ಒಂದೇ ಬ್ಯಾಟರಿ…. ಸ್ಕೂಟರ್‌ ಸಹಿತ ಹಲವು ಕೃಷಿ ಉಪಕರಣ ಚಾಲೂ…! | ಪಂಜದಲ್ಲಿ ಪ್ರಾತ್ಯಕ್ಷಿಕೆ |

December 21, 2023
10:25 PM
ಬ್ಯಾಟರಿ ಮೂಲಕ ವಿವಿಧ ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆ.

ಒಂದೇ ಬ್ಯಾಟರಿ ಉಪಯೋಗಿಸಿ ವಿವಿಧ ಕೃಷಿ ಉಪಕರಣ ಚಾಲೂ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ ಸುಳ್ಯ ತಾಲೂಕಿನ ಪಂಜದಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ನೇತೃತ್ವದಲ್ಲಿ  ನಡೆಯಿತು. ಶಿರಸಿಯ ಅಮೋಘ ಇ ಮೋಟರ್ಸ್‌ ಸಂಸ್ಥೆಯ ಸಿಬಂದಿಗಳು ಪ್ರಾತ್ಯಕ್ಷಿಕೆ ನಡೆಸಿದರು.

Advertisement
Advertisement

Advertisement

ಬ್ಯಾಟರಿ ಚಾಲಿತ ವಾಹನಗಳು ಈಗ ಕೃಷಿಯಲ್ಲೂ ಬಳಕೆಗೆ ಅನಿವಾರ್ಯ ಎಂಬ ಅಂಶವನ್ನು ಮನಗಂಡು ಅಮೋಘ ಇ ಮೋಟರ್ಸ್‌ ಸಂಸ್ಥೆಯ ಸಂತೋಷ್‌ ಹೆಬ್ಬಾರ್‌ ಅವರು ಕಳೆದ 3 ವರ್ಷಗಳಿಂದ ಆವಿಷ್ಕಾರ ನಡೆಸಿ ಇದೀಗ ಇ ಕಾರ್ಟ್‌ ವಾಹನಗಳನ್ನು ಕೃಷಿಕರಿಗಾಗಿ ತಯಾರಿಸಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ರೈತರಿಗೆ ನೀಡಿದ್ದಾರೆ. ಬ್ಯಾಟರಿ ಮೂಲಕ ಎಚ್‌ಡಿಪಿ ಸ್ಪ್ರೇಯರ್‌, ಟ್ರಾಲಿ, ಮರ ತುಂಡರಿಸುವ ಯಂತ್ರ, ಬ್ರಶ್‌ ಕಟ್ಟರ್‌, ಕಳೆ ಕತ್ತರಿಸುವ ಯಂತ್ರ, ಮಿನಿ ಟಿಲ್ಲರ್‌, ಗ್ರೈಂಡಿಂಗ್‌ ಯಂತ್ರ ಸೇರಿದಂತೆ ಬಹುತೇಕ ಎಲ್ಲಾ ಕೃಷಿ ಯಂತ್ರಗಳನ್ನು ಚಾಲೂ ಮಾಡುವಂತೆ ಆವಿಷ್ಕಾರವನ್ನು ಮಾಡಿದ್ದಾರೆ. ಇ ಕಾರ್ಟ್‌ ಮೂಲಕ ಸುಮಾರು 4 ಕ್ವಿಂಟಾಲ್‌ ಭಾರವನ್ನು ಹೊತ್ತೊಯ್ಯುವ ವಾಹನವನ್ನೂ ತಯಾರಿಸಿದ್ದಾರೆ.

Advertisement

Advertisement

ಸುಳ್ಯ ತಾಲೂಕಿನ ಪಂಜದ ನಾಗಮಣಿ ಕೆದಿಲ ಅವರ ತೋಟದಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ನೇತೃತ್ವದಲ್ಲಿ ನಡೆದ ಪ್ರಾತ್ಯಕ್ಷಿಕೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಅವರು ಉದ್ಘಾಟಿಸಿ, ಕೃಷಿಯಲ್ಲಿ ಯಂತ್ರಗಳ ಬಳಕೆ, ಹೊಸ ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಗಿದೆ. ಭವಿಷ್ಯದ ಯುವ ಕೃಷಿಕರಿಗೆ ಹೊಸ ತಂತ್ರಜ್ಞಾನಗಳನ್ನು ತಂದಿಡಲು ಯುವಕರೇ ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ಇಂತಹ ಯಂತ್ರಗಳಲ್ಲಿ ಹೊಸತನವನ್ನು ತರಲು, ಸುಧಾರಣೆಯನ್ನು ತರಲು ಕೃಷಿಕರು ಸಕಾರಾತ್ಮವಾದ ಅಭಿಪ್ರಾಯವನ್ನು ತಿಳಿಸುವುದರ ಜೊತೆಗೆ ಆವಿಷ್ಕಾರಗಳು ಇನ್ನಷ್ಟು ನಡೆಯುವಂತಾಗಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಮಾತನಾಡಿ ರೈತ ಉತ್ಪಾದಕ ಕಂಪನಿಯು ರೈತರಿಗೆ ಅನುಕೂಲವಾಗುವ ಯಂತ್ರಗಳು, ಸುಲಭ ಸಾಧನಗಳು, ಕೃಷಿಯಲ್ಲಿ ಹೊಸತನದ ಬಗೆಗಿನ ಅರಿವನ್ನು ತೆರೆದಿಡುವ ಕೆಲಸ ಮಾಡುತ್ತಿದೆ. ಕೃಷಿಕರು ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿಸುವಲ್ಲಿ ರೈತ ಉತ್ಪಾದಕ ಸಂಸ್ಥೆ ಕೆಲಸ ಮಾಡುತ್ತದೆ ಎಂದರು.

Advertisement

ಅಮೋಘ ಇ ಮೋಟರ್ಸ್‌ ಸಂಸ್ಥೆಯ ಸಂತೋಷ್‌ ಹೆಬ್ಬಾರ್‌ ಮಾತನಾಡಿ, ಕೃಷಿ ಕುಟುಂಬದಿಂದ ಬಂದಿದ್ದು ಇಂಜಿನಿಯರ್‌ ಆಗಿ ರೈತರಿಗೆ ಅನುಕೂಲವಾಗುವ ಕೆಲಸ ಸತತ ಪ್ರಯತ್ನದ ಮೂಲಕ ಮಾಡಿದ್ದೇವೆ. ರೈತರ ಅಭಿಪ್ರಾಯವನ್ನು ಪಡೆದುಕೊಂಡು ಮುಂದೆ ಹೊಸ ಆವಿಷ್ಕಾರ ಮಾಡಲಿದ್ದೇವೆ ಎಂದರು.

ದೇವಸ್ಯ ಕಮ್ಯುನಿಕೇಶನ್‌ ಮಾಲಕ ಜಯಂತ್‌ ದೇವಸ್ಯ ಮಾತನಾಡಿ, ಕಳೆದ ಕೆಲ ಸಮಯಗಳಿಂದ ಬ್ಯಾಟರಿ ಚಾಲಿತ ವಾಹನಳನ್ನು ನಾವು ಬಳಕೆ ಮಾಡುತ್ತಿದ್ದೇವೆ. ಒಂದೇ ಬ್ಯಾಟರಿ ಬಳಸಿಕೊಂಡು ಸ್ಕೂಟರ್‌ ಹಾಗೂ ಕೃಷಿಯ ಎಲ್ಲಾ ಉಪಕರಣ ಚಾಲೂ ಮಾಡಲು ಸಾಧ್ಯವಿದೆ ಎಂದರು.

Advertisement

ವೇದಿಕೆಯಲ್ಲಿ ಕೃಷಿಕರಾದ ನಾಗಮಣಿ ಕೆದಿಲ ಉಪಸ್ಥಿತರಿದ್ದರು. ಪ್ರಾತ್ಯಕ್ಷಿಕೆಯಲ್ಲಿ ಕೃಷಿಕರು ಭಾಗವಹಿಸಿದರು.

Advertisement

Realizing the fact that, battery operated vehicles are now necessarily  use in agriculture as well, Santosh Hebbar of Amogha E Motors has innovated for the past 3 years and has now manufactured e-cart vehicles for farmers.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಏನಾಗುತ್ತದೆ…? | ಯಾರಿಗಾದರೂ ಮಾಹಿತಿ ಇದೆಯೇ..? |
September 25, 2024
12:41 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 25-09-2024 | ಸೆ. 28ರಿಂದ ಮಳೆ ಕಡಿಮೆ | ರಾಜ್ಯದಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರಿಕೆ |
September 25, 2024
12:18 PM
by: ಸಾಯಿಶೇಖರ್ ಕರಿಕಳ
ದ.ಕ. ಜಿಲ್ಲೆಯಲ್ಲಿ ಕೃಷಿ ಸಂಸ್ಕರಣಾ ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪಿಸಿ | ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಮನವಿ‌ |
September 24, 2024
9:36 PM
by: ದ ರೂರಲ್ ಮಿರರ್.ಕಾಂ
 ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ | ಕೆ.ಜಿ.ಗೆ 35 ರೂಪಾಯಿಯಂತೆ ಈರುಳ್ಳಿ ಮಾರಾಟ
September 24, 2024
9:05 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror