ಈ ಬಾರಿ ಬೆಳೆವಿಮೆ ಪ್ರೀಮಿಯಂ ಪಾವತಿಗೆ ತಡವಾಗಿ ಸೂಚನೆಯಾಗಿದೆ. ಜೂನ್.30 ರ ಒಳಗೆ ಪ್ರೀಮಿಯಂ ಪಾವತಿಯಾಗಬೇಕು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜನಪ್ರತಿನಿಧಿ, ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದ ಈ ವರ್ಷ ಜೂನ್ ಮುಗಿಯುತ್ತಾ ಬಂದರೂ ವಿಮೆ ಪ್ರೀಮಿಯಂ ಕಟ್ಟಲು ಟರ್ಮ್ ಶೀಟ್ ಸಿದ್ದವಾಗದೆ ಈ ವರ್ಷದ ಬೆಳೆ ವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆಲವು ಪ್ರಯೋಜನಗಳಿಂದ ರೈತರು ವಂಚಿತರಾಗಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮಳೆ ಮತ್ತು ಹವಾಮಾನ ವೈಪರೀತ್ಯ ಬಗ್ಗೆ ಸರ್ಕಾರ ಮತ್ತು ರೈತರಿಗೆ ಸರಿಯಾದ ಮಾಹಿತಿ ಮತ್ತು ತಿರುಚಿದ ಮಾಹಿತಿ ನೀಡಿ ವಿಮಾ ಕಂಪನಿಗಳೊಂದಿಗೆ ಸೇರಿಕೊಂಡು ರೈತ ಸಮೂಹಕ್ಕೆ ವಿಮಾ ಹಣ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿ ಬಂದಿತ್ತು. ಹೀಗಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿಮಾ ಸಂಸ್ಥೆಗಳು ಬೆಳೆ ವಿಮಾ ಪರಿಹಾರಕ್ಕೆ ಹವಾಮಾನ ಇಲಾಖೆ ನೀಡುವ ಮಳೆ ಮಾಪನವನ್ನು ಪರಿಗಣಿಸಲಾಗುತ್ತದೆ. ಇಲಾಖೆಯಿಂದ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಅಳವಡಿಸಿರುವ ಮಳೆ ಮಾಪನಗಳು ಮಲೆನಾಡಿನ ಬಹುತೇಕ ಕಡೆ ಕೆಟ್ಟು ನಿಂತು ವರ್ಷಗಳು ಕಳೆದರೂ ದುರಸ್ತಿ ಮಾಡದೆ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಸಾವಿರಾರು ರೂಪಾಯಿ ಹಣ ಪಾವತಿಸಿದ ರೈತರಿಗೆ ಸಮರ್ಪಕವಾಗಿ ವಿಮಾ ಪರಿಹಾರ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿತ್ತು. ಈ ಬಗ್ಗೆ ಕೊಪ್ಪ ಮೊದಲಾದ ಕಡೆಯ ಅಡಿಕೆ ಬೆಳೆಗಾರರ ಒಕ್ಕೂಟ ಶಾಸಕ ಹಾಗೂ ಸಚಿವರ ಗಮನಕ್ಕೆ ತಂದಿತ್ತು.
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…