಳಿದಂತೆ ನಡೆದುಕೊಳ್ಳದೇ ಇರುವುದು  ಎಲ್ಲವೂ ಬರುತ್ತದೆ. ಇದೆಲ್ಲಾ ಅಸುರ ಶಕ್ತಿಗಳು ಎಂದು ಪರಿಗಣಿಸಬಹುದು. ಇದೆಲ್ಲಾ ಮೆಟ್ಟಿ ನಿಂತು ಜನರು ಒಂದಾಗಿ ಕಿರು ಕಾಲುಸಂಕ ನಿರ್ಮಾಣ ಮಾಡಿರುವುದು ಅಭಿನಂದನಾರ್ಹವಾಗಿದೆ. ಮುಂದೆ ಸಮರ್ಪಕ ಸೇತುವೆಯಾಗಲಿ ಎಂದು ಹಾರೈಸಿದರು. ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾರ ಶಕ್ತಿ ಇದೆ, ಜನಸಾಮಾನ್ಯ ಕೂಡಾ ಈ ದೇಶದ ಪ್ರಧಾನಿಯಾಗಬಹುದು ಎಂದು ತೋರಿಸಿದ ದೇಶ” ಎಂದರು.

ಗ್ರಾಮ ಭಾರತ ತಂಡದ ಅಧ್ಯಕ್ಷ ಗಂಗಾಧರ ಭಟ್‌ ಪುಚ್ಚಪ್ಪಾಡಿ ಮಾತನಾಡಿ, “ಒಂದು ಒಳ್ಳೆಯ ದಿನ ಎಲ್ಲರೂ ಜೊತೆಯಾಗಿ ಸೇರುವುದು  ಉತ್ತಮ ಸಂಪ್ರದಾಯ. ಬದುಕಿನದ್ದಕ್ಕೂ ನಾವೇನು ಮಾಡಿದ್ದೇವೆ ಎನ್ನುವುದು  ಮುಖ್ಯವಾಗುತ್ತದೆ. ನಾವೆಲ್ಲಾ ಮುಂದಿನ ದಿನಗಳಲ್ಲಿಯೂ ಜನಪರವಾಗಿ ಹೆಜ್ಜೆ ಇಡಬೇಕಾಗಿದೆ” ಎಂದರು.

ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀಶ ಗಬ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, “ದೀಪಾವಳಿ ಹಬ್ಬದ ಮೊದಲ ದಿನ ನರಕಾಸುರ ಸಂಹಾರ ಮಾಡಿದ ದಿನವಾದರೆ, ಇನ್ನೊಂದು ದೀಪಗಳ ಮೂಲಕ ಬೆಳಗುವುದು. ಬೆಳಕು ಎಂದರೆ ಜ್ಞಾನವೂ ಹೌದು. ಕತ್ತಲು ದೂರವಾಗಿ ಬೆಳಗಬೇಕಾದ ದಿನಗಳು ಬಂದಿವೆ” ಎಂದರು.

ಗ್ರಾಮ ಭಾರತ ತಂಡದ ಸಂಚಾಲಕ ಸುಧಾಕರ ಮಲ್ಕಜೆ ಸ್ವಾಗತಿಸಿದರು. ಗ್ರಾಮ ಭಾರತ ತಂಡದ ಕಾರ್ಯದರ್ಶಿ ಮಂಜುನಾಥ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಭಾರತ ತಂಡವು ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

5 hours ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

9 hours ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

13 hours ago

ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು

ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…

1 day ago

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

2 days ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

2 days ago