ಕೊರೋನಾ ವೈರಸ್ ರೂಪಾಂತರಿ ಒಮಿಕ್ರಾನ್ ನಂತರ ಇದೀಗ ಇನ್ನೊಂದು ರೂಪಾಂತರಿ ವೈರಸ್ ಡೆಲ್ಮಿಕ್ರಾನ್ ಪತ್ತೆಯಾಗಿದೆ. ಭಾರತದಲ್ಲಿ ಸದ್ಯ ಒಮಿಕ್ರಾನ್ ಹರಡುವ ಕಳವಳ ತಜ್ಞರಲ್ಲಿದ್ದರೆ, ಇದೀಗ ಇನ್ನೊಂದು ರೂಪಾಂತರಿ ಡೆಲ್ಮಿಕ್ರಾನ್ ಬಗ್ಗೆಯೂ ಕಳವಳವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಸದ್ಯ ಯುರೋಪ್ ಮತ್ತು ಯುಎಸ್‌ನಲ್ಲಿ ಡೆಲ್ಮಿಕ್ರಾನ್ ಪ್ರಕರಣಗಳು ಕಂಡು ಬಂದಿದೆ ಎಂದು ಕೋವಿಡ್ ಕಾರ್ಯಪಡೆಯ ಸದಸ್ಯ ಶಶಾಂಕ್ ಜೋಶಿ ಹೇಳಿದ್ದಾರೆ. ಇದು ಪಶ್ಚಿಮದಲ್ಲಿ ಹೆಚ್ಚಾಗಿ ಹರಡುತ್ತಿದೆ. ಡೆಲ್ಮಿಕ್ರಾನ್ ಕೊರೋನಾದ ನಂತರದ ಎರಡು ರೂಪಾಂತರವಾಗಿದೆ. ಡೆಲ್ಟಾ ರೂಪಾಂತರ ಮತ್ತು ಓಮಿಕ್ರಾನ್ ರೂಪಾಂತರವನ್ನು ಸಂಯೋಜಿಸುವ ಮೂಲಕ ಡೆಲ್ಮಿಕ್ರಾನ್ ಎಂಬ ಹೆಸರನ್ನು ಪಡೆದಿದೆ ಎಂದಿದ್ದಾರೆ.
ಕೆಮ್ಮು, ಆಯಾಸ, ಮೂಗು ಸೋರುವಿಕೆಯು ಡೆಲ್ಮಿಕ್ರಾನ್‌ನ ಲಕ್ಷಣವಾಗಿದೆ. ಸದ್ಯ ಜನವರಿ ಮತ್ತು ಫೆಬ್ರವರಿಯಲ್ಲಿ ಒಮಿಕ್ರಾನ್ ಹರಡುವಿಕೆ ಅತ್ಯಧಿಕವಾಗಲಿದೆ ಎಂದು ಸಹ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel