Advertisement
ಸುದ್ದಿಗಳು

ಅಡಿಕೆ ಹಾನಿಕಾರಕ ಎಂದ ಸಂಸದರ ಭೇಟಿ | ವಾಸ್ತವ ಮನವರಿಕೆ ಮಾಡಿದ ಅಡಿಕೆ ಬೆಳೆಗಾರರ ನಿಯೋಗ | ಹಳದಿ ಎಲೆರೋಗ ಸಂಶೋಧನೆಗೂ ಆದ್ಯತೆ |

Share

ಅಡಿಕೆ ಹಾನಿಕಾರಕ ಹೀಗಾಗಿ ಅಡಿಕೆ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದ ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೆ ಅವರನ್ನು ಭೇಟಿಯಾದ ಅಡಿಕೆ ಬೆಳೆಗಾರರ ನಿಯೋಗವು ಅಡಿಕೆ ಹಾನಿಕಾರಕವಲ್ಲ, ಅಡಿಕೆಯಲ್ಲಿ ಔಷಧೀಯ ಗುಣಗಳು ಇವೆ ಎಂದು ಮನವರಿಕೆ ಮಾಡಿದ್ದಾರೆ.

ಅಡಿಕೆ ಬೆಳೆಗಾರರ ನಿಯೋಗವು ಎರಡು ದಿನಗಳಿಂದ ದೆಹಲಿಯಲ್ಲಿ ಅಡಿಕೆ ಬೆಳೆಗಾರರ ಹಿತಕಾಯುವ ವಿವಿಧ ಅಂಶಗಳ ಬಗ್ಗೆ ಸಂಸದರು ಹಾಗೂ ಸಚಿವರನ್ನು ಭೇಟಿ ಮಾಡಿದೆ. ಈ ಸಂದರ್ಭ ಅಡಿಕೆ ಹಾನಿಕಾರಕವಾಗಿದ್ದು ಹೀಗಾಗಿ ಅಡಿಕೆ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದ ಜಾರ್ಖಂಡ್‌ ನ ಗೊಡ್ಡಾದ ಸಂಸದ ನಿಶಿಕಾಂತ್‌ ದುಬೆ ಅವರನ್ನು ಭೇಟಿಯಾಗಿ ಅಡಿಕೆಯ ಸಮಗ್ರ ಮಾಹಿತಿಯನ್ನು ನೀಡಿದರು. ಅಡಿಕೆಯಿಂದ ಆರೋಗ್ಯದ ಮೇಲೆ ಹಾನಿಕಾರಿಕ ಪರಿಣಾಮಗಳಿಲ್ಲ ಎಂಬ ವರದಿಗಳು ಇದೆ. ಅನೇಕ ಸಮಯಗಳಿಂದ ಅಡಿಕೆ ತಿನ್ನುವವರೂ ಇದ್ದಾರೆ, ಅಡಿಕೆಯಲ್ಲಿ ಔಷಧೀಯ ಗುಣಗಳು ಇವೆ ಎಂಬ ವರದಿಗಳ ಮೂಲಕ ಮನವರಿಕೆ ಮಾಡಿದರು.

ಇದೇ ವೇಳೆ ಅಡಿಕೆ ಕೃಷಿ ಸಚಿವ ನರೇಂದ್ರ ಸಿಂಗ್‌ ಥೋಮರ್‌, ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ್‌ ಜೋಶಿ , ಸ್ಮೃತಿ ಇರಾನಿ ಅವರನ್ನೊಳಗೊಂಡ ತಂಡದ ಜೊತೆ ಅಡಿಕೆಯ ವಿವಿಧ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದರು. ವಿಶೇಷವಾಗಿ ಸುಳ್ಯ ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಅಡಿಕೆ ಹಳದಿ ಎಲೆರೋಗದ ಪರಿಹಾರ ಹಾಗೂ ಅಧ್ಯಯನದ ಬಗ್ಗೆಯೂ ಚರ್ಚೆಯಾಗಿದೆ. ಈ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಗಮನಹರಿಸುವಂತೆ ಅಡಿಕೆ ಬೆಳೆಗಾರರ ಹಾಗೂ ಸಹಕಾರಿ ಸಂಸ್ಥೆಗಳ ನಿಯೋಗ ಒತ್ತಾಯ ಮಾಡಿದೆ.

ಅಡಿಕೆ ಜಿಎಸ್‍ಟಿ ತೆರಿಗೆಯನ್ನು  ಎಪಿಎಂಸಿ ಶುಲ್ಕವನ್ನು ಕೂಡಾ ಅದರೊಂದಿಗೆ ವಿಲೀನಗೊಳಿಸಬೇಕು, ಆ ಮೂಲಕ ಕೃಷಿ ಉತ್ಪನ್ನಗಳನ್ನು ಸಂಘಟನಾ ಕ್ಷೇತ್ರದೊಳಗೆ ತಂದು ಕೃಷಿಕರಿಗೆ ಅವರ ಉತ್ಪನ್ನಗಳನ್ನು ಸಹಕಾರಿ ಸಂಸ್ಥೆಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಸಹಿತ ಹಲವು ಬೇಡಿಕೆಗಳನ್ನು ಅಡಿಕೆ ಬೆಳೆಗಾರರ ನಿಯೋಗ, ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,ಗೃಹಸಚಿವ ಅಮಿತ್ ಶಾ ಸಹಿತ ಹಲವರಿಗೂ ಮನವಿ ಸಲ್ಲಿಸಿದೆ. ಅಡಿಕೆ ಅಕ್ರಮ ಆಮದು ತಡೆಯಲು ಕ್ರಮ ಆಗಬೇಕು ಹಾಗೂ ಆಮದು ಸುಂಕ ಹೆಚ್ಚಿಸಬೇಕು ಎಂದು ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ ಅಡಿಕೆ ಮಹಾಮಂಡಳ, ಕ್ಯಾಂಪ್ಕೋ, ರಾಜ್ಯ ಅಡಿಕೆ ಟಾಸ್ಕ್‌ಫೋರ್ಸ್‌ ಸೇರಿದಂತೆ ಸಂಘಟನೆಗಳು ಭಾಗಿಯಾಗಿದ್ದವು.

ಈ ಸಂದರ್ಭ ಅಡಿಕೆ ಮಹಾಮಂಡಳ ಅಧ್ಯಕ್ಷ ಎಚ್‌ ಎಸ್‌ ಮಂಜಪ್ಪ, ಕ್ಯಾಂಪ್ಕೋ ನಿರ್ದೇಶಕ , ಮಾಜಿ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಪ್ರಸಾದ್‌,  ಪ್ರಮುಖರಾದ ಶಿವಕುಮಾರ್‌ ಚನ್ನಗಿರಿ, ಯಡಗೆರೆ ಸುಬ್ರಹ್ಮಣ್ಯ, ಡಾ.ಚೌಡಪ್ಪ ಮೊದಲಾದವರು ಇದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

5 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

17 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

18 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

1 day ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

1 day ago