ದೇಸಿ ತಳಿ ಹಸುಗಳು(Desi cattle) ಒಂದು ಕಾಲದಲ್ಲಿ ತಮ್ಮ ಹೊಟ್ಟೆ ಪಾಡನ್ನು ನಿಸರ್ಗ ದಿಂದಲೇ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಅವು ಸಹಸ್ರ ಲಕ್ಷ ಸಂಖ್ಯೆಯಲ್ಲಿ ತಮ್ಮ ಪಾಡಿಗೆ ತಾವು ಆನಂದವಾಗಿದ್ದವು. ಯಾವಾಗ ಈ ಹಸುಗಳ(cow) ಹೊಟ್ಟೆ ಪಾಡಿಗೆ ಮನುಷ್ಯ ದುಡಿದು ಹಣ ಖರ್ಚು ಮಾಡಿ ಇವುಗಳಿಗೆ ಅಹಾರ ಒದಗಿಸಿ ಪಾಲನೆ ಮಾಡಬೇಕಾದ ಕಾಲ ಬಂದ ನಂತರ ಒಬ್ಬೊಬ್ಬರಾಗಿ ಈ ಕಡಿಮೆ ಉತ್ಪತ್ತಿ ಯ ಈ ಕಾಲಕ್ಕೆ ನಷ್ಟ ದ ಬಾಬತ್ತಿನ ದೇಸಿ ಹಸು ಸಾಕಣೆಗೆ ಗುಡ್ ಬೈ ಹೇಳತೊಡಗಿದರು. ಈಗ ಹಳ್ಳಿಗಳೂ ಮೊದಲಿನಂತೆ ಧಾರಾಳವಾಗಿಲ್ಲ . ಎಲ್ಲರೂ ಲೆಕ್ಕಾಚಾರದವರೇ ಆಗಿದ್ದಾರೆ.
ಸುಮ್ಮನೆ ಗೋವು ಪೂಜನೀಯ ಪ್ರಾಣಿ ಸಾಕಿ .. ಎಂದು ಸಲಹೆ ನೀಡಿದರೆ ಯಾರೂ ಸಾಕೋಲ್ಲ. ಕನಿಷ್ಠ ಜಾನುವಾರುಗಳ ಹೊಟ್ಟೆ ಪಾಡಿನ ಹಣವಾದರೂ ಅವುಗಳ ನಿರ್ವಾಹಕ ಗೋಪಾಲಕರಿಗೆ ದೊರೆತರೆ ಈಗಲೂ ಗೋಪಾಲನೆ ಸಾದ್ಯ. ಸಾಮಾನ್ಯ ಗೋಪಾಲಕರಿಗೆ (ದೇಸಿ ತಳಿ ಗೋ ಪರಿಪಾಲಕರು) ಸಗಣಿ ಗೋಮೂತ್ರದ ಸಂಕಲನದ ಉತ್ತಮ ಸಾವಯವ ಗೊಬ್ಬರ ಕ್ಕೆ ಬೆಲೆ ಬಂದರೆ ಮಾತ್ರ ದೇಸಿ ತಳಿ ಗೋಪಾಲನೆ ಮಾಡ್ತಾರೆ. ಈ ದೇಸಿ ತಳಿ ಹಸುಗಳ ಬಗ್ಗೆ ಇರುವ ಗೋಪ್ರೀತಿ ಗೋಪಾಲಕರಿಗೆ ಲೆಕ್ಕಾಚಾರ ದಲ್ಲಿ ನಷ್ಟ ವಾದರೂ ಗೋಪಾಲನೆ ಮಾಡುತ್ತಿದ್ದಾರೆ.
ಆಗಲಿ ದೇಸಿ ದನಗಣತಿ : ಯಾರು ದೇಸಿ ತಳಿ ಗೋಪಾಲನೆ ಮಾಡುತ್ತಿದ್ದಾರೆ ಎಂಬುದನ್ನು ಪ್ರತಿ ಗ್ತಾಮ ಪಂಚಾಯತಿ ವ್ಯಾಪ್ತಿಯಲ್ಲೂ "ದೇಸಿ ದನ ಗಣತಿ" ಮಾಡಿ ಅವರಿಗೆ ವಿಶೇಷ ನೆರವನ್ನು ಸರ್ಕಾರ ಮತ್ತು ಸಮಾಜ ಮಾಡಬೇಕು. ಇದೆಲ್ಲಾ ಗ್ರಾಮ ಪಂಚಾಯತಿ ಮಟ್ಟದಿಂದ ಪ್ರಯತ್ನ ಮಾಡಿದರೆ ಸಾಧ್ಯ. ಇಂತಹ ದೇಸಿ ತಳಿಗಳನ್ನೇ ಸಾಕುವವರ ಮನೆಯ ಕೊಟ್ಟಿಗೆ ಗೊಬ್ಬರಕ್ಕೆ ಹೆಚ್ಚು ಬೆಲೆ ನಿಗದಿ ಪಡಿಸಿ ಆಸಕ್ತ ಕೃಷಿಕರು ಕೊಂಡು ಪರೋಕ್ಷವಾಗಿ ಗೋಪಾಲಕರಿಗೆ ಸಹಾಯ ಮಾಡಬಹುದು.
ಹಿಂದೂಗಳಲ್ಲಿ “ಗೋದಾನ” ಕ್ಕೆ ವಿಶೇಷ ಮಹತ್ವ ಇದೆ. ಗೋತ್ರ ಎಂಬ ಪದ ಹುಟ್ಟಲು ಈ ಗೋದಾನ ದ ದೊಡ್ಡ ಪಾತ್ರವಿದೆ. ಸಾವಿರಾರು ವರ್ಷ ಗಳಿಂದ ಈ ದೇಶದಲ್ಲಿ ಗೋ ಆಧಾರಿತ ಮತ್ತು ಕೃಷಿ ಆಧಾರಿತ ಜೀವನ ನೆಡೆಸುತ್ತಿದ್ದದ್ದು ಇದಕ್ಕೆ ಸಾಕ್ಷಿ. ನಮ್ಮಲ್ಲಿ ಕೆಲವು ಜಾತಿ ಜನಾಂಗದಲ್ಲಿ ಸತ್ತ ಹಿರಿಯರ ಸದ್ದತಿಗಾಗಿ ಗೋದಾನ ಕೊಡುವ ಪರಿಪಾಠ ವಿದೆ. ಆದರೆ ಈಗ ಗೋದಾನ “ಹಿಡಿಯುವವರ”. ಸಂಖ್ಯೆ ಕಡಿಮೆಯಾಗಿದೆ. ಅದಕ್ಕೆ ಈಗ “ಜೀವಂತ” ಗೋದಾನ ದ ಬದಲಾಗಿ “ಬೆಳ್ಳಿ ” ಬಂಗಾರದ ” ಗೋವಿನ ಅಕೃತಿಯ ಗೋದಾನ ನೀಡುತ್ತಿದ್ದಾರೆ. ಇದು ನಿಲ್ಲಬೇಕು. ಹೀಗೆ ದಾನ ಕೊಡುವವರು ತಮ್ಮ ಸಮೀಪದ ವ್ಯಾಪ್ತಿಯಲ್ಲಿ ದೇಸಿ ತಳಿ ಹಸುಗಳನ್ನು ಸಾಕಣೆ ಮಾಡುವವರಿಗೆ ಗೋದಾನದ ಮೊತ್ತದ ಹಣವನ್ನು ಇಲ್ಲವೇ ಗೋ ಗ್ರಾಸ (ಹಿಂಡಿ, ಒಣ ಹುಲ್ಲು, ಸೈಲೇಜ್) ಗಳನ್ನು ಕೊಡಬಹುದು .
ದಯಮಾಡಿ ಯಾರೂ ಬೆಳ್ಳಿ ಬಂಗಾರದ ಗೋದಾನ ಕೊಡಬೇಡಿ. ಇದೊಂದು ಕೆಟ್ಟ ಪರ್ಯಾಯ. ಜೀವಂತ ದೇಸಿ ತಳಿಯ ಗೋವುಗಳೂ ಮತ್ತು ಈ ಗೋವುಗಳನ್ನ ಪಾಲನೆ ಮಾಡುವ ಗೋಪಾಕರೂ ಇನ್ನೂ ಈ ಭೂಮಿಯ ಮೇಲಿದ್ದಾರೆ. ಹೀಗೆ ಗೋಪಾಲನೆ ಮಾಡುವವರು ಯಾವುದೇ ಜಾತಿ ಜನಾಂಗದವರಾಗಲಿ ಅವರಿಗೆ ಗೋದಾನದ ಬಾಬ್ತು ಮುಟ್ಟಿಸಿ “ಗೋದಾನ” ದ ಸಾರ್ಥಕತೆಯನ್ನ ದಾನಿಗಳು ಪಡೆಯಬೇಕು. ನಮ್ಮ ಸಮಾಜದ ಐಷಾರಾಮಿ ಮದುವೆ ಹಬ್ಬಗಳ ಸಂಧರ್ಭದಲ್ಲಿ ದುಂದು ಮಾಡುವವರು ಈ ದುಂದಿನಲ್ಲಿ ಕಿಂಚಿತ್ತಾದರೂ ಹಣವನ್ನು ಸಮೀಪದ ಗೋಪಾಲಕರಿಗೆ ನೀಡಿ ಗೋಪಾಲನೆಯನ್ನು ಪ್ರೋತ್ಸಾಹಿಸಬೇಕು.
ಇದೆಲ್ಲಾ ಸಾಧ್ಯತೆ ಇದೆ : ಇವತ್ತು ನಮ್ಮ ಸಮಾಜದಲ್ಲಿ ಈ ಇಪ್ಪತ್ತೈದು ವರ್ಷಗಳ ಹಿಂದಿನ ಆರ್ಥಿಕ ಬಡತನ ಇಲ್ಲ. ಜನಗಳ ಬಳಿ ಬೇಕಾದಷ್ಟು ಹಣ ಇದೆ. ನಮ್ಮ ಜನ ದಾನ ಧರ್ಮ ಎಂಬುದನ್ನು ಈ ಕಾಲಕ್ಕೆ ಅಪ್ ಡು ಡೇಟ್ ಮಾಡಿಕೊಂಡರೆ ಈ ಕಾಲಕ್ಕೆ ನಿಜವಾದ “ಆರ್ತ , ಕಷ್ಟ ದ ಜೀವಿಗಳಾದ ದೇಸಿ ಗೋ ತಳಿ ಸಂವರ್ಧನೆಗೆ ” ಬಹಳ ದೊಡ್ಡ ಸಹಾಯವಾಗುತ್ತದೆ. ಅತ್ಯಂತ ವೇಗವಾಗಿ ಅಳಿವಿನತ್ತ ಸಾಗುತ್ತಿರುವ ದೇಸಿ ತಳಿ ಗೋವುಗಳು ಉಳಿಯಲಿ… ಈ ಗೋವುಗಳನ್ನ ಉಳಿಸಲು ತಮ್ಮ ಬದುಕನ್ನು ಸವೆಸುತ್ತಿರುವ ಗೋಪಾಕರಿಗೆ ಶಕ್ತಿ ಯನ್ನು ಈ ಶ್ರೀಮಂತ ಸಂಸ್ಕೃತಿಯ ಸಮಾಜ ಸಹಾಯ ಹಸ್ತ ಚಾಚಲಿ ಎಂದು ಹೃದಯ ಪೂರ್ವಕ ವಾಗಿ ಬೇಡುತ್ತಿದ್ದೇನೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…