ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ | ಶಾಲೆಗಳಿಗೆ 2 ದಿನ ರಜೆ ಘೋಷಣೆ |

November 3, 2023
12:06 PM
ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯ ಉಂಟಾಗಿದೆ. ಗಾಳಿಯ ಗುಣಮಟ್ಟವು ತೀವ್ರ ಹದಗೆಟ್ಟಿದೆ. ಹಲವಾರು ಸ್ಥಳಗಳಲ್ಲಿ ಆತಂಕಕಾರಿ ಮಟ್ಟವನ್ನು ತಲುಪಿದೆ.

ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯ ಉಂಟಾಗಿದೆ. ಗಾಳಿಯ ಗುಣಮಟ್ಟವು ತೀವ್ರ ಹದಗೆಟ್ಟಿದೆ. ಹಲವಾರು ಸ್ಥಳಗಳಲ್ಲಿ ಆತಂಕಕಾರಿ ಮಟ್ಟವನ್ನು ತಲುಪಿದೆ. ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಘೋಷಿಸಿದ್ದಾರೆ. ಇದೇ ವೇಳೆ ಎರಡು ದಿನಗಳ ಕಾಲ ಎಲ್ಲಾ ನಿರ್ಮಾಣ ಕಾರ್ಯಗಳನ್ನೂ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.

Advertisement

ಪ್ರತೀ ವರ್ಷ  ನವೆಂಬರ್ 15 ರವರೆಗೆ ದೆಹಲಿಯ ವಾಯುಮಾಲಿನ್ಯವು ಹೆಚ್ಚಾಗುತ್ತದೆ. ಇದಕ್ಕೆ ಪ್ರಮುಖ ಕಾರಣ, ಪಂಜಾಬ್ ಮತ್ತು ಹರ್ಯಾಣದ ರೈತರು ಕೃಷಿ ತ್ಯಾಜ್ಯ ಸುಡುವುದೇ ಪ್ರಮುಖ ಕಾರಣ. ಈ ವರ್ಷ ಸೆಪ್ಟೆಂಬರ್ 15 ರಿಂದ ಪಂಜಾಬ್ ಮತ್ತು ಹರ್ಯಾಣ ಎರಡರಲ್ಲೂ ಕೃಷಿ ತ್ಯಾಜ್ಯ ಸುಡುವ ಘಟನೆಗಳು ಕಡಿಮೆಯಾಗಿದೆ ಆದರೆ ಕಳೆದ ಕೆಲವು ದಿನಗಳಲ್ಲಿ ಏರಿಕೆ ಕಂಡುಬಂದಿದೆ. ತಾಪಮಾನ ಮತ್ತು ಗಾಳಿಯ ವೇಗದಲ್ಲಿ ನಿರೀಕ್ಷಿತ ಕುಸಿತದ ಜೊತೆಗೆ ಕೃಷಿ ಬೆಂಕಿಯ ಕಾರಣದಿಂದ ಮುಂದಿನ 15-20 ದಿನಗಳಲ್ಲಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಇನ್ನಷ್ಟು ಹದಗೆಡಬಹುದು ಎಂದು ಸರ್ಕಾರಿ ಸಂಸ್ಥೆಗಳು ಈ ಹಿಂದೆ ಎಚ್ಚರಿಸಿತ್ತು.

Delhi Chief Minister Arvind Kejriwal on Thursday announced that all government and private primary schools in the capital city will remain shut for the next two days in view of the rising air pollution levels.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್
ಯುಗಾದಿ ಹಾಗೂ ಮಲೆನಾಡಿನ ಅಡಿಕೆ ಭವಿಷ್ಯ ಏನು…? | ಮಲೆನಾಡಿನ ಅಡಿಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕಾದ್ದೇನು…?
April 2, 2025
7:17 AM
by: ಪ್ರಬಂಧ ಅಂಬುತೀರ್ಥ
ಏಪ್ರಿಲ್ 2 ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿ
April 2, 2025
6:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group