ಎರಡು ತಾಲೂಕುಗಳನ್ನು ಸಂಪರ್ಕ ಮಾಡುವ ಗ್ರಾಮೀಣ ರಸ್ತೆಯೊಂದರ ಅಭಿವೃದ್ಧಿಗಾಗಿ ಇಲ್ಲಿನ ಜನರಿ ಮನವಿ ಮೇಲೆ ಮನವಿ ಸಲ್ಲಿಸುತ್ತಲೇ ಇದ್ದರು. ಹೀಗಾದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಹೀಗಾಗಿ ಪ್ರಧಾನಿ ಕಚೇರಿವರೆಗೂ ಮನವಿ ತಲಪಿತ್ತು. ಇದೀಗ ಮತ್ತೆ ನೂತನ ಸಂಸದರಿಗೂ ಮನವಿ ಮಾಡಿದ್ದಾರೆ ಜನರು. ರಸ್ತೆ ದುರಸ್ತಿಯಾದೀತೇ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.…..ಮುಂದೆ ಓದಿ….
ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಬೆಸೆಯುವ ಪರ್ಲಿಕಜೆ-ಮಾವಿನಕಟ್ಟೆ ರಸ್ತೆ ಅಭಿವೃದ್ಧಿಗಾಗಿ ಎರಡು ದಶಕಗಳಿಂದ ಬೇಡಿಕೆ ಇದೆ. ಜನರು ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದರು. ಆದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಈ ರಸ್ತೆ ಸುಳ್ಯ ತಾಲೂಕಿನ ಪರ್ಲಿಕಜೆ, ಜಬಳೆ, ನಿಡುಬೆ, ಕೊಚ್ಚಿ ಮುಖಾಂತರ ಪುತ್ತೂರು ತಾಲೂಕಿನ ದುಗ್ಗಳ, ಮಾವಿನಕಟ್ಟೆ, ಕಲ್ಲರ್ಪೆ ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಸುಳ್ಯ ತಾಲೂಕು ವ್ಯಾಪ್ತಿಗೆ ಸೇರುವ ರಸ್ತೆ ಐವರ್ನಾಡು ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟರೆ, ಪುತ್ತೂರು ಭಾಗದ ರಸ್ತೆ ಕೊಳ್ತಿಗೆ ಗ್ರಾ.ಪಂ ಅಧೀನಕ್ಕೆ ಬರುತ್ತದೆ. ಎರಡೂ ಪಂಚಾಯತ್ ವ್ಯಾಪ್ತಿಗೆ ಸುಮಾರು ಐದು ಕಿ.ಮೀ ರಸ್ತೆ ಕಚ್ಚಾ ರಸ್ತೆಯಾಗಿದೆ. ಹೀಗಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಪಂಚಾಯತ್ ಮಟ್ಟದಲ್ಲಿ ಈ ರಸ್ತೆಯನ್ನು ದುರಸ್ತಿ ಮಾಡುವಷ್ಟು ಅನುದಾನವೂ ಇಲ್ಲ.ಸುಮಾರು 24 ವರ್ಷಗಳ ಹಿಂದೆ ಗ್ರಾಮ ಸಡಕ್ ಯೋಜನೆಯ ಈ ರಸ್ತೆಯ ಸ್ವಲ್ಪ ಭಾಗ ಡಾಂಬರೀಕರಣಗೊಂಡಿತ್ತು. ಆದರೀಗ ಹಾಕಿ ಡಾಂಬರು ಎದ್ದು ಹೋಗಿ ಸಂಚರಿಸಲು ಸಾಧ್ಯವಾಗದಷ್ಟು ಕೆಟ್ಟು ಹೋಗಿದೆ.
ಹೀಗಾಗಿ ಹಲವಾರು ಸಮಯಗಳಿಂದ ತಾಲೂಕುಗಳನ್ನು ಸಂಪರ್ಕ ಮಾಡುವ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಜನರು ಬಯಸಿದರು. ಎರಡೂ ಕ್ಷೇತ್ರದ ಪ್ರತಿನಿಧಿಗಳಿಗೆ ಸಂಪರ್ಕ ಮಾಡಿದ್ದರು. ಆದರೆ ಪ್ರಯೋಜನ ಶೂನ್ಯ. ಹೀಗಾಗಿ ಪ್ರಧಾನಿ ಕಚೇರಿಗೂ ಮನವಿ ಮಾಡಿದ್ದರು. ಸ್ಪಂದನೆ ಬಂದಿದ್ದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಇದೀಗ ನೂತನ ಸಂಸದ ಬ್ರಿಜೇಶ್ ಚೌಟ ಅವರಿಗೂ ಮನವಿ ಮಾಡಿದ್ದಾರೆ ಇಲ್ಲಿನ ಜನರು.
ಈ ಮನವಿಯಲ್ಲಿ ಹೀಗೆ ಹೇಳಿದ್ದಾರೆ, ಸುಳ್ಯ ತಾಲೂಕಿನ ಪರ್ಲಿಕಜೆ, ನಿಡುಬೆ, ಜಬಳೆ, ಕೊಚ್ಚಿ, ದುಗ್ಗಳ- ಕಲ್ಲರ್ಪೆ- ಮಾವಿನಕಟ್ಟೆ ಮುಖಾಂತರ ಪುತ್ತೂರು ತಾಲೂಕನ್ನು ಸಂಪರ್ಕಿಸುವ ರಸ್ತೆ ಸ್ಥಳೀಯ ನಾಗರಿಕರಿಗೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಹುಮುಖ್ಯವಾದ ಮತ್ತು ಏಕಮಾತ್ರ ಸಂಪರ್ಕ ರಸ್ತೆಯಾಗಿದ್ದು, ಸ್ಥಳೀಯರಿಗೆ ಯಾವುದೇ ಪರ್ಯಾಯ ವ್ಯವಸ್ಥೆಗಳಿರುವುದಿಲ್ಲ.
ಈ ರಸ್ತೆ ಉದ್ದ 11 ಕಿ.ಮೀಗಳಿದ್ದು, ಅದರಲ್ಲಿ ಸುಳ್ಯ ತಾಲೂಕಿನ 4 ಕಿ.ಮೀ. ಮತ್ತು ಪುತ್ತೂರು ತಾಲೂಕಿನ 4 ಕಿ.ಮೀ. ಡಾಮರು ಮೇಲ್ವೆಯನ್ನು ಹೊಂದಿರುತ್ತದೆ. ಉಳಿಕ 3 ಕಿ.ಮೀ ರಸ್ತೆಯು ಅರಣ್ಯ ವ್ಯಾಪ್ತಿಯಲ್ಲಿ ಬರುವುದಾಗಿದೆ. ಅದರ ಪೈಕಿ ಸುಳ್ಯ ತಾಲೂಕಿನ ಸುಳ್ಯ ತಾಲೂಕು ವ್ಯಾಪ್ತಿಯ 4 ಕಿ.ಮೀ ನಲ್ಲಿ 1ಕಿ.ಮೀ ಸುಮಾರು 22 ವರ್ಷಗಳ ಹಿಂದೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಡಾಮರೀಕರಣಗೊಂಡಿರುತ್ತದೆ. ಉಳಿಕ 3 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಡಾಮರೀಕರಣಗೊಳಿಸಬೇಕಾಗಿ ಸ್ಥಳೀಯರು ಹಲವು ಬಾರಿ ಸಂಬಂಧಿತ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದು. ಯಾವುದೇ ರೀತಿಯ ಸ್ಪಂದನೆ ದೊರೆತಿರುವುದಿಲ್ಲ. ಈ ರಸ್ತೆಯು ಸುಳ್ಯ ತಾಲೂಕಿನ ಪರ್ಲಿಕಜೆ, ನಿಡುಬೆ, ಜಬಳೆ, ಕುದುಂಗು, ಕೊಚ್ಚಿ ಪ್ರದೇಶಗಳಿಗೆ. ಮತ್ತು ಪುತ್ತೂರು ತಾಲೂಕಿನ ದುಗ್ಗಳ, ಕಲ್ಲರ್ಪೆ, ಮಾವಿನಕಟ್ಟೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಸುಳ್ಯ ತಾಲೂಕಿನಿಂದ ಪುತ್ತೂರು ತಾಲೂಕಿನ ಸಂರ್ಪ ಕಲ್ಪಿಸುವ ರಸ್ತೆಯಾಗಿದ್ದು. ಈ ಭಾಗದ ರಬ್ಬರ್ ನಿಗಮದ ಸಿ.ಆರ್.ಸಿ. ಕಾಲನಿಯ ನಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಸುಮಾರು 600 ಮನೆಗಳನ್ನು ಒಳಗೊಂಡ ಈ ಪ್ರದೇಶದ ಸುಮಾರು 3,000 ಕ್ಕೂ ಹೆಚ್ಚು ನಿವಾಸಿಗಳಿಗೆ ತಮ್ಮ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವರೇ ಅತೀ ಅಗತ್ಯವಾದ ಸಂಪರ್ಕ ರಸ್ತೆಯಾಗಿರುತ್ತದೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರಿಂದ ಈ ಪ್ರದೇಶದ ಎಲ್ಲಾ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ”.
ಈ ರಸ್ತೆ ದುರಸ್ತಿಯಾದರೆ ಇಲ್ಲಿನ ಜನರಿಗೆ ಮಾತ್ರವಲ್ಲ, ಎರಡು ತಾಲೂಕುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗವೂ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಸೇರಿದಂತೆ ಅನೇಕರಿಗೆ ಉಪಯೋಗ ಇದೆ ಎನ್ನುತ್ತಾರೆ ಗ್ರಾಮಸ್ಥರಾದ ಮುರಳೀಧರ ಕೊಚ್ಚಿ.
For the past twenty years, there has been a persistent demand for the improvement of the Parlikaje-Mavinakatte road that connects Sullia and Puttur taluks. Despite continuous appeals to both representatives and officials, the road has yet to be repaired.
There has been a longstanding desire among the people to construct a road connecting the taluks. The individual in charge reached out to the representatives of both constituencies, but unfortunately, no progress was made. Consequently, an appeal was made to the Prime Minister’s Office, but despite a response, the road remains unrepaired. Now, the community has turned to the new MP, Brijesh Chowta, for assistance.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…